ಮಹಿಷ - ಸತ್ಯ ಮತ್ತು ಮಿಥ್ಯ ✍🏽 ಲಕ್ಷ್ಮೀಪತಿ ಕೋಲಾರ





ದ್ರಾವಿಡ ಭಾಷಿಕರನ್ನೂ ಸೇರಿಸಿಕೊಂಡಂತೆ, ಒಟ್ಟಾರೆ ಭಾರತೀಯರ ವಿಲಕ್ಷಣ ತಿಳಿವಳಿಕೆಯ ಬಹುದೊಡ್ಡ ಸಮಸ್ಯೆ ಏನೆಂದರೆ ಪುರಾಣ-ಮಹಾಕಾವ್ಯಗಳನ್ನೇ ಇತಿಹಾಸ ಅಂತ ನಂಬುವುದು! ಈ ನೆಲದ ಇಂದಿನ ಕೋಮುವಾದೀ ದುರಂತಗಳು ಮತ್ತವು ಉಂಟುಮಾಡಿರುವ ತಲ್ಲಣ, ದುಗುಡಗಳಿಗೆ ಈ ಬಗೆಯ ಮೌಢ್ಯದ ಮನಃಸ್ಥಿತಿಯೇ ಬಹುಮುಖ್ಯ ಕಾರಣವಾಗಿದೆ. ಕೆಲವು ಪುರಾಣ- ಮಹಾಕಾವ್ಯಗಳಿಗೆ ಚರಿತ್ರೆಯ ಕೆಲವಂಶಗಳು ಪ್ರಭಾವ ಬೀರಿ ಪ್ರೇರಣೆ ನೀಡಿರಬಹುದಾದರೂ ಪುರಾಣಗಳು ಖಂಡಿತ ನೇರ ಇತಿಹಾಸವಲ್ಲವೇ ಅಲ್ಲ.

ಇತ್ತೀಚಿನ ಕೆಲ ವರ್ಷಗಳಿಂದ ಮೈಸೂರಿನ ಪ್ರಗತಿಪರ ಮಿತ್ರರ `ಮಹಿಷ ದಸರ’ ಸುದ್ದಿ ಮಾಡುತ್ತಿದೆ. ಮಹಿಷಾಸುರ, ಮಹಿಷಮಂಡಲ ಮತ್ತು ಮಹಿಷಾಸುರ ಮರ್ದಿನಿ ಪುರಾಣಕ್ಕೆ ಸಂಬಂಧಿಸಿದಂತೆ ಕೆಲವು ಚಾರಿತ್ರಿಕವೆಂದು ಹೇಳಲಾಗುವ ಅಂಶಗಳನ್ನು ಮುನ್ನೆಲೆಗೆ ತಂದು ಅಚಾರಿತ್ರಿಕವಾದ ನಿರೂಪಣೆಯೊಂದನ್ನು ಮಂಡಿಸಲಾಗುತ್ತಿದೆ. ಅವರ ಉದ್ದೇಶ ಒಳ್ಳೆಯದಾದರೂ, ಅಸಮಂಜಸವಾದ ಆಚರಣೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆಂಬುದೇ ನನ್ನ ಖಂಡಿತವಾದ ಅಭಿಮತ. ಈ ನೆಲದಲ್ಲಿ ಸಂಭವಿಸಿದ, ಸಂಭವಿಸುತ್ತಿರುವ ಸಂಸ್ಕೃತಿ ಮತ್ತು ಧಾರ್ಮಿಕ ನೆಲೆಗಳಲ್ಲಿನ ವಿರೂಪಗೊಳಿಸಲ್ಪಟ್ಟ ಪಲ್ಲಟಗಳು, ವೈದಿಕಶಾಹಿಯ ಸಾಂಸ್ಕೃತಿಕ ವಸಾಹತುಶಾಹಿ ದೆಸೆಯಿಂದ ತಿರುಚಲ್ಪಟ್ಟ ಐತಿಹಾಸಿಕ ಸಂಗತಿಗಳಿಗೆ ಸಂಬಂಧಿಸಿದಂತೆ ಜವಾಬ್ದಾರಿಯುತವಾದ ಸಂಸ್ಕೃತಿ ಚಿಂತಕರು ಖಂಡಿತ ಚಾರಿತ್ರಿಕ ಸಾಕ್ಷö್ಯಧಾರಗಳ ಮೂಲಕ ವಾಸ್ತವತೆಗೆ ಹತ್ತಿರದ ಹೊಸ ಹಾಗೂ ಮೂಲ ನಿರೂಪಣೆಗಳನ್ನು ಮಂಡಿಸಲೇಬೇಕಾದ ಒತ್ತಡ ಮತ್ತು ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಜಟಿಲ ಸವಾಲುಗಳನ್ನು ಒಡ್ಡಿವೆಯೆಂಬುದು ನಿಜ. ಆದರೆ ನಮ್ಮಂತಹವರು ಕೂಡ ವಿರೂಪಗಳಿಗೆ ಪ್ರತಿಯಾಗಿ ಮತ್ತೊಂದು ವಿರೂಪಗೊಂಡ ನಿರೂಪಣೆಯ ಸಮರ್ಥಕರಾಗಿ ನಿಂತುಬಿಟ್ಟರೆ ನಮ್ಮ ಸಂಸ್ಕೃತಿ ಹೋರಾಟಗಳ ಬಗೆಗಿನ ಆತ್ಮವಿಶ್ವಾಸವು ದುರ್ಬಲಗೊಂಡು, ನಾವು ಜನಶಕ್ತಿಯ ಬೆಂಬಲವನ್ನೂ ಕಳೆದುಕೊಳ್ಳುತ್ತೇವೆ. ಅದರೊಂದಿಗೆ ಮುಂದಿನ ದಿನಗಳ ನಮ್ಮ ಸಂಸ್ಕೃತಿ ಇತಿಹಾಸದ ಕುರಿತ ಸತ್ಯನಿಷ್ಠ ನಿರೂಪಣೆಗಳನ್ನೂ ಸಮಾಜ ಅನುಮಾನಿಸುವುದರೊಂದಿಗೆ ಕ್ರಿಯಾತ್ಮಕವಾಗಿ ಸ್ಪಂದಿಸದೇ ಹೋಗಬಹುದಾದ ಅಪಾಯಗಳು ಕೂಡ ಇಲ್ಲದೇ ಇಲ್ಲ. ನಾವು ಎಂದೆಂದಿಗೂ ಸತ್ಯ ಪಕ್ಷಪಾತಿಗಳಾಗಿ, ಎಂತಹುದೇ ಮುಲಾಜುಗಳಿಗೂ ಒಳಗಾಗದೇ ಸತ್ಯಾಗ್ರಹಿಗಳಾಗಿ ನಿಲ್ಲುತ್ತೇವೆಂಬುದೇ ನಮ್ಮ ನಿಜವಾದ ನೈತಿಕ ಶಕ್ತಿ ಎಂಬ ಮಹತ್ವದ ಅಂಶವನ್ನು ನಾವು ಮರೆಯಲೇಬಾರದಲ್ಲವೇ? ಪುರಾಣ ಸೃಷ್ಠಿಯ ಪಾತ್ರವಾದ ಮಹಿಷಾಸುರ ದ್ರಾವಿಡ ಮೂಲದ ನಮ್ಮವನು ಅಂತ ನಂಬಿರುವುದರ ಹಿಂದಿನ ಭಾವುಕ ಹಾಗೂ ದುರ್ಬಲ ಕಾರಣಗಳು ಬಹುಶಃ ಇವಾಗಿರಬಹುದು:
೧. ವೈದಿಕರಿಗಿಂತಲೂ ಪ್ರಾಚೀನರಾದ ದ್ರಾವಿಡರು ಮತ್ತು ದ್ರಾವಿಡಪೂರ್ವ ಮೂಲನಿವಾಸಿ ಬುಡಕಟ್ಟುಗಳು ಹಾಗೂ ಒಟ್ಟಾರೆ ಶೈವ ಮೂಲದವರನ್ನು ಕಕೇಷಿಯನ್ ಆರ್ಯ ವೈದಿಕರು ತಮ್ಮ ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಅಸುರರು, ದಾನವರು ಮತ್ತು ರಾಕ್ಷಸರು ಎಂಬಂತೆ ಕೆಡುಕಿನ ದುಷ್ಟ ಪಾತ್ರಗಳನ್ನಾಗಿ ಚಿತ್ರಿಸುವುದರ ಮೂಲಕ ಜನಾಂಗೀಯ ಅಸಹನೆಯ ನೆಲೆಯಲ್ಲಿ ಅಪಮಾನಿಸಿದ್ದಾರೆ ಎಂಬ ಸರಳ ಸಮೀಕರಣದ ತಪ್ಪು ಗ್ರಹಿಕೆಗಳು. ದಾಸ, ದಸ್ಯು, ಶಂಬರ, ನಿಷಾದ, ಅಯಜ್ಞೇಯ ಮತ್ತು ಅನಿಂದ್ರರು ಅಂತ ದೂಷಿಸಿದ್ದಾರೆ ಎಂಬ ಆಧಾರವಿಲ್ಲದ, ಅಚಾರಿತ್ರಿಕ ಗ್ರಹಿಕೆಗಳು. ದಾಸ ಮತ್ತು ದಸ್ಯುಗಳು ಕೂಡ ಭಿನ್ನ ಆರ್ಯ ಪಂಗಡಗಳೆ. ಸು_ದಾಸ, ದಿವೋದಾಸ ಮತ್ತು ತ್ರಸದಸ್ಯು ಇತ್ಯಾದಿಗಳನ್ನು ಗಮನಿಸಬಹುದು.
೨. ಮಹಿಷ ಎಂದರೆ ಎಮ್ಮೆ ಅಥವ ಕೋಣ ಅಂತಿರುವುದರಿಂದಲೂ ಮತ್ತು ಎಮ್ಮೆ/ ಕೋಣಗಳು ತಳ ಸಂಸ್ಕೃತಿಯ ಪ್ರತೀಕವೆಂಬ ಗ್ರಹಿಕೆಯ ಹಿನ್ನೆಲೆಯಲ್ಲಿಯೂ ಮಹಿಷಾಸುರ ಖಂಡಿತ ದ್ರಾವಿಡ ಮೂಲದವನೇ ಆಗಿರಬೇಕೆಂಬ ಮೇಲ್ನೋಟದ ದುರ್ಬಲ ತರ್ಕ-ತೀರ್ಮಾನಗಳಿಗೆ ಬಂದು ತಲುಪಿರುವುದು. ಯಮನ ವಾಹನವೂ ಕೋಣವೇ. ಕೇರಳದಲ್ಲಿ ವಿಷ್ಣುಮಾಯ ಎಂಬುದಾಗಿ ವೈದಿಕೀಕರಣಗೊಂಡಿರುವ ಕುಟ್ಟಿ ಚಾತ್ತನ್‌ನ ವಾಹನವೂ ಕೋಣವೇ. ನೀಲಗಿರಿ ತೋಡರ ಕುಲಮೂಲ ಸಂಸ್ಕೃತಿಯ ಪ್ರಧಾನ ಭಾಗವೇ ಕೋಣ. ಮಹಿಷ ಹೆಸರಿನ ಬುಡಕಟ್ಟುಗಳೂ ಉತ್ತರ ಭಾರತದಲ್ಲಿವೆ. ಅನೇಕ ಸಮುದಾಯಗಳ ಕುಲ ಬೆಡಗುಗಳಾಗಿಯೂ ಕೋಣ/ ಎಮ್ಮೆ ಇರುವುದನ್ನೂ ನಾವು ಬಲ್ಲೆವು. ಆದರೆ ಇರ್ಯಾರೂ ತಮ್ಮ ಕುಲವನ್ನು ಹೀನೈಸಲಿಕ್ಕಾಗಿಯೇ ಮಹಿಷಾಸುರ ಮರ್ದಿನಿ ಪುರಾಣವನ್ನು ಸೃಷ್ಟಿಸಲಾಗಿದೆಯೆಂದು ಭಾವಿಸಿಲ್ಲ. ಆಸ್ಟೊçÃ-ಏಷಿಯಾಟಿಕ್‌ನ ಸಮುದಾಯಗಳಲ್ಲಿ `ಅಸುರ’ ಎಂಬ ಬುಡಕಟ್ಟೊಂದು ಜಾರ್ಖಂಡ್‌ನಲ್ಲಿದ್ದು, ಅವರು ಕೂಡ ಮಹಿಷಾಸುರ ತಮ್ಮ ಕುಲಮೂಲದ ಆದಿಪುರುಷನೆಂದೇ ಭ್ರಮಿಸಿ ಪ್ರತೀವರ್ಷವೂ ಮಹಿಷ ದಸರ ಆಚರಿಸುತ್ತಿದ್ದಾರೆ. ಏಕಕಾಲಕ್ಕೇ ಎರಡು ಪ್ರದೇಶಗಳಲ್ಲಿ ಮಹಿಷಾಸುರನಿರುವುದು ಸಾಧ್ಯವಿಲ್ಲದಿರುವಂತೆಯೇ, `ಅಸುರ’ - `ಮಹಿಷ’ ಎಂಬ ಬುಡಕಟ್ಟುಗಳ ಹೆಸರುಗಳು ಕೂಡ ಸಂಸ್ಕೃತ ಮೂಲದ ಹೆಸರುಗಳಾಗಿದ್ದು, ಆ ಬುಡುಕಟ್ಟುಗಳ ಮೇಲೆ ಹೇರಲ್ಪಟ್ಟಿರಬೇಕು, ಇಲ್ಲವೇ ಸಾಂಸ್ಕೃತೀಕರಣದ ಅನುಕರಣಶೀಲತೆಯ ಫಲವಾಗಿರಬೇಕು. ಇನ್ನು ತಮಿಳಿನ ಸಂಗಂ ಸಾಹಿತ್ಯದಲ್ಲಿ ಪ್ರಾಚೀನ ಮೈಸೂರು ಪ್ರದೇಶವನ್ನು ಎರುಮೈನಾಡು ಎಂದು ಹೆಸರಿಸಿರುವುದರಿಂದ ಮಹಿಷಾಸುರ ಈ ಪ್ರದೇಶದವನೇ ಆಗಿರಬೇಕೆಂಬ ತರ್ಕವೂ ಕಟ್ಟುಕಥೆಗೆ ನೀರೆರೆದಿದೆ.
೩. ಕೊನೆಯದಾಗಿ, ಅಶೋಕ ಸಾಮ್ರಾಟನು ಬೌದ್ಧ ಧರ್ಮದ ಪ್ರಸಾರಕ್ಕೆಂದು ಮಹದೇವ ತೇರಾ ಎಂಬ ಭಿಕ್ಕುವನ್ನು ಮಹಿಷಮಂಡಲಕ್ಕೆ ಅರ್ಥಾತ್ ಮೈಸೂರು ಪ್ರಾಂತ್ಯಕ್ಕೆ ನಿಯೋಜಿಸಿದನಾಗಿ, ಆತ ಇಲ್ಲಿಗೆ ಬಂದು ಆರ್ಯಾವರ್ತದ ಆರ್ಯ ರಾಜರುಗಳ ಮೇಲೆ ಯುದ್ಧ ಮಾಡಿ ದ್ರಾವಿಡ ಸಾಮ್ರಾಜ್ಯವನ್ನು ಕಟ್ಟಿದ ಎಂಬಂಶ. ಈ ಹಿನ್ನೆಲೆಯಲ್ಲಿ ಈ ಮಹದೇವ ತೇರಾ ಅಥವಾ ಮಹಿಷಾಸುರನನ್ನು ಹೀನೈಸುವ ಸಲುವಾಗಿಯೇ ಮಹಿಷಾಸುರ ಮರ್ದಿನಿ ಪುರಾಣವನ್ನು ರೂಪಿಸಲಾಗಿದೆಯೆಂಬ ಮತ್ತೊಂದು ತಾಳ-ಮೇಳ ಕೂಡದ ಕಟ್ಟುಕಥೆ. ಈ ಮೂರು ಅಂಶಗಳು ಖಂಡಿತ ಚಾರಿತ್ರಿಕವಾದ ಗಟ್ಟಿ ಆಧಾರಗಳ ಮೇಲೆ ರೂಪುಗೊಂಡ ಗಂಭೀರ ಅಧ್ಯಯನಗಳಾಗಿಲ್ಲ ಎಂಬುದೇ ಮಹಿಷ ದಸರ ಪರಿಕಲ್ಪನೆಯ ಬಹುಮುಖ್ಯ ಲೋಪವಾಗಿದೆ. ಈ ಹಿನ್ನೆಲೆಯಲ್ಲಿಯೇ ಮಹಿಷ ದಸರ, ಮಹಿಷಮಂಡಲ ಹಾಗೂ ಮಹಿಷಾಸುರ ಮರ್ದಿನಿ ಪುರಾಣಗಳಿಗೆ ಸಂಬಂಧಿಸಿದಂತೆ ಚಾರಿತ್ರಿಕ ಸತ್ಯದ ಕೆಲವಂಶಗಳೊಂದಿಗೆ ಇಲ್ಲಿ ಚರ್ಚಿಸುವ ಪ್ರಯತ್ನ ನಡೆಸಲಾಗಿದೆ.
ಮೈಸೂರಿನ ಪುನ್ನಾಟರು ಮತ್ತು ಚರಿತ್ರ:
ಮೈಸೂರಿನ ಚರಿತ್ರೆ ಪ್ರಾರಂಭವಾಗುವುದೇ ಕ್ರಿ.ಪೂ. ಪುನ್ನಾಟ ಎಂಬ (ಬುಡಕಟ್ಟು ಮೂಲ!) ರಾಜವಂಶದ ಆಳ್ವಿಕೆಯಿಂದಲೇ. ಪುನ್ನಾಟರು ಬಹುಶಃ ಕ್ರಿ.ಪೂ. ೩ನೇ ಶತಮಾನದಿಂದ ಆರಂಭಿಸಿ, ಕ್ರಿ.ಶ. ೧೪ನೇ ಶತಮಾನದವರೆಗೂ ಅಲ್ಪ ಪ್ರಮಾಣದಲ್ಲಾದರೂ ಕರ್ನಾಟಕದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಇದ್ದರೆಂಬುದಕ್ಕೆ ಸಾಕ್ಷಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕ್ರಿ.ಶ. ೧೩೨೦ರ ಶಿವಪುರ ಶಾಸನ ಪುನ್ನಾಟರ ಬಗ್ಗೆ ಪ್ರಸ್ತಾಪಿಸಿರುವುದನ್ನು ಗಮನಿಸಬಹುದು. ಹೆಗ್ಗಡದೇವನ ಕೋಟೆಯ `ಕಿತ್ತಿಪುರ’ (ಅಂದಿನ ಕೀರ್ತಿಪುರವಿಂದು ಕಿತ್ತೂರಾಗಿದೆ) ವನ್ನು ಪುನ್ನಾಟರು ತಮ್ಮ ರಾಜಧಾನಿಯನ್ನಾಗಿಸಿಕೊಂಡಿದ್ದರು. ಕೇರಳದ ಕೆಲಭಾಗಗಳು, ಕೊಯಮತ್ತೂರು, ಕೊಡಗು, ಮೈಸೂರು ಪ್ರದೇಶ, ಹಾಸನ ಹಾಗೂ ದಕ್ಷಿಣ ಕನ್ನಡದೊಂದಿಗೆ ಪೂರ್ವದತ್ತ ಬೆಂಗಳೂರಿನವರೆಗೂ ಪುನ್ನಾಟರ ರಾಜ್ಯ ವಿಸ್ತರಿಸಿಕೊಂಡಿತ್ತು. ಕ್ರಿ.ಪೂ. ೩ನೇ ಶತಮಾನದಲ್ಲಿ ಜೈನಮುನಿ ಭದ್ರಬಾಹು ಭಟಾರರು (ಕ್ರಿ.ಪೂ.೨೯೦-೯೭) ವಿಶಾಖ ಎಂಬಾತನ ನೇತೃತ್ವದಲ್ಲಿ ಜೈನ ಮುನಿಗಳ ತಂಡವೊಂದನ್ನು ಜೈನ ಧರ್ಮದ ಪ್ರಸಾರಕ್ಕಾಗಿ ಪುನ್ನಾಟ ದೇಶಕ್ಕೆ ಕಳುಹಿಸಿದ್ದರು. ನಂತರ ಜೈನರ ಆ ತಂಡ ಗುಜರಾತಿಗೆ ವಲಸೆ ಹೋಯಿತು. ಇಂದಿಗೂ ಗುಜರಾತಿನಲ್ಲಿ ಜೈನ ಪುನ್ನಾಟ ಸಂಘವು ಚಟುವಟಿಕೆಯೊಂದಿಗೆ ಉಳಿದೇ ಇದೆ. ಹರಿವಂಶ ಪುರಾಣದ ಕರ್ತೃ ಜಿನಸೇನ ಸೂರಿ ತಾನು ಬೃಹತ್ ಪುನ್ನಾಟ ಸಂಘಕ್ಕೆ ಸೇರಿದವನೆಂದು ಹೇಳಿಕೊಂಡಿದ್ದಾನೆ. ಅಂದರೆ, ಕ್ರಿ.ಪೂ. ೩ನೇ ಶತಮಾನದಲ್ಲಿ ಇಂದಿನ ಮೈಸೂರು ಪ್ರದೇಶವನ್ನೇ ಕೇಂದ್ರ ಮಾಡಿಕೊಂಡು ಪುನ್ನಾಟರೆಂಬ ರಾಜವಂಶವೊಂದು ಆಳ್ವಿಕೆ ಮಾಡುತ್ತಿತ್ತು ಎಂಬಂಶವು ನಿರ್ವಿವಾದವಾಗಿ ಸಾಬೀತಾದಂತಾಯಿತು.
ಬೃಹತ್ ಕಥಾ ಕೋಶದಲ್ಲಿ `.....ದಕ್ಷಿಣಾಪಥ ದೇಶಸ್ಥ ಪುನ್ನಾಟ ವಿಷಯ...’ ಎಂಬ ಉಲ್ಲೇಖ ಜೈನ ಧರ್ಮೀಯರಿಗೆ ಸಂಬಂಧಿಸಿದಂತೆಯೇ ಉಲ್ಲೇಖಿಸಲ್ಪಟ್ಟಿದೆ. ಜೈನ ವಲಸೆಗಾರರ ಅಂತಿಮ ಗುರಿಯೇ ಪುನ್ನಾಟ ದೇಶ ಎಂಬ ಮಾತೂ ಬೃಹತ್ ಕಥಾ ಕೋಶದಲ್ಲಿದೆ. ಶ. ಶೆಟ್ಟರ್ ಅವರು ತಮ್ಮ `ಶಂಗಂ ತಮಿಳಗಂ’ ಕೃತಿಯಲ್ಲಿ ಪುನ್ನಾಟರಿಗೂ, ದ್ರಾವಿಡ ಸಂಸ್ಕೃತಿಗೂ ನಡುವಿನ ನಿಕಟತೆಯನ್ನು ವಿವರಿಸಿದ್ದಾರೆ. ಸಂಗಂ ಸಾಹಿತ್ಯದಲ್ಲಿನ ಪುನ್ನಾಟರ ಕುರಿತ ಉಲ್ಲೇಖಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಧೀರಜ್ ಎಂ.ಎಸ್. ಎಂಬುವವರು ಕೇರಳ ಜೈನ ಇತಿಹಾಸದಲ್ಲಿನ ಪುನ್ನಾಟ ದೇಶದ ಪಾತ್ರ ಕುರಿತಂತೆ ಸಂಶೋಧನಾ ಕೃತಿಯೊಂದನ್ನು ಬರೆದಿದ್ದು ಅವರೂ ಪುನ್ನಾಟರ ಕಾಲವನ್ನು ಕ್ರಿ.ಪೂ. ೩ನೇ ಶತಮಾನವೆಂದೇ ನಿರೂಪಿಸಿದ್ದಾರೆ. ವಯನಾಡ್ ಮತ್ತು ಪಾಲಕ್ಕಾಡಿನ ಶಾಸನಗಳಲ್ಲಿ `ಪುನ್ನಾಡ ಅಧಿಗಾರಂ’ ಎಂಬ ಮಾತುಗಳಿವೆ. ಹತ್ತುನಾಡುಗಳಿಗೆ ಸಂಬಂಧಿಸಿದ ಪುನ್ನಾಟವನ್ನು ಪದಿನಾಡು ಅಂತಲೇ ಕರೆಯುತ್ತಿದ್ದುದರೊಂದಿಗೆ, ಅದೇ ಹೆಸರಿನ ಊರು ಈಗಲೂ ಮೈಸೂರು ಜಿಲ್ಲೆಯಲ್ಲಿದೆ. ಶ್ರೀಲಂಕಾದ ಬೌದ್ಧ ಗ್ರಂಥ ಮಹಾವಂಶವೂ ಪುನ್ನಾಟರ ಬಗ್ಗೆ ಉಲ್ಲೇಖಿಸಿದೆ. ಶೆಕ್ಕಿಳಾರರ ಪೆರಿಯ ಪುರಾಣಂ `ಪೊನಲ್ ಎನ್ನಾಳುಂ ಪೊಯ್ಯಾದು ಅಳಿಕ್ಕುಂ ಪುನ್ನಾಡು’ ಎಂಬ ಮಾತನ್ನು ಹೇಳಿದೆ. ಅದರರ್ಥ `ನಿರಂತರವಾಗಿ ನದಿನೀರಿನ ಕೃಷಿ/ನೀರಾವರಿಗೆ ಒಳಪಟ್ಟ ಪ್ರದೇಶ ಪುನ್ನಾಟ’ ಎಂದು.

ಮಂಡ್ಯ ಜಿಲ್ಲೆಯ ಮಾಂಬಳ್ಳಿ ಹಾಗೂ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೊಮರಲಿಂಗಂನ ತಾಮ್ರ ಶಾಸನಗಳು `ಕಬಿನಿ ಮತ್ತು ಕಾವೇರಿ ನದಿಗಳ ನಡುವಿನ ಪ್ರದೇಶವೇ ಪುನ್ನಾಟ ರಾಜ್ಯ’ ಎಂಬ ಮಾಹಿತಿಯನ್ನು ನೀಡುತ್ತವೆ. ಕ್ರಿ.ಶ: ೨೩ರಲ್ಲಿ ಭೂಗೋಳ ಶಾಸ್ತಜ್ಞ ಪ್ಲೀನಿ ಮತ್ತು ಕ್ರಿ.ಶ. ೧೨೭ರಲ್ಲಿ ಟಾಲೆಮಿ ಅವರು `ಪೌನ್ನಾಟ’ದ ಬಗ್ಗೆ ಮಾಹಿತಿ ನೀಡಿ, ಅಲ್ಲಿ ಸಿಗುವ ಪಚ್ಚೆ ಕಲ್ಲುಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಪೂರ್ವದಲ್ಲಿ ಕೆಆರ್‌ಎಸ್ ಪ್ರದೇಶ ಹಾಗೂ ಕೊಯಮತ್ತೂರು ಸುತ್ತಮುತ್ತ ಪಚ್ಚೆ ಕಲ್ಲುಗಳು ಸಿಗುತ್ತಿದ್ದವಂತೆ. ತಲಕಾಡು ಗಂಗರು ೪ನೇ ಶತಮಾನದ ಹೊತ್ತಿಗೆ ತಾವೂ ಈ ಪ್ರದೇಶದಲ್ಲಿ ರಾಜ್ಯ ಸ್ಥಾಪಿಸಿದರು. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ದೊರೆತ ತಲಕಾಡು ಗಂಗರ ೬ನೇ ಶತಮಾನದ ತಾಮ್ರ ಶಾಸನವು ಗಂಗರ ಅವಿನೀತ ದೊರೆ ಪುನ್ನಾಟರ ರಾಜಕುಮಾರಿ ಜ್ಯೇಷ್ಠಾಳನ್ನು ವಿವಾಹವಾದದ್ದರ ಬಗ್ಗೆ ಉಲ್ಲೇಖಿಸಿದೆ. ಅಂದರೆ ಕ್ರಿ.ಪೂ. ೩ರಿಂದ ೬ನೇ ಶತಮಾನದವರೆಗೂ ಪುನ್ನಾಟರು ಈ ಭಾಗದಲ್ಲಿದ್ದರು ಎಂಬುದು ಖಚಿತವಾಗುತ್ತದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕದಲೂರು ಎಂಬಲ್ಲಿ ದೊರೆತಿರುವ ಕ್ರಿ.ಶ. ೮೬೨ರ ತಾಮ್ರ ಶಾಸನವೇ ಮೈಸೂರು ಬಗೆಗಿನ ಪ್ರಪ್ರಥಮ ಉಲ್ಲೇಖವಾಗಿದ್ದು ಅದರಲ್ಲಿ `ಮಯ್‌ಸೂರು’ ಎಂಬ ಉಲ್ಲೇಖವೇ ಕಂಡುಬಂದಿದೆ. ನಂತರ ಹೊಯ್ಸಳರ ಕ್ರಿ.ಶ. ೧೧ ಮತ್ತು ೧೨ನೇ ಶತಮಾನದ ಶಾಸನಗಳಲ್ಲೂ `ಮಯಿಸುನಾಡು’, `ಮಯಿಸೂರುನಾಡು’ ಎಂಬ ಉಲ್ಲೇಖಗಳೇ ಇವೆ. `ಮಯಿಸೂರು’ ಎಂಬ ಈ ಪ್ರಾಚೀನ ಸ್ಥಳನಾಮದ ನಿಷ್ಪತ್ತಿ ಮೂಲವನ್ನು ಹುಡುಕಿದಲ್ಲಿ ಮಯ್ > ಮೈ (Mai) ಎಂಬ ದ್ರಾವಿಡ ಮೂಲದ ಧಾತು ಬಹುಶಃ ನಮಗೆ ನೆರವಾಗಬಲ್ಲದು ಎನಿಸುತ್ತದೆ. `ಮಯ್ʼ ಎಂದರೆ ತಮಿಳಿನಲ್ಲಿ ಕಪ್ಪು, ನೀರು ಮತ್ತು ಪಟ್ಟಣಗಳೆಂಬ ಅರ್ಥಗಳು ದೊರೆಯುತ್ತವೆ. ಈ ಧಾತುವಿನಿಂದ ಸಾಧಿತವಾಗುವ ಪದಗಳಲ್ಲಿ `ಮಯಿಚೂರುʼ ಅರ್ಥಾತ್ ಪಟ್ಟಣ ಎಂಬುದೂ ಒಂದು. ವಿವಿಧ ಇತಿಹಾಸಕಾರರ ವಿವರಣೆಗಳನ್ನೂ ಗಮನದಲ್ಲಿರಿಸಿಕೊಂಡು ಹೇಳುವುದಾದಲ್ಲಿ - ಮಯ್ > ಮಯಿಚೂರು > ಮಯಿಸೂರು > ಮೈಸೂರು ಎಂಬ ನಿಷ್ಪತ್ತಿ ವಿವರಣೆಯೇ ಸತ್ಯಕ್ಕೆ ಹೆಚ್ಚು ಸಮೀಪದ್ದಾಗಿ ನನಗೆ ತೋಚುತ್ತಿದೆ. ದ್ರಾವಿಡ ಭಾಷಾಮೂಲದ `ಮಯಿಸೂರು’ ಎಂಬುದೇ ಅತೀ ಪ್ರಾಚೀನ ಸ್ಥಳನಾಮವಾಗಿರುವುದರಿಂದ, ಈ ಪದದಿಂದ ನಾವು ಹೇಗೂ `ಮಹಿಷೂರು’ ಎಂಬ ಸಂಸ್ಕೃತ ಭಾಷಾ ಮೂಲದ ಸ್ಥಳನಾಮವನ್ನು ಸಾಧಿಸುವುದು ಖಂಡಿತ ಅಸಂಭವನೀಯ. `ಎರುಮೈಯೂರು’ ಎಂಬ ಸಂಗಂ ಸಾಹಿತ್ಯದಲ್ಲಿನ ಉಲ್ಲೇಖವು ಕೂಡ `ಮಹಿಷೂರು’ ಎಂಬ ಸಂಸ್ಕೃತ ಭಾಷೆಯ ಸ್ಥಳನಾಮವೊಂದು ರೂಪುಗೊಳ್ಳಲು ನೆರವು ನೀಡಿರಬಹುದಾದ ಸಾಧ್ಯತೆ ಖಂಡಿತ ಇಲ್ಲವೆಂದೇ ಅನಿಸುತ್ತಿದೆ. ಯಾಕೆಂದರೆ ಎರುಮೈ ಎಂದರೆ ಎಮ್ಮೆ ಎಂಬರ್ಥವೇ ಪ್ರಧಾನವಾದುದು. ಎಮ್ಮೆ ಎಂಬ ಇಂದಿನ ಕನ್ನಡ ಪದ ಸಾಧಿತವಾದದ್ದೇ ಪ್ರಾಚೀನ ಕನ್ನಡದಲ್ಲೂ ಬಳಕೆಯಲ್ಲಿದ್ದ ಎರುಮೈ ಎಂಬ ಪದದಿಂದಲೇ. Common gender ಆಗಿಯೂ ಸಾಂದರ್ಭಿಕವಾಗಿ ಬಳಕೆಗೊಂಡಿದ್ದರೂ, ಕೋಣ ಅಥವ ಮಹಿಷಕ್ಕೆ ತಮಿಳಿನಲ್ಲಿ `ಆಣ್ ಎರುಮೈ’ ಎಂಬ ನಿರ್ದಿಷ್ಟ ಪದದ ಪ್ರಯೋಗವೇ ಇದೆಯೆಂಬುದನ್ನೂ ನಾವು ಗಮನದಲ್ಲಿರಿಸಿಕೊಳ್ಳಲೇಬೇಕು. ಆಣ್ ಎಂದರೆ ತಮಿಳಿನಲ್ಲಿ ಗಂಡು ಎಂಬರ್ಥವಿದೆ.

ಉಳಿದಂತೆ ಹೊಯ್ಸಳ ವಿಷ್ಣುವರ್ಧನನ(ಕ್ರಿ.ಶ.೧೧೨೭) ಶಾಸನವೊಂದರಲ್ಲಿ ಇಂದಿನ ಚಾಮುಂಡಿ ಬೆಟ್ಟವನ್ನು `ಮಹಾಬಲತೀರ್ಥ’ ಎಂದೇ ಉಲ್ಲೇಖಿಸಲಾಗಿದೆ. ಮಹಾಬಲಾದ್ರಿ, ಮಹಾಬಲಾಚಲವೆಂದೂ ಕರೆಯಲಾಗುತ್ತಿತ್ತು. ಯಾಕೆಂದರೆ ಕ್ರಿ.ಶ. ೯೫೦ರ ಸುಮಾರಿಗೇ ಬೆಟ್ಟದ ದೇವರಾಗಿದ್ದದ್ದು ಮಹಾಬಲೇಶ್ವರನಾದ ಶಿವನೇ. ನಂತರ ೧೨ನೇ ಶತಮಾನದಲ್ಲಿ ಹೊಯ್ಸಳರು (ಬಹುಶಃ ವಿಷ್ಣುವರ್ಧನ) ಸಣ್ಣ ಪ್ರಮಾಣದ ಚಾಮುಂಡಿ ಗುಡಿಯನ್ನು ಸ್ಥಾಪಿಸಿದರು. ವಿಜಯನಗರದರಸರು ವಿಮಾನ ಗೋಪುರ ಹಾಗೂ ಪ್ರಾಕಾರಗಳೊಂದಿಗೆ ದೇವಾಲಯವನ್ನು ವಿಸ ್ತರಿಸಿದರು. ದೊಡ್ಡ ದೇವರಾಜ ವಡೆಯರ್ ಅವರು ೧೬೫೦ರಲ್ಲಿ, ಅಂದರೆ ಇಂದಿಗೆ ಕರಾರುವಾಕ್ಕಾಗಿ ೩೭೨ ವರ್ಷಗಳ ಹಿಂದಷ್ಟೇ ಮಹಿಷಾಸುರನ ಪ್ರತಿಮೆಯನ್ನು ಸ್ಥಾಪಿಸಿದರು. ಅಂದರೆ, ೧೨ನೇ ಶತಮಾನದವರೆಗೂ ಮಯಿಸೂರಿಗೂ ಚಾಮುಂಡಿಗೂ ಯಾವುದೇ ಸಂಬಂಧವೂ ಇರಲಿಲ್ಲ. ಹಾಗೆಯೇ ಕೇವಲ ೩೭೦ ವರ್ಷಗಳ ಹಿಂದೆ ಮಹಿಷಾಸುರನಿಗೂ ಮಯಿಸೂರಿಗೂ ಕೂಡ ಸಂಬಂಧವಿರಲೇ ಇಲ್ಲ. ಕೇವಲ ೧೬ನೇ ಶತಮಾನದಿಂದೀಚೆಗಷ್ಟೇ ಮೈಸೂರನ್ನು `ಮಹಿಷೂರು’ ಅಂತ ಕರೆಯುವ ಪದ್ಧತಿ ಆರಂಭವಾಯಿತೆಂದು ಬಿ.ಎಲ್.ರೈಸ್ ಅವರೂ ಅಭಿಪ್ರಾಯಪಟ್ಟಿದ್ದಾರೆ. ಇತಿಹಾಸದ ವಾಸ್ತವ ಹೀಗಿರುವಾಗ ಮೈಸೂರು ಎಂಬ ಊರಿನ ಅಸ್ತಿತ್ವವೇ ಇಲ್ಲದಿದ್ದ ಕ್ರಿ.ಪೂ. ೩ನೇ ಶತಮಾನದಲ್ಲೇ ಮಹಿಷಾಸುರ ಇಲ್ಲಿ ಪ್ರಬಲ ದ್ರಾವಿಡ ಸಾಮ್ರಾಜ್ಯ ಕಟ್ಟಿದನೆಂದೂ, ಆ ಕಾರಣದಿಂದಲೇ ಮಹಿಷೂರು > ಮೈಸೂರು ಎಂದಾಯಿತೆಂಬುದು ಎಷ್ಟರ ಮಟ್ಟಿಗೆ ಸರಿ? ಮಹಿಷಾಸುರನಿಗೆ ವೈದಿಕರು ದ್ರೋಹ ಬಗೆದದ್ದೇ ನಿಜವಾಗಿದ್ದಲ್ಲಿ ಮಹಿಷೂರಿಗೆ ಬದಲಾಗಿ ಈಗದು ಚಾಮುಂಡಿಪುರವಾಗಿರಬೇಕಿತ್ತಲ್ಲವೇ?
ಮಹಿಷ ಮಂಡಲ ಎಲ್ಲಿದೆ?
ಮೈಸೂರು ಕ್ರಿ.ಪೂ. ದಿಂದ ಹಿಡಿದು ಇತಿಹಾಸದಲ್ಲಿ ಎಂದೂ ಮಹಿಷಮಂಡಲವಾಗಿರಲೇ ಇಲ್ಲ. ನಿಜಕ್ಕೂ ಮಹಿಷಮಂಡಲವೆಂಬುದು ಯಾವುದು? ಅದು ಇರುವುದಾದರೂ ಎಲ್ಲಿ? ಪುರಾಣಗಳು ಹಾಗೂ ಐತಿಹಾಸಿಕ ದಾಖಲೆಗಳು ಈ ಬಗ್ಗೆ ವಿಪುಲ ಸಾಕ್ಷಾಧಾರಗಳನ್ನು ಒದಗಿಸಬಲ್ಲವು.
(ಎ) ಹರಿವಂಶವು ಮಾಹಿಷ್ಮತಿಯ ಸ್ಥಾಪಕನಾದವನು ಹೈಹಯ ವಂಶದ ಮಾಹಿಷ್ಮಂತ್ ಎಂಬಾತ ಎಂದು ದಾಖಲಿಸಿದೆ. ಹೈಹಯ ರಾಜವಂಶದವರು ಇತಿಹಾಸದಲ್ಲೆಂದೂ ಮೈಸೂರು ಪ್ರದೇಶವನ್ನು ಆಳಿದರೆಂಬುದಕ್ಕೆ ಯಾವ ಚಾರಿತ್ರಿಕ ದಾಖಲೆಗಳೂ ಇಲ್ಲ.
(ಬಿ) ಬೌದ್ಧ ಗ್ರಂಥ ದಿಗನಿಕಾಯವು ಮಾಹಿಷ್ಮತಿಯು ಆವಂತಿಯ ರಾಜಧಾನಿ ಎಂದು ಘೋಷಿಸುತ್ತದೆ. ಮಹಾ ಗೋವಿಂದ ಸುತ್ತಾಂತವು ಸಹ ಇದೇ ಮಾಹಿತಿ ನೀಡುತ್ತದೆ.
(ಸಿ) ಕಾಳಿದಾಸನ ರಘುವಂಶವು ಮಾಹಿಷ್ಮತಿಯು ನರ್ಮದಾ ನದಿಯ ದಂಡೆಯಲ್ಲಿದ್ದು ಅನುಪ ದೇಶದ ರಾಜಧಾನಿಯಾಗಿದೆ ಎನ್ನುತ್ತದೆ.
(ಡಿ) ಬೌದ್ಧ ಗ್ರಂಥ ಸುತ್ತನಿಪಾತವು ಭಿಕ್ಕುಗಳು ಪ್ರತಿಷ್ಠಾನದಿಂದ ಉಜ್ಜಯನಿಗೆ ಪ್ರಯಾಣಿಸಿದರೆ ಮಾಹಿಷ್ಮತಿಯು ಮಾರ್ಗಮಧ್ಯದಲ್ಲಿ ಸಿಗುತ್ತದೆ ಎಂದು ತಿಳಿಸುತ್ತದೆ.
(ಇ) ಬುದ್ಧಘೋಷನು ಈ ಮಾಹಿಷ್ಮತಿಯನ್ನು ಮಹಿಷಂ, ಮಾಹೀಷಕ ಮಂಡಲ ಎಂದು ಗುರುತಿಸಿದ್ದಾನೆ.
(ಎಫ್) ಹೈಹಯರ ರಾಜ ಕಾರ್ತವರರ್ಜುನನು ತನ್ನ ರಾಜಧಾನಿಯಾದ ಮಾಹಿಷ್ಮತಿಯಿಂದ ಇಡೀ ಪ್ರಪಂಚವನ್ನೇ ಆಳಿದ ಎಂಬ ಪುರಾಣದ ಮಾತನ್ನು ಪಿ.ಕೆ.ಭಟ್ಟಾಚಾರ್ಯರು ದಾಖಲಿಸಿದ್ದಾರೆ.
(ಜಿ) ಪತಂಜಲಿಯು ಪ್ರವಾಸಿಯೊಬ್ಬ ರಾತ್ರಿ ಉಜ್ಜಯಿನಿಯಿಂದ ಪ್ರಯಾಣ ಆರಂಭಿಸಿದಲ್ಲಿ ಆತನು ಮಾಹಿಷ್ಮತಿಯಲ್ಲಿ ಸೂರ್ಯೋದಯವನ್ನು ನೋಡಬಹುದು ಎಂಬ ವಿವರ ನೀಡುತ್ತಾನೆ.
(ಹೆಚ್) ಪರಮಾರದ ದೊರೆ ದೇವಪಾಲ ತನ್ನ ಮಾಂಧಾತ ಶಾಸನದಲ್ಲಿ ತಾನು(ಕ್ರಿ.ಶ.೧೨೨೫) ಮಾಹಿಷ್ಮತಿಯಲ್ಲಿ ತಂಗಿರುವಾಗ ಬ್ರಾಹ್ಮಣನೊಬ್ಬನಿಗೆ ಗ್ರಾಮವೊಂದನ್ನು ದಾನ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
(ಐ) ಸಾಂಚಿಯಲ್ಲಿನ ಶಾಸನವೊಂದು ಮಾಹಿಷ್ಮತಿಯ ಯಾತ್ರಾರ್ಥಿಗಳು ಸಾಂಚಿಸ್ತೂಪಕ್ಕೆ ಭೇಟಿ ನೀಡಿದರೆಂದು ಉಲ್ಲೇಖಿಸಿದೆ.
(ಜೆ) ಬೌದ್ಧ ಧರ್ಮದ ಸರ್ವಾಸ್ತಿವಾದದಿಂದ ೫ ಕುಡಿಯೊಡೆದ ಮಹೀಷಾಸಕ ಶಾಖೆಯು ಹುಟ್ಟಿದ್ದೇ ಆವಂತಿ ಪ್ರದೇಶದಲ್ಲಿನ ಮಾಹಿಷ್ಮತಿಯಲ್ಲಿ. ನಂತರ ಅದು ಆಂಧ್ರಪ್ರದೇಶದಲ್ಲೂ ಹಬ್ಬಿ, ಅಲ್ಲಿ ಮಾಹೀಷ್ಮಕ ಮಂಡಳ ಎಂಬ ಪ್ರದೇಶವಿತ್ತು ಎಂಬುದಾಗಿ ಪಾಲಿ-ಆಂಗ್ಲ ನಿಘಂಟಿನಲ್ಲಿ ಉಲ್ಲೇಖಿಸಲಾಗಿದೆ.
ಪಿ.ಕೆ. ಭಟ್ಟಾಚಾರ್ಯ ಎಂಬ ವಿದ್ವಾಂಸರು ` Historical geography of Madhya pradesh : from early records’ ಎಂಬ ತಮ್ಮ ಸಂಶೋಧನಾ ಗ್ರಂಥದಲ್ಲಿ ತುಂಬಾ ಸ್ಪಷ್ಟವಾಗಿ ಮಹಿಷಮಂಡಲ ಅಥವ ಮಾಹಿಷ್ಮತಿ ಎಂಬ ನಗರವು ಆವಂತಿ ರಾಜ್ಯದಲ್ಲಿತ್ತು ಎಂದಿರುವರಲ್ಲದೆ ವಿಂಧ್ಯ ಪರ್ವತಗಳ ಉತ್ತರಕ್ಕೆ ಉಜ್ಜಯಿನಿಯೂ ಮತ್ತು ದಕ್ಷಿಣಕ್ಕೆ ಮಾಹಿಷ್ಮತಿಯೂ ಇರುವುದಾಗಿ ಹೇಳಿದ್ದಾರೆ. ಜೊತೆಗೆ ನರ್ಮದಾ ನದಿಯ ದಂಡೆಯ ಮೇಲಿದೆ ಎಂದು ನಿಖರ ಮಾಹಿತಿ ನೀಡಿದ್ದಾರೆ. ಇಂದಿಗೂ ಮಾಹಿಷ್ಮತಿ ನಗರವು ತನ್ನ ಪ್ರಾಚೀನ ಕೋಟೆ, ಅರಮನೆಗಳೊಂದಿಗೇ ಮಾಹೇಶ್ವರ ಎಂಬ ಹೆಸರಿನ ನಗರವಾಗಿಯೇ ಉಳಿದಿದೆ. ಪ್ರಾಚೀನ ಭಾರತದ ನಕ್ಷೆಗಳಲ್ಲಿಯೂ ಮಾಹಿಷ್ಮತಿ ನಗರವನ್ನು ನರ್ಮದೆ ನದಿಯ ದಂಡೆಯ ಮೇಲೇ ಗುರುತಿಸಲಾಗಿರುವುದನ್ನು ಕೂಡ ಗಮನಿಸಬಹುದು. ಇಷ್ಟೆಲ್ಲಾ ದಾಖಲೆ, ಆಧಾರಗಳಿದ್ದರೂ ದಕ್ಷಿಣದ ಮೈಸೂರನ್ನೇ ಮಹಿಷಮಂಡಲ ಅಂತ ಕರೆವ ಅಥವ ಗುರುತಿಸುವ ತಪ್ಪು ಹೇಗೆ ನಡೆಯಿತು? ಈ ಅನಾಹುತಕ್ಕೆ ಕಾರಣವಾದದ್ದು ಕೇವಲ ಬಿ.ಎಲ್.ರೈಸ್ ಅವರ ಒಂದು ತಪ್ಪು ಗ್ರಹಿಕೆಯೇ.
ಮಹಾಭಾರತದಲ್ಲಿ `ಸಹದೇವ ಕಾವೇರಿ ನದಿಯನ್ನು ದಾಟಿ ಮಾಹಿಷ್ಮತಿ ನಗರವನ್ನು ತಲುಪಿದ’ ಎಂಬ ಮಾತಿದೆ. ಕಾವೇರಿ ನದಿಯ ಉಲ್ಲೇಖವನ್ನಷ್ಟೇ ಗಮನಿಸಿದ ಬಿ.ಎಲ್.ರೈಸ್ ಅವರು ಕೂಡಲೇ ಹಿಂದುಮುಂದು ಯೋಚಿಸದೆ ಕಾವೇರಿ ನದಿಯ ಬಳಿ ಇರುವ ಮೈಸೂರನ್ನೇ ಮಹಿಷಮಂಡಲ ಎಂದು ಗುರುತಿಸಿಬಿಟ್ಟರು. ಬಿ.ಎಲ್. ರೈಸರ ಈ ಪ್ರಮಾದವೆಂಬಂತಹ ತಪ್ಪುಗ್ರಹಿಕೆಯೇ ಇತಿಹಾಸದಲ್ಲಿ ಮುಂದುವರೆದುಕೊಂಡು ಬಂದ್ದದ್ದರ ಫಲವೇ ಮಹಿಷೂರು, ಮಹಿಷ ದಸರ ಇತ್ಯಾದಿಗಳು. ಪಿ.ಕೆ. ಭಟ್ಟಾಚಾರ್ಯರು ರೈಸರ ಈ ತಪ್ಪು ಗ್ರಹಿಕೆಯನ್ನು ಸರಿಪಡಿಸುತ್ತಾ, `ದಕ್ಷಿಣದಲ್ಲಿ ಕಾವೇರಿ ನದಿ ಇರುವುದೆಂಬ ಮಾತು ನಿಜವಾದರೂ, ನರ್ಮದಾ ನದಿಗೂ ಕಾವೇರಿ ಎಂಬ ಹೆಸರಿನ ಉಪನದಿಯೊಂದಿದ್ದು, ಅದು ಮಾಂಧಾತ ಎಂಬಲ್ಲಿ ನರ್ಮದಾ ನದಿಯನ್ನು ಕೂಡುತ್ತದೆ; ಸಹದೇವ ದಾಟಿದ್ದು ಈ ಕಾವೇರಿ ನದಿಯನ್ನೇ; ಯಾಕೆಂದರೆ ಆಗ ಮಾಹಿಷ್ಮತಿಯ ರಾಜನಾಗಿದ್ದ ನೀಲನನ್ನು (ಈತ ಅಗ್ನಿದೇವನ ಮಾವ) ಸೋಲಿಸಿದ ಸಹದೇವ ಸಮೀಪದಲ್ಲಿದ್ದ ಸೌರಾಷ್ಟçದತ್ತ(ಗುಜರಾತ್) ತೆರಳಿದ ಎಂಬ ಮುಂದುವರೆದ ಮಾತು ಮಹಾಭಾರತದಲ್ಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಿ.ಎಲ್.ರೈಸರ ತಪ್ಪು ಗ್ರಹಿಕೆಯಿಂದಷ್ಟೇ ಮೈಸೂರು ಮಹಿಷಮಂಡಲವಾಯಿತೇ ಹೊರತು, ಇಂದಿಗೂ ಮಾಹಿಷ್ಮತಿ ಯಾ ಮಹಿಷಮಂಡಲವು ಮಾಹೇಶ್ವರವೆಂಬ ಬದಲಾದ ಹೆಸರಿನೊಂದಿಗೆ ಮಧ್ಯಪ್ರದೇಶದ ಉತ್ತರ ಭಾಗದಲ್ಲಿನ ನರ್ಮದಾ ನದಿಯ ದಂಡೆಯಲ್ಲೇ ಇದೆ. ಇಲ್ಲೇ ಸ್ಪಷ್ಟಪಡಿಸಬೇಕಾದುದೇನೆಂದರೆ ಈ ಐತಿಹಾಸಿಕ ಪ್ರಮಾದದೊಂದಿಗೆ ಮೈಸೂರನ್ನು ಆಳಿದ ವಿವಿಧ ರಾಜವಂಶಗಳವರ ಕಾಕತಾಳೀಯವೆಂಬಂತಹ ಕೊಡುಗೆಗಳು ಕೂಡ ಮೇಳೈಸಿ ತಪ್ಪುಗ್ರಹಿಕೆಗೆ ಮತ್ತಷ್ಟು ಬಲ ಕೂಡುವಂತಾಯಿತು.
ಕ್ರಿ.ಶ.೯೫೦ರ ಸುಮಾರಿಗೇ ಮಹಾಬಲಾದ್ರಿ ಬೆಟ್ಟದಲ್ಲಿ (ಈಗದು ಚಾಮುಂಡಿಬೆಟ್ಟ) ಶಿವನ ಮಹಾಬಲೇಶ್ವರ ದೇವಾಲಯವಿತ್ತಷ್ಟೆ. ಹೊಯ್ಸಳರು ಶಿವನ ಹೆಂಡತಿ ಪಾರ್ವತಿಯ ಶಕ್ತಿರೂಪವೇ ಚಾಮುಂಡಿಯಾದ್ದರಿಂದ, ಶಿವದೇವಾಲಯದ ಪಕ್ಕ ಚಾಮುಂಡಿಯ ದೇವಾಲಯವಿರುವುದು ಸರಿಯೆಂಬ ನಿರ್ಧಾರದೊಂದಿಗೆ ಚಾಮುಂಡಿಯ ಸಣ್ಣ ದೇವಾಲಯ ನಿರ್ಮಿಸಿದರು. ಕ್ರಿ.ಶ.೧೬೫೦ರಲ್ಲಿ ದೊಡ್ಡ ದೇವರಾಜ ವಡೆಯರು ಪಾರ್ವತಿಯ ಎಲ್ಲಾ ಶಕ್ತಿರೂಪಗಳನ್ನೂ ಸಮಾನವೆಂಬಂತೆ ನೋಡುವ ಪರಿಪಾಠ ರೂಢಿಯಲ್ಲಿದ್ದುದ್ದರಿಂದ, ಬಹುಶಃ ಚಾಮುಂಡಿಯನ್ನೇ ಮಹಿಷಾಸುರ ಮರ್ದಿನಿ ಎಂದು ಭಾವಿಸಿ ಅದೇ ಬೆಟ್ಟದಲ್ಲಿ ಮಹಿಷಾಸುರನ ಪ್ರತಿಮೆಯನ್ನು ನಿಲ್ಲಿಸಿದರು. ಬಿ.ಎಲ್.ರೈಸರ ತಪ್ಪು ಗ್ರಹಿಕೆಯ ಪ್ರಮಾದಕ್ಕೆ ಹೊಯ್‌ಕೈಯ್ಯಾಗಿ ದೊಡ್ಡ ದೇವರಾಜ ವಡೆಯರ ತಪ್ಪು ಗ್ರಹಿಕೆಯೂ ಸೇರಿ ಇತಿಹಾಸದ ಅಪಚಾರ ಸರಣಿ ಮುಂದುವರೆಯಿತೆನ್ನಬಹುದು. ಯಾಕೆಂದರೆ, ಪುರಾಣಗಳ ಪ್ರಕಾರ ಮಹಿಷಾಸುರನನ್ನು ಕೊಂದದ್ದು ದುರ್ಗಿಯೇ ಹೊರತು ಚಾಮುಂಡಿಯಲ್ಲ. ಇಂದಿಗೂ ನವರಾತ್ರಿಯಂದು ಪಶ್ಚಿಮ ಬಂಗಾಳದಲ್ಲಿ ನಡೆಯವುದು ದುರ್ಗಿ ಪೂಜೆಯೇ ಹೊರತು ಚಾಮುಂಡಿ ಪೂಜೆಯಲ್ಲ. ಚಂಡ-ಮುಂಡರನ್ನು ಚಾಮುಂಡಿ ವಧಿಸಿದಳೇ ಹೊರತು, ಮಹಿಷಾಸುರನನ್ನು ವಧಿಸಿದ ಪುರಾಣೋಲ್ಲೇಖವೆಲ್ಲೂ ದೊರೆಯುವುದಿಲ್ಲ. ಪಾರ್ವತಿಯ ಇನ್ನಿತರ ಶಕ್ತಿರೂಪಿಣಿ ಅವತಾರಗಳಾದ ಕಾಳಿ, ತಾರಾ, ತ್ರಿಪುರ ಸುಂದರಿ, ಭೈರವಿ ಅಥವ ಮಾತಂಗಿಯನ್ನೋ ಮಹಿಷಾಸರ ಮರ್ದಿನಿಯರೆನ್ನಲಾದೀತೇ? ಚಾಮುಂಡಿಯಾದರೂ ಅಷ್ಟೇ ತಾನೇ? ಆದರೂ ದೊಡ್ಡ ದೇವರಾಜ ವಡೆಯರ ಶಕ್ತಿ ಸ್ವರೂಪಿಣಿ ದೇವಿಯರ ಕುರಿತ ಸಾಮಾನ್ಯ ಗ್ರಹಿಕೆಯೇ ಜನಮಾನಸದಲ್ಲೂ ಬಲವಾಗಿ ಬೇರೂರಿರುವುದರಿಂದ ಕಾಳಿ, ಚಂಡಿಕಾ, ಚಾಮುಂಡಿ, ದುರ್ಗಿಯರನ್ನೆಲ್ಲಾ ಸಮಾನ ಭಾವ - ಗ್ರಹಿಕೆಯಿಂದಲೇ ನೋಡುವ ಪರಿಪಾಟವೂ ಮುಂದುವರೆಯುತ್ತಲೇ ಬಂದಿದೆ.
ಮಹಿಷಾಸುರ ಮತ್ತು ಬೌದ್ಧ ಧರ್ಮ :
ಕ್ರಿ.ಪೂ.೨೫೦ರ ಆಸುಪಾಸಲ್ಲಿ ಅಶೋಕ ಸಾಮ್ರಾಟರು ಮಹದೇವ ತೇರಾನನ್ನು (ಈತ ನಾಲ್ಕು ಕೊಲೆಗಳನ್ನು ಮಾಡಿ ಪಶ್ಚಾತ್ತಾಪಗೊಂಡು ಬೌದ್ಧನಾದವನು) ಮಹಿಷಮಂಡಲಕ್ಕೂ ಹಾಗೂ ರಖ್ಖಿತ ಎಂಬ ಭಿಕ್ಕುವನ್ನು ಬನವಾಸಿಗೂ ಬೌದ್ಧ ಧರ್ಮವನ್ನು ಪ್ರಸಾರ ಮಾಡಲೆಂಬ ಉದ್ದೇಶದೊಂದಿಗೆ ಕಳುಹಿಸಿದರು ಎಂಬ ಮಾಹಿತಿ ಶ್ರೀಲಂಕಾದ ಬೌದ್ಧ ಗ್ರಂಥವಾದ ಮಹಾವಂಶದಲ್ಲಿ ನಿರೂಪಿಸಲ್ಪಟ್ಟಿದೆ. (ಪುಟ-೩೫೧). ಆದರೆ ಮಹದೇವ ತೇರಾ ಹೋದದ್ದು ನರ್ಮದಾ ನದಿ ದಂಡೆಯಲ್ಲಿದ್ದ ಮಹಿಷಮಂಡಲಕ್ಕೇ. ಮಹದೇವನನ್ನು ಮಹಿಷಮಂಡಲಕ್ಕೆ ಕಳುಹಿಸುವಂತೆ ಶಿಫಾರಸು ಮಾಡಿದವಳು ಅಶೋಕನ ಪಟ್ಟ ಮಹಿಷಿಯಾಗಿದ್ದ ವಿದಿಶಾದೇವಿ ಶಾಕ್ಯ ಕುಮಾರಿಯೇ ಎಂಬ ಮಾಹಿತಿ ಕೂಡ ಮಹಾವಂಶದಲ್ಲೇ ಉಲ್ಲೇಖಿಸಲ್ಪಟ್ಟಿದೆ. ಸಾಂಚಿ ಸ್ತೂಪದ ನಿರ್ಮಾಣವಾದದ್ದೂ ಈಕೆಯ ಸಲಹೆಯಿಂದಲೇ, ಇರಲಿ. ಈ ವಿದಿಶಾದೇವಿಯು ಮೂಲತಃ ಶಾಕ್ಯ ವಂಶಸ್ಥಳೇ. ಕೋಸಲ ಸಾಮ್ರಾಜ್ಯದ ವಿಡೂಡಭ ಶಾಕ್ಯರನ್ನೆಲ್ಲ ಹೊಸಕಿ ಹಾಕುವಾಗ, ಅವನ ಹೆದರಿಕೆಯಿಂದ ವಿದಿಶಾದೇವಿಯ ಪೂರ್ವೀಕರು ಕಪಿಲವಸ್ತುವನ್ನು ತೊರೆದು, ನರ್ಮದಾ ನದಿ ದಂಡೆಯ ಮಹಿಷಮಂಡಲಕ್ಕೆ ಬಂದು ನೆಲೆಸಿದ್ದರು. (ರಾಧಾ ಕುಮುದ್ ಮುಖರ್ಜಿ). ಈ ಮಹಿಷಮಂಡಲದಲ್ಲಿ ದಂಗೆಯೆದ್ದಾಗ, ಬಿಂದುಸಾರ ಅಶೋಕನನ್ನು ದಂಗೆಯಡಗಿಸಿ ಬರುವಂತೆ ಮಹಿಷಮಂಡಲಕ್ಕೆ ಕಳುಹಿಸುತ್ತಾನೆ. ಈ ಸಂದರ್ಭದಲ್ಲೇ ಅಶೋಕನಿಗೆ ವಿದಿಶಾದೇವಿ ಪರಿಚಯವಾಗಿ ಪ್ರೇಮಾಂಕುರವಾದದ್ದು. ಈಕೆಯ ಮಕ್ಕಳೇ ಮಹೇಂದ್ರ ಮತ್ತು ಸಂಘಮಿತ್ರ. ವಂಶಮೂಲದಿಂದಲೇ ಬೌದ್ಧಳಾಗಿದ್ದ ವಿದಿಶಾದೇವಿ ತನ್ನ ತವರೂರಲ್ಲಿ ಬೌದ್ಧ ಧರ್ಮ ಹಬ್ಬಲಿ ಎಂಬ ಉದ್ದೇಶದಿಂದಲೇ ಮಹದೇವ ತೇರಾನನ್ನು ಮಹಿಷಮಂಡಲಕ್ಕೆ ಕಳುಹಿಸಿದ್ದು. ಕೆಲಕಾಲ ನಂತರ ಮಹದೇವ ತೇರಾ ಪುನಃ ಪಾಟಲೀಪುತ್ರಕ್ಕೇ ವಾಪಸ್ಸಾದದ್ದಲ್ಲದೇ ಬೌದ್ಧ ಇತಿಹಾಸದಲ್ಲಿ ಮೊದಲ ಬಾರಿಗೆ ಬೌದ್ಧ ಧರ್ಮವನ್ನು ವಿಭಜಿಸಿದ ಕುಖ್ಯಾತಿಗೂ ಒಳಗಾದ. `ಮಹಾಸಾಂಘಿಕ’ ಶಾಖೆ ಈತನದ್ದೇ Brain Child!
ಮಹದೇವ ತೇರಾ ಮೈಸೂರಿನ ಮಹಿಷಮಂಡಲಕ್ಕೂ ಬಂದಿದ್ದನೆಂಬ ಮಾತನ್ನೂ ಈಗ ಒಂದಿಷ್ಟು ಪರಿಶೀಲಿಸುವ: ಮೊದಲನೆಯದಾಗಿ ಮಹದೇವ ಕರುಣಾಮೈತ್ರಿಯ ಸಂದೇಶದ ಬೌದ್ಧ ಪ್ರಚಾರಕನಾಗಿಯೇ ತಾನೆ ಮೈಸೂರಿಗೆ ಬಂದಿದ್ದದ್ದು? ಅದನ್ನು ಬಿಟ್ಟು ಆತ ರಾಜ್ಯವನ್ನೇಕೆ ನಿರ್ಮಿಸಿದ? ಮತ್ತು ರಾಜ್ಯ ಸ್ಥಾಪಿಸಿದ್ದಾದರೂ ಎಲ್ಲಿ? ಯಾಕೆಂದರೆ ಕ್ರಿ.ಪೂ. ೩ನೇ ಶತಮಾನದಲ್ಲಿ ಈ ಭಾಗದಲ್ಲಿ ಪುನ್ನಾಟರು ರಾಜ್ಯವಾಳುತ್ತಿದ್ದರೆಂಬ ವಿವರವಾದ ಅಂಶಗಳನ್ನು ಈಗಾಗಲೇ ಗಮನಿಸಿದ್ದೇವಲ್ಲ? ಪುನ್ನಾಟರನ್ನೀತ ಬದಲಿಸಿದ್ದಲ್ಲಿ ಆ ನಂತರವೂ ಅಲ್ಲೇ ಪುನ್ನಾಟರು ಮುಂದುವರೆದದ್ದಾದರೂ ಹೇಗೆ? ಇರಲಿ, ಮಹದೇವ ಸ್ಥಾಪಿಸಿದ ರಾಜ್ಯದ ರಾಜವಂಶದ ಹೆಸರೇನಾಗಿತ್ತು? ಮಹದೇವನ ನಂತರ ಅದು ಮುಂದುವರೆಯಿತೇ ಅಥವ ಇಲ್ಲವೇ? ಇಲ್ಲವೆಂದಾದರೆ ಯಾಕೇ? ಮುಂದುವರೆದಿದ್ದ ಪಕ ್ಷದಲ್ಲಿ ಅದು ಕರ್ನಾಟಕದ ಇತಿಹಾಸದಲ್ಲಿ ದಾಖಲಾಗಲೇ ಇಲ್ಲವೇಕೆ? ಮಹದೇವ ಅನೇಕ ಆರ್ಯಾವರ್ತದ ರಾಜರನ್ನೆಲ್ಲ ಸೋಲಿಸಿ ಬಲಿಷ್ಠ ದ್ರಾವಿಡ ಸಾಮ್ರಾಜ್ಯವನ್ನು ಕಟ್ಟಿದನೆಂಬ ಮಾತೂ ಇದೆಯಲ್ಲವೇ? ಯಾವ ಆರ್ಯ ರಾಜರನ್ನೀತ ಸೋಲಿಸಿದ?! ಯಾಕೆಂದರೆ ಕಂದಹಾರ್‌ನಿಂದ ಹಿಡಿದು ಬಾಂಗ್ಲಾದವರೆಗೂ ಹಾಗೂ ಉತ್ತರ ತುದಿಯಿಂದ ಹಿಡಿದು ಉತ್ತರ ಕರ್ನಾಟಕದವರೆಗೂ ವಿಶಾಲವಾಗಿ ವ್ಯಾಪಿಸಿದ್ದದ್ದು ಅಶೋಕನ ಮೌರ್ಯ ಸಾಮ್ರಾಜ್ಯವೊಂದೇ. ದಕ್ಷಿಣದಲ್ಲಿದ್ದದ್ದು ಚೋಳ, ಚೇರ, ಪಾಂಡ್ಯರಂತಹ ದ್ರಾವಿಡ ರಾಜ್ಯಗಳೇ. ಹೀಗಿರುವಾಗ ಮಹದೇವ ಆಗ ಅಧಿಕಾರದಲ್ಲಿದ್ದ ಏಕೈಕ ಆರ್ಯ ರಾಜನಾದ ಅಶೋಕನ ವಿರುದ್ಧವಷ್ಟೇ ಯುದ್ಧ ಮಾಡಲು ಸಾಧ್ಯವಿದ್ದದ್ದು! ಇದು ಅಸಂಭವದಲ್ಲಿ ಅಂಸಭವ. ಅದಿರಲಿ, ಪಾಟಲೀಪುತ್ರದ ಆರ್ಯ ಕುಲೀಯ ವ್ಯಾಪಾರೀ ಮನೆತನದ ಮಹದೇವ ಯಾವಾಗ ಮತ್ತು ಹೇಗೆ ದ್ರಾವಿಡನಾದ?! ಅಹಿಂಸಾ ತತ್ವದ ಈತ ಹಿಂಸಾತ್ಮಕ ಯುದ್ಧ ಮಾಡಿದ್ದನ್ನಾದರೂ ಕಲ್ಪಿಸಿಕೊಳ್ಳುವುದು ಸಾಧ್ಯವೇ? ಈ ಅಂಶಗಳು ನಿಜವೇ ಆಗಿದ್ದಲ್ಲಿ ಎಲ್ಲೂ ಯಾಕೆ ಚಾರಿತ್ರಿಕ ನೆಲೆಗಳಲ್ಲಿ ದಾಖಲಾಗಿಲ್ಲ?
ಆರ್ಯ ದಾಯಾದಿ ಮತ್ಸರದ ಮಹಿಷ ಪುರಾಣ:
ಆರ್ಯ ಪಾರ್ಸಿಗಳು ಮತ್ತು ಆರ್ಯ ವೈದಿಕರು ಯುರೇಷಿಯಾದಿಂದ ಒಟ್ಟಿಗೇ ಇರಾನ್‌ವರೆಗೂ ವಲಸೆ ಹೊರಟು ಬಂದ ಇಂಡೋ-ಯೂರೋಪಿಯನ್ನರು. ಕಳ್ಳುಬಳ್ಳಿಯ ದಾಯಾದಿ ಸಂಬಂಧಿಗಳು. ಇರಾನಿಗೆ (ಅಂದಿನ ಪರ್ಷಿಯ) ಬಂದ ನಂತರ ಝೊರಾಷ್ಟಿçಯನ್ ಪಾರ್ಸಿಗಳು ರಾಜ್ಯ ಸ್ಥಾಪನೆಯೊಂದಿಗೆ ತಮ್ಮ ಪ್ರದೇಶವನ್ನು ಆರ್ಯನ್ ವೇಜû (ಆರ್ಯರ ತವರು ಭೂಮಿ) ಅಂತ ಕರೆದುಕೊಂಡರು. ಅದನ್ನು ತಮ್ಮದಾಗಿಸಿಕೊಳ್ಳಲು ವೈದಿಕರು ಪ್ರಯತ್ನಿಸಿದರು. ಪರ್ಷಿಯನ್ ಕವಿ ಫಿರ್ದೋಸಿಯ ಷಾಹೆನಾಮದ ಪ್ರಕಾರ ಪಾರ್ಸಿ ಮತ್ತು ವೈದಿಕರು ಎರಡು ಯುದ್ಧಗಳನ್ನು ಮಾಡಿದರು. ಪರ್ಷಿಯಾದ ಗಯ ಮರಿತಾನ್ ಎಂಬ ರಾಜನ ಮಗನಾದ ಸಿಯಾಮಕ್ ಎಂಬುವವನ್ನು ವೈದಿಕ ಸೇನೆಯ ಸೇನಾನಿಯಾಗಿದ್ದ ಅರ್ಹಿಮನ್‌ನ ಮಗ ಕೊಂದ. ವೈದಿಕರು ಮೊದಲ ಯುದ್ಧದಲ್ಲಿ ವಿಜಯಿಗಳಾದರು. ಪುನಃ ಗಯಾ ಕೆಲಕಾಲಾನಂತರ ತನ್ನ ಮೊಮ್ಮಗ ಹುಷಂಗ್‌ನ ನೇತೃತ್ವದಲ್ಲಿ ಬೃಹತ್ ಸೇನೆಯನ್ನು ಜಮಾವಣೆಗೊಳಿಸಿ ವೈದಿಕರನ್ನು ಸೋಲಿಸಿದ್ದಲ್ಲದೆ ಹರಪ್ಪ ನಾಗರಿಕತೆಯವರೆಗೂ ಬೆನ್ನಟ್ಟಿ ಓಡಿಸಿದ. ಈ ಎರಡನೇ ಯುದ್ಧದಲ್ಲಿ ವೈದಿಕರೇ ಗೆದ್ದಿದ್ದರೆ, ಬಹುಶಃ ಇಂದು ಈ ದೇಶದ ಹೆಸರೇ ಬೇರೆ ಇರುತ್ತಿತ್ತು. ಇಲ್ಲಿ ವೈದಿಕ ಬ್ರಾಹ್ಮಣರು, ಅವರ ಧರ್ಮ, ಜಾತಿ ಇತ್ಯಾದಿಗಳು ಯಾವುವೂ ಇರುತ್ತಿರಲೇ ಇಲ್ಲ! ಇತಿಹಾಸದ ಆಕಸ್ಮಿಕದಿಂದ ನಾವಿಂದು ಈ ಪರಿಸ್ಥಿತಿಗೆ ದೂಡಲ್ಪಟ್ಟಿದ್ದೇವೆ. ಜಾರತೂಷ್ಟ ವೈದಿಕರ ಅಪ್ರಮಾಣಿಕತೆ, ಹಿಂಸೆ, ಸ್ವಾರ್ಥ ಮತ್ತು ನೀತಿರಾಹಿತ್ಯತೆಗಳನ್ನು ಕಂಡು ಜಿಗುಪ್ಸೆಗೊಂಡು ನೈತಿಕ ನಿಯಮಗಳೇ ಪ್ರಧಾನವಾದ ಮಜ್ದಾಯಸ್ನಿಯನ್ನು ಬೋಧಿಸಿ ಝೊರಾಷ್ಟಿçಯನ್ ಧರ್ಮವನ್ನು ಸ್ಥಾಪಿಸಿದ. ಇತ್ತ ಪುರುಗಳ ಉಪಪಂಗಡವಾದ ಭರತರ ಕುರುಶ್ರವಣ ಹರ್ಯಾಣದಲ್ಲಿ ಮೊಟ್ಟಮೊದಲಿಗೆ ತನ್ನ ಆರ್ಯ ರಾಜ್ಯವನ್ನು ಸ್ಥಾಪಿಸಿದ. ಅದುವೇ ಕುರುಕ್ಷೇತ್ರ. ಬಹುಶಃ ಭರತರಿಂದಲೇ ಭಾರತ ಎಂದಾದದ್ದು. ನಂತರ ಆರ್ಯ ವೈದಿಕರು ಗಂಗಾನದಿ ಬಯಲನ್ನೊಳಗೊಂಡಂತೆ ಆರ್ಯಾವರ್ತ, ಅಂದರೆ `ಆರ್ಯರ ಭೂಮಿಯನ್ನು ಸ್ಥಾಪಿಸಿಕೊಂಡರು. ಪಾರ್ಸಿಗಳು ಭಾರತದ ಆರ್ಯರನ್ನು ವೈದೀಹರು ಅಂತಲೇ ಕರೆದರು. ಇಲ್ಲಿಂದಾಚೆಗೆ ಈ ದಾಯಾದಿಗಳ ನಡುವೆ ಏತಿ ಅಂದರೆ ಪ್ರೇತಿ ಅನ್ನುವಂತಾಯಿತು.

ಋತದ (ಸತ್ಯ) ಅಧಿದೇವ ಹಾಗೂ ಅಸುರರ ನಾಯಕನೂ ಆದ ವರುಣನನ್ನೇ ಪಾರ್ಸಿಗಳು ತಮ್ಮ ಏಕೈಕ ಸರ್ವಶಕ್ತನೆಂದು ಅಂಗೀಕರಿಸಿದರು. ಭೃಗು-ಅಂಗೀರಸ ಸಂಹಿತೆಯಲ್ಲಿನ ತಮಗೆ ಬೇಕಾದ ಸದಾಚಾರಗಳನ್ನು ಪ್ರತ್ಯೇಕಿಸಿ ಅದನ್ನು ಭಾರ್ಗವ ವೇದ ಅಂತ ಕರೆದು ಅದನ್ನೇ ಅವೆಸ್ತಾವನ್ನಾಗಿ ರೂಪಿಸಿಕೊಂಡು. ಉಳಿದರ್ಧವೇ ಆಥರ್ವವೇದ. ಇದಕ್ಕೆ ವಿರುದ್ಧವಾಗಿ ವೈದಿಕರು ಅಂಗೀರಸ ಪರಂಪರೆಯನ್ನೇ ಇಂದ್ರ ಮತ್ತು ದೇವ ಪರಿಕಲ್ಪನೆಯ ಮೂಲಕ ಮುಂದುವರೆಸಿದರು. ಹೀಗಾಗಿಯೇ ಪಾರ್ಸಿಗಳ ಪ್ರಕಾರ ದಏವ(ದೇವ) ಅಂದರೆ ಕೆಡುಕಿನ ದುಷ್ಟಶಕ್ತಿ. ಅಹುರ(ಅಸುರ)ನೇ ಸರ್ವಶಕ್ತ. ಆದರೆ ವೈದಿಕರು ಪೂರ್ವದೇವರಾದ ಅಸುರರನ್ನೇ ದುಷ್ಟಶಕ್ತಿಗಳೆಂದೂ, ದೇವನೇ ಸರ್ವಶಕ್ತನೆಂದೂ ಅಂಗೀಕರಿಸಿದರು. ಭೃಗುವಿನ ಮಗನಾದ ಶುಕ್ರಾಚಾರ್ಯ ಪಾರ್ಸಿ ಅಸುರರ ಗುರುವಾದ. ಅಂಗೀರಸನ ಮಗನಾದ ಬೃಹಸ್ಪತಿ ವೈದಿಕ ದೇವರ ಗುರುವಾದ. ವೈದಿಕ ಪುರಾಣಗಳಲ್ಲೂ ಈ ಅಂಶವೇ ಉಳಿದು ಬಂದಿರುವುದನ್ನು ಗಮನಿಸಬಹುದು. ಇಷ್ಟಾದರೂ ಅಸುರರು ದೇವರುಗಳಿಗಿಂತಲೂ ಪ್ರಾಚೀನರು ಮತ್ತು ಹೆಚ್ಚು ಸಮರ್ಥರು. ಅಸುರರು ಪೂರ್ವ ದೇವರು. ಅಸುರ ಪದ ಸುರ ಪದಕ್ಕೆ ವಿರುದ್ಧ ಪದವಲ್ಲ. ನಕಾರಾತ್ಮಕ `ಅ’ ಎಂಬ ಆದಿ ಪ್ರತ್ಯಯ ಈ ಪದದಲ್ಲಿದ್ದರೂ ಇಲ್ಲಿಗೆ ಅನ್ವಯಿಸುವುದಿಲ್ಲ. ಯಾಕೆಂದರೆ, ಅದರ ಮೂಲ ಹಸುರ (Hasura) ಎಂಬ ಪದವಾಗಿದ್ದು ಅದು ಆದಿಮ ಇಂಡೋ-ಯೂರೋಪಿಯನ್ ಭಾಷೆಯಲ್ಲಿದೆ. ಹಸು > ಅಸು ಎಂದರೆ ಪ್ರಾಣ ಎಂದರ್ಥ. ಸತ್ತ ನಂತರ ಜೀವದ ರಕ್ಷಣೆ, ಉಸ್ತುವಾರಿ ವಹಿಸಿಕೊಳ್ಳುವವರೇ ಅಸುರರು. (ಮೋನಿಯರ್ ವಿಲಿಯಂಸ್) ಅಸುರನಾದ ವರುಣನ ಬಗ್ಗೆ `ದೇವರು ಮತ್ತು ಮರ್ತ್ಯರೆಲ್ಲರಿಗೂ ವರುಣನೇ ಅಧಿಪತಿ’ (ಋಗ್ವೇದ, ೧೧.೨೭.೧೦) ಎಂದು ಋಗ್ವೇದವೇ ವರ್ಣಿಸಿದೆ. `ಈ ಅಸುರ (ವರುಣ) ದೇವರುಗಳನ್ನೂ ನಿಯಂತ್ರಿಸಬಲ್ಲ’ (ಅಥರ್ವ, ೧.೧೦.೧). ಬರ್ಯಾವುದೇ ವೈದಿಕ ದೇವರಿಗೂ ಈ ಬಗೆಯ ಪ್ರಾಮುಖ್ಯತೆ ಸಿಕ್ಕಿಲ್ಲ. `ಮಹಸ್ ಪುತ್ರಾಸೋ ಅಸುರಸ್ಯ ವೀರಾ:’ (ಋಗ್ವೇದ, ೧೦.೧೦.೧೨) ಎಂದು ಅಸುರರ ಮಹತ್ತು, ವೀರತ್ವವನ್ನೂ ಪ್ರಶಂಸಿಸಲಾಗಿದೆ. ವಿ-ದೇವ್-ದಾತ, ಅಂದರೆ ದೇವರುಗಳ ವಿರುದ್ಧದ ನಿಯಮ/ ಕಾನೂನುಗಳು ಎಂಬರ್ಥದ ವೆಂಡಿಡ್ಯಾಡ್ (Vendidad) ಪಾರ್ಸಿಗಳ ಪವಿತ್ರ ಗ್ರಂಥಗಳಲ್ಲೊಂದು. ಇದರಲ್ಲಿ ಅಹುರ್‌ಮಜ್ದಾ `ನಾನು ಇಂದ್ರನನ್ನು ಓಡಿಸಿದೆ. ನಾನು ದಏವ(ದೇವ)ನನ್ನು ಈ ತವರು ನೆಲದಿಂದ, ಈ ಭೂಮಿಯಿಂದ, ಸದಾಚಾರದ ಈ ಜಗತ್ತಿನಿಂದಲೇ ಓಡಿಸಿದೆ’ ಎಂದು ಘೋಷಿಸಿದ್ದಾನೆ (ವೆಂಡಿಡ್ಯಾಡ್, ೧೦.೯/೧೯.೪೫). ಈ ಬಗೆಯ ಪಾರ್ಸಿ ಮತ್ತು ವೈದಿಕರ ದಾಯಾದಿ ಹಗೆತನ ನಂತರದ ವೈದಿಕರ ಪುರಾಣಗಳಲ್ಲೂ ಮುಂದುವರೆದು ಅಸುರರೆಂದರೆ ದುಷ್ಟರು, ಕ್ರೂರಿಗಳು ಎಂಬಂತೆ ನಿರಂತರವಾಗಿ ಚಿತ್ರಿಸಲ್ಪಟ್ಟಿತು. ಅಸುರರೆಂದರೆ ಖಂಡಿತ ದ್ರಾವಿಡರಲ್ಲ.

ಮಹಿಷಾಸುರನೆಂದರೆ ಕಕೇಷಿಯನ್ ಆರ್ಯರ ಮೂಲ ಪುರುಷರಲ್ಲಿ ಒಬ್ಬನಾದ, ನಿರ್ದಿಷ್ಟವಾಗಿ ಹೇಳುವುದಾದಲ್ಲಿ Slavic Old Wiseman (Al-Masoudi-Arabian Traveller) ಕಶ್ಯಪನ ಮರಿಮೊಮ್ಮಗನೂ ಹೌದು. ಹಾಗೆಯೇ ಬೃಹತ್ ನಂದಿಕೇಶ್ವರ ಹಾಗೂ ತಮಿಳಿನ ಅರುಣಾಚಲ ಪುರಾಣಗಳ ಪ್ರಕಾರ ಸ ್ವತಃ ಶಿವನೂ ಹೌದು. ಆದರೆ ಮಹಿಷಾಸುರ ಮರ್ದಿನಿ ಪುರಾಣ ಸೃಷ್ಟಿಯ ಉದ್ದೇಶ ಮೂಲದಲ್ಲಿ-ವರುಣ ಅರ್ಥಾತ್ ಅಹುರ್‌ಮಜ್ದಾನೇ ಮಹಿಷಾಸುರ! ಪರ್ಷಿಯನ್ ಮಜ್ದಾ ಎಂಬ ಪದ ಸಂಸ್ಕೃತದಲ್ಲಿ ಮಹಸ್ ಎಂದಾಗುತ್ತದೆ. ಮಹಸ್‌ಅಸುರನೇ ಮಹಿಷಾಸುರ. ಅವೆಸ್ತಾದ ಪ್ರಾಚೀನ ಪ್ರಯೋಗಗಳಲ್ಲಿ ಮಜಿ಼ಷ್ಟಾಹುರ ಎಂಬ ನಾಮಪದದ ಬಳಕೆ ವರುಣನಿಗಿದೆ. ಈ ಮಜಿ಼ಷ್ಟಾ ಅಹುರ (ಅಂದರೆ ಅಸುರ - ಪರ್ಷಿಯನ್ ಭಾಷೆಯ `ಹ’ ಕಾರ `ಜû’ ಕಾರಗಳು ಸಂಸ್ಕೃತದಲ್ಲಿ `ಸ’ ಕಾರಗಳಾಗುತ್ತವೆ.) ನನ್ನೇ ಸಂಸ್ಕೃತದಲ್ಲಿ ಮಹಿಷಾಸುರನೆಂದು ಕರೆಯಲಾಗುತ್ತದೆ. ಅನೇಕ ಇಂಡಾಲಜಿಸ್ಟರು ಮಹಿಷಾಸುರ ಹಾಗೂ ವೈದಿಕ ದುರ್ಗಿಯ ಯುದ್ಧವನ್ನು ಯಜ್ಞಾಚರಣೆಯ ದೇವಾರಾಧಕರಿಗೂ ಮತ್ತು ತಪೋ ಆಚಾರಣೆಯ ಮಜ್ದಾಸುರ ಆರಾಧಕರಿಗೂ ನಡುವೆ ಮುಂದುವರೆಯುತ್ತಲೇ ಬಂದ ದಾಯಾದಿ ಹಗೆತನವನ್ನಾಗಿಯೇ ಗುರುತಿಸಿದ್ದಾರೆ. ಮಹಿಷ ಪುರಾಣದಲ್ಲಿ ಮಹಿಷಾಸುರ ಇಂದ್ರಾದಿ ದೇವರುಗಳನ್ನು ಸ್ವರ್ಗದಿಂದ ಓಡಿಸುವುದು ಕೂಡ ಅಹುರ್‌ಮಜ್ದಾನ ಅನುಯಾಯಿ ರಾಜರು ಇಂದ್ರ-ದೇವರುಗಳನ್ನು ಆರ್ಯನ್ ವೆಜಾ಼ದಿಂದ ಓಡಿಸಿದ್ದರ ತದ್ವತ್ತು ನಿರೂಪಣೆಯಾಗಿದೆ. ವೈದಿಕ ಪುರಾಣಗಳಲ್ಲಿನ ಅಸುರರ ವಧೆಗಳೆಲ್ಲವೂ ಪ್ರತಿಮಾತ್ಮಕವಾಗಿ ಪಾರ್ಸಿಗಳ ಹಾಗೂ ಅವರ ಸರ್ವಶಕ್ತ ಅಹುರ್‌ಮಜ್ದಾನ ಚಾರಿತ್ರö್ಯಹನನದ ಕಥಾನಕಗಳೇ ಆಗಿವೆ. ಮಧ್ಯ ಏಷ್ಯಾದ ಮಸ್ಸಾಜಟಾದ (ಜಾಟ್ ಮೂಲದವರು) ರಾಣಿ ಟೊಮಿರಿಸ್ ಪರ್ಷಿಯಾದ ಸೈರಸ್ ರಾಜನನ್ನು ಕೊಂದದ್ದರಿಂದ ಆಕೆಯನ್ನು ಕೂಡ ಮಹಿಷಾಸುರ ಮರ್ದಿನಿ ಎಂದೇ ಶತಮಾನಗಳ ಕಾಲ ಕರೆಯಲಾಗುತ್ತಿತ್ತು. ಹಾಗೆಯೇ ಅಲೆಗ್ಸಾಂಡರ್ ಪರ್ಷಿಯನ್ ರಾಜ ಡೇರಿಯಸ್‌ನನ್ನ ಕೊಂದದ್ದರಿಂದ ಆತನನ್ನು ಮತ್ತು ಆತನೊಂದಿಗೆ ಸಮೀಕರಿಸಲ್ಪಟ್ಟಿದ್ದ ಸ್ಕಂದನನ್ನು ಮಹಿಷಾಸುರ ಮರ್ದನ ಎಂದೇ ಕರೆಯಲಾಗುತ್ತದೆ. ಅಂದರೆ, ಮೂಲದಲ್ಲಿ ಮಹಿಷಾಸುರನಾಗಿದ್ದ ಮಜ್ದಾಹುರನ ಧರ್ಮದ ಅನುಯಾಯಿ ರಾಜರು ಇವರಾದ್ದರಿಂದಲೇ ಇವರನ್ನು ಸಾಂಕೇತಿಕವಾಗಿ ಮಹಿಷಾಸುರರು ಎಂದು ಭಾವಿಸಲಾಗಿತ್ತೆಂಬುದಕ್ಕೆ ಈ ಪ್ರಸಂಗಗಳೇ ಸಾಕ್ಷಿ. ಮಹಿಷಾಸುರ ಮರ್ದಿನಿಯ ಪುರಾಣವು ಮೊದಲು ಹಬ್ಬಿದ್ದೇ ಪಾರ್ಸಿಗಳ ಇರಾನ್ ಮತ್ತು ಅಫ್ಘಾನಿಸ್ತಾನಗಳಲ್ಲೇ.

ಅತ್ಯಂತ ಪ್ರಾಚೀನವಾದ ಮಹಿಷಾಸುರ ಮರ್ದಿನಿಯ ಪ್ರತಿಮೆಗಳು ಉತ್ತರ ಇರಾನಿನ ಡೇಲಾಮನ್‌ನಲ್ಲೂ ಇನ್ನಿತರೆಡೆಗಳಲ್ಲೂ ಸಿಕ್ಕಿವೆ. ಝೊರಾಷ್ಟಿçಯನ್ ಧರ್ಮವು ನೆಲೆಸಿದ್ದ ಹಾಗೂ ಪ್ರಬಲವಾಗಿದ್ದೆಡೆಯಲ್ಲೇ ಈ ಪುರಾಣವನ್ನು ಮೊದಲು ಹಬ್ಬಿಸಲಾಯಿತೆಂಬುದೇ ವೈದಿಕರ ಮಜ್ದಾಹುರನ ಬಗೆಗಿನ ಹಗೆತನ, ದಾಯಾದಿ ಮತ್ಸರಕ್ಕೆ ಸಾಕ್ಷಿ. ವಿಚಿತ್ರವೇನೆಂದರೆ ಮಹಿಷಾಸುರ ಒಬ್ಬ ದ್ರಾವಿಡ, ಬೌದ್ಧ ಭಿಕ್ಕು ಅಂತ ನಂಬಿರುವವರು ಒಂದು ಕಡೆಯಿದ್ದರೆ, ಮತ್ತೊಂದು ಕಡೆ ಈ ಪಾರ್ಸಿ-ವೈದಿಕರ ದೇವಅಸುರದ ಸಮರವು ತೇರಾವಾದದ ಸಾಹಿತ್ಯದಲ್ಲೂ ನುಸುಳಿದೆ! ಅಲ್ಲೂ ಬೌದ್ಧರ ಅಸುರ ವಿರೋಧಿ ಧೋರಣೆಯೇ ಮುಂದುವರೆದಿದೆ. ತಾತ್ವಿಕವಾಗಿ ಬೌದ್ಧ ಧರ್ಮ ಮಹಿಷಾಸುರ ವಿರೋಧವನ್ನು ಒಳಗೊಂಡಿದ್ದರು ನಾವು ಮಹಿಷನೇ ಬೌದ್ಧ ಎಂದು ನಂಬುವುದು ವಿರೋಧಾಭಾಸವಲ್ಲವೇ? ಇಲ್ಲಿ ಮಹಿಷ ಮತ್ತು ದುರ್ಗಿಯರ ನಡುವೆ ಯಾರು ಒಳಿತಿನ ಪರ ಅಥವ ಯಾರು ಕೆಡುಕಿನವರು ಎಂಬುದು ಎರಡನೆಯ ಪ್ರಶ್ನೆ. ಆದರೆ ಮಹಿಷನ ಪರವಹಿಸುವುದು ಅಂದರೆ, ಖಂಡಿತವಾಗಿಯೂ ಅದು ಆರ್ಯ-ಪಾರ್ಸಿಗಳ ಸರ್ವಶಕ್ತನಾದ ಅಹುರ್‌ಮಜ್ದಾನ ಪರವಾಗಿಯೂ, ಝೊರಾಷ್ಟಿçಯನ್ ಧರ್ಮದ ಪರವಾಗಿಯೂ ನಿಲ್ಲುವುದೆಂದೇ ಅರ್ಥ. ಇದು ನಿಸ್ಸಂದಿಗ್ಧವಾದ ಮಾತು.

ಪ್ರೊಫೆಸರ್‌ ಭಗವಾನ್‌ ಆಗ ಸರಿಯಾಗೇ ಹೇಳಿದ್ದರಲ್ಲವೇ? ಸ್ವಯಂ ರಕ್ಷಣೆಗೆ ಪರಿಶಿಷ್ಟರು ಸಶಸ್ತ್ರಗಳನ್ನು ಹೊಂದುವುದು ಒಳ್ಳೆಯದೆ ತಾನೆ?


 




ಪ್ರೊಫೆಸರ್ ಭಗವಾನ್ ಅಂದು ಹೇಳಿದ್ದ ಮಾತನ್ನ‌ ನಾವು ವಿರೋಧಿಸಿದ್ವಿ. ವರ್ಷಗಳು ಕಳೆದವು ಹಾಗೆ ನಮ್ಮ‌ ಅಭಿಪ್ರಾಯವೂ ಬದಲಾಗಿದೆ.‌ ಪರಿಶಿಷ್ಟ ಸಮುದಾಯದವರಿಗೆ, ಅಗತ್ಯಕ್ಕೆ ತಕ್ಕಂತೆ ಈಗಾಗಲೇ ಇರುವ ಸಶಸ್ತ್ರಗಳನ್ನು ಹೊಂದಿರಲು ಇರುವ ಷರತ್ತುಗಳಂತೆಯೇ ಸಣ್ಣಪ್ರಮಾಣದಲ್ಲಿಯಾದರೂ ಸಶಸ್ತ್ರಗಳನ್ನು (ಗನ್, ತಲವಾರ) ಹೊಂದಲು ಸರ್ಕಾರ ಅನುವು ಮಾಡಿಕೊಡಬೇಕು.

ಪರಿಶಿಷ್ಟರ ಆರ್ಥಿಕತೆಯು ಈಗ ಒಂದು ಟ್ರಾನ್ಸ್ ಸ್ಥಿತಿಯಲ್ಲಿದೆ. ಅವರ ಇಷ್ಟು‌ ದಿನದ ಶ್ರಮ ದುಡಿಮೆ ಈಗ ಫಲ ಕೊಡುತ್ತಿದೆ. ಇದರ ಪರಿಣಾಮವಾಗಿ ಡಿಪಾರ್ಟ್ಮೆಂಟಲ್ ಸ್ಟೋರ್ಸ್, ಹೊಟೆಲ್, ಸಾವಯವ ಕೃಷಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಕಂಪ್ಯೂಟರ್ ಟ್ರೈನಿಂಗ್ ಸೆಂಟರ್, ಸೈಬರ್, ಕನ್ಸಲ್ಟೆನ್ಸಿ, ಟ್ರಾವಲ್ಸ್, ಮುಂತಾದ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಇವರ ಆಗಮನವಾಗ್ತಿದೆ. ಇದು ಒಳ್ಳೆಯ ಬೆಳವಣಿಗೆಯಾದರೆ, ಇದಕ್ಕೆ ಪ್ರತಿಯಾಗಿ ಕೆಲವು ಕಡೆ ಇವರ ವಿರುದ್ಧ ಷಡ್ಯಂತ್ರಗಳು, ಗಲಭೆಗಳು, ಅಸೂಯೆ ಕಿಚ್ಚುಗಳಿಂದ ಇವರ ಕೆಲಸಗಳನ್ನು ಹಾಳುಮಾಡಲಾಗ್ತಿದೆ.

ಎರಡು ತಿಂಗಳ ಹಿಂದೆ ಹಾಸನದ ಆಲೂರಿನಲ್ಲಿ ರಸ್ತೆ ಬದಿ ಕಬ್ಬಿನ‌ಹಾಲು ಮಾರುತ್ತಿದ್ದ ಪರಿಶಿಷ್ಟ ಸಮುದಾಯದ ವ್ಯಾಪರಿಯ ಮೇಲೆ ಜಾತಿ ಅಸೂಯೆಯ ಕಾರಣಕ್ಕಾಗಿ ಒಕ್ಕಲಿಗರಿಂದ ಹಲ್ಲೆಯಾಗಿತ್ತು. ಇದೊಂದು ಉದಾಹರಣೆ ಅಷ್ಟೇ. ಇಂಥಹ ಸಂಗತಿಗಳು ಬಹಳಷ್ಟಿವೆ.

ಸಶಸ್ತ್ರಗಳನ್ನು‌ ಹೊಂದುವುದು ಈ ಸಮಸ್ಯೆಗೆ ಸಂಪೂರ್ಣ ಪರಿಹಾರವಲ್ಲದೇ ಇರಬಹುದು, ಆದರೆ ಅರ್ಧಕ್ಕಿಂತ ಹೆಚ್ಚಿನ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಭಾರತದಂತಹ ಪರಂಪರಾ ನಿಷ್ಠ ರಾಷ್ಟ್ರದಲ್ಲಿ ಆಯುಧ ಅನ್ನೋದು ಅಧಿಕಾರದ ಸಂಕೇತವಾಗಿದೆ. ಹಳೇ ಮೈಸೂರು ಭಾಗ ದೊಡ್ಡ ಹೊಲಯರ ಮನೆಗಳಲ್ಲಿ ಒಡೆಯರ ಕಾಲದ ಗಂಡುಗತ್ತಿಗಳು, ತಲವಾರಗಳಿವೆ, ಕುಳವಾಡಿ ದಂಡಗಳಿವೆ. ಇವರು ಆರ್ಥಿಕವಾಗಿ ಕೊಂಚ ಅನುಕೂಲಸ್ಥರು. ಹಾಗೆಯೇ ಇಂಥವರ‌ ಮೇಲೆ ಮೇಲ್ವರ್ಗದಿಂದ ದಾಳಿಗಳಾದದೂ ಸಹ ಅಪರೂಪವೆ. ಹಾಗೇ ತುಮಕೂರು ಚಿತ್ರದುರ್ಗ ಭಾಗದ ಹರ್ತಿಗೌಡ ಚಲವಾದಿ ಹೊಲಯರು ಸಹ ಇಂಥಹ ಹಲವು ಐತಿಹಾಸಿಕ ಆಯುಧಗಳನ್ನು ಹೊಂದಿರುವ ಮನೆತನಗಳಾಗಿವೆ. ಕಲ್ಯಾಣ ಕರ್ನಾಟಕದ ಕೂಟಗಾರ ಮನೆತನದ ಹೊಲಯರ ಮನೆಗಳಲ್ಲೂ ಇಂಥಹ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ತಲವಾರ ಕತ್ತಿ ಬಾಕುಗಳಿವೆ.‌ ಆಯುಧ ಅನ್ನೋದು ಅಧಿಕಾರದ ಸೂಚಕವೂ ಹೌದು. ಮಾನಸಿಕವಾಗಿ ಸುರಕ್ಷತಾ ಭಾವವನ್ನುಂಟು ಮಾಡುವ ಮದ್ದೂ ಹೌದು.‌ ಕರ್ನಾಟಕದಲ್ಲಿ ಇಂಥಹ ಪ್ರವಿಲೇಜ್ ಇರುವುದು ಹೊಲಯರ ಅರ್ಧ ಜನಸಂಖ್ಯೆಗಷ್ಟೇ. ಹಾಗೂ ತಳವಾರಿಕೆಯ ಹಿನ್ನೆಯ ಇರುವ ಕೆಲವು ಮಾದಿಗರ ಮನೆತನಗಳಿಗಷ್ಟೇ. ಇನ್ನುಳಿದ ಅಪಾರ ಸಂಖ್ಯೆಯ ಹೊಲಯ ಮಾದಿಗರಿಗೆ ನಿಜಕ್ಕೂ ಈಗ ಅವಶ್ಯಕತೆ ಇರುವುದು ಈ ಸಶಸ್ತ್ರಗಳನ್ನು ಹೊಂದುವ ಹಕ್ಕೇ ಆಗಿದೆ. ಇದಕ್ಕಾಗಿ ಈಗಿನ ಸರ್ಕಾರವೂ ಪರಿಶಿಷ್ಟ ಸಮುದಾಯದ ಸಣ್ಣಪುಟ್ಟ ವ್ಯಾಪಾರಿಗಳು, ಸಣ್ಣಪುಟ್ಟ ಉದ್ಯಮಿಗಳ ಪರವಾಗಿ ಯೋಜನೆಗಳನ್ನು ರೂಪಿಸಿ ಸಹಕಾರ ನೀಡುತ್ತದೆಂದು ಭಾವಿಸುತ್ತೇವೆ.

ಹೊಲಯ ಮಾದಿಗರಿಗೆ ನಾವು ನೀಡಬಹುದಾದ ಒಂದೇ ಒಂದು ಸಜೆಷನ್, ರಣರಂಗಕ್ಕೆ ಆಯುಧಗಳೊಂದಿಗೆ ಹೋಗಿ ಬರಿಕೈಯಲ್ಲಿ ಹೋಗದಿರಿ. ನಾವು ಉದ್ಯಮಿಗಳಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಏನೇ ಸಮಸ್ಯೆಗಳು ಬಂದರೂ, ಯಾರೇ ತುಳಿಯಲು ಬಂದರೂ‌ ಅವರನ್ನ ಸಮರ್ಥವಾಗಿ ಎದುರಿಸಲು ತಯಾರಾಗಿರಬೇಕು.‌

ಒಗ್ಗಟ್ಟನ್ನು ತೋರುವ ಸಮಯ ಬಂದಿದೆ, ಎಚ್ಚರಗೊಳ್ಳಿ ಚಲವಾದಿ ಹೊಲಯರೇ...




ಒಗ್ಗಟ್ಟನ್ನು ತೋರುವ ಸಮಯ ಬಂದಿದೆ...
ಎಚ್ಚರಗೊಳ್ಳಿ ಚಲವಾದಿ ಹೊಲಯರೇ...


ಓದಿ....


ನಾಳೆ ಭಾನುವಾರ, ಎಂದರೆ 2ನೇ ತಾರೀಖು ಜುಲೈ 2023ರಂದು Twitter (ಟ್ವಿಟರ್) ಹಾಗೂ Facebook (ಫೇಸ್ಬುಕ್‌) ಅಭಿಯಾನಕ್ಕೆ ತಯಾರಾಗಿ ಆದಿಕನ್ನಡಿಗರೇ...


10-11ನೇ ಶತಮಾನದಿಂದೀಚೆಗಿನ ಕನ್ನಡ ಸಾಹಿತ್ಯದಲ್ಲಿ ಉತ್ತರ ಭಾರತದ ಅಥವ ಪ್ರಾಕೃತ ಸಂಸ್ಕೃತಗಳ ಕಥೆ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿ ಕೃತಿಗಳನ್ನು ರಚಿಸುವ ಛಾಳಿ ಹೆಚ್ಚಿಕೊಂಡಾಗ ಅಲ್ಲಿನ ಅದರಲ್ಲಿನ "ವೈದಿಕಾರ್ಯ ಧರ್ಮ ಒಪ್ಪದೆ ಚಾತುರ್ವರ್ಣ ವ್ಯವಸ್ಥೆಯಿಂದ ಹೊರಗುಳಿದ ಅವರ್ಣೀಯರನ್ನು ಅಧರ್ಮಿಗಳು" ಎಂದ ಸಾಲುಗಳನ್ನು ಕನ್ನಡಕ್ಕೆ ಅಚ್ಚಿಳಿಸುವಾಗ, ಆದಿ ಕನ್ನಡ ಕುಲವಾದ, ಕನ್ನಡದ ಆದಿಮ ಸಮುದಾಯಗಳಾದ ಹೊಲಯ ಮಾದಿಗರನ್ನು ಮೇಲಿನ ಅರ್ಥಕ್ಕೆ ಸಮಾನಾಂತರಿಸಿ ಆರೋಪಿಸಿ ಬರೆಯಲಾರಂಭಿಸಿದರು. ಅಸಲಿಗೆ ದಕ್ಷಿಣ ಭಾರತದಲ್ಲಿ ಚಾತುರ್ವರ್ಣ ವ್ಯವಸ್ಥೆಯೇ ಇರದಿದ್ದಾಗ ಬ್ರಾಹ್ಮಣ ಅಬ್ರಾಹ್ಮಣವೆಂಬ ಭೇದವನ್ನರಸಿ ಹೀಗೆ ನೆಲೆಸುಗ ಸಮುದಾಯಗಳಾಗಿದ್ದ, ಆಳರಸರಾಗಿದ್ದ ಹೊಲಯ ಮಾದಿಗ ಹೆಸರುಗಳನ್ನು ಕೀಳೆಂಬಂತೆ ಅರ್ಥ ಕಲ್ಪಿಸಿ ಬರೆದು ಆ ಅರಸರು ಸಹ ಉತ್ತರದ ಅಯೋಧ್ಯ, ಲುಂಬಿನಿ, ದ್ವಾರಕ, ಕೋಸಲ, ಕಪಿಲವಸ್ತುಗಳಿಂದ ತಮ್ಮ ಮೂಲವನ್ನು ಬರೆಸಿಕೊಳ್ಳುವಂತೆ ಮಾಡಿದ್ದರು. ಅಂದಿನಿಂದ ಶುರುವಾದ ಹೊಲಯ ಮಾದಿಗ ಹೆಸರುಗಳ ತುಚ್ಛೀಕರಿಸುವ ಈ ಕೆಟ್ಟ ಛಾಳಿ ಇಂದಿಗೂ ಮುಂದುವರೆದಿದೆ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕವೂ ಅದು ಮುಂದುವರೆಯುತ್ತಿದೆ.

ಈಗಲೂ ನಾವೂ ಸುಮ್ಮನಿದ್ದರೆ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿರಲಾರದು. ಈಗಲೂ ನಮ್ಮ ಆಕ್ರೋಶದ ಕೂಗು ಹೆಚ್ಚಾಗದಿದ್ದರೆ ಇದು ಕೇವಲ ನಾವು ನಮಗೆ ಮಾಡಿಕೊಳ್ಳುವ ಅನ್ಯಾಯವಾಗಿ ಉಳಿಯುವುದಿಲ್ಲ, ಬದಲಿಗೆ ಈ ನೆಲಕ್ಕೆ ಕನ್ನಡ ನಾಡಿಗೆ, ಆದಿ ಕನ್ನಡ ಕುಲಕ್ಕೆ ಎಸಗುವ ದ್ರೋಹವಾಗಿಯೂ ಉಳಿದೀತು. ಇದೇ ಪಾಠವನ್ನು ನಮ್ಮ ಮಕ್ಕಳು ಸಹ ಓದುವವರಾಗುತ್ತಾರೆ, ನಮ್ಮ ಬಗ್ಗೆ ನಾವೇ ಕೀಳರಿಮೆಯನ್ನು ರೂಢಿಸಿಕೊಂಡು ಅದನ್ನು ನಮ್ಮ ಮಕ್ಕಳ ಮನಸ್ಸಿನಲ್ಲಿಯೂ ಬಿತ್ತುವ ಅವಕಾಶವನ್ನು ಮಾಡಿಕೊಟ್ಟು ನಮ್ಮ ಮಕ್ಕಳಿಗೂ ನಮ್ಮ ಮುಂದಿನ ತಲೆಮಾರುಗಳಿಗೂ ದ್ರೋಹವೆಸಬಾರದು. ಈ ಕೆಟ್ಟ ಛಾಳಿಗೆ ಕೊಳ್ಳಿ ಇಟ್ಟು ಇದಕ್ಕೆ ಅಂತ್ಯವನ್ನಾಡಬೇಕಿದೆ.

ದೊಡ್ಡವರೆನಿಸಿಕೊಂಡ ದಡ್ಡ ಮಂದಿಗೆ ಈಗ ನಾವು ಪಾಠ ಮಾಡುವ ಸಮಯ ಬಂದಿದೆ. ನಮ್ಮ ಇತಿಹಾಸವನ್ನು ಜಗತ್ತಿಗೆ ತಿಳಿಸಿಕೊಡುವ ಸಮಯ ಬಂದಿದೆ. ಶೋಷಣೆ ಎಂದರೆ ಕೇವಲ ಗುದ್ದಾಟ ಹೊಡೆದಾಟ ಹೊಡೆತ ಅತ್ಯಾಚಾರಗಳಷ್ಟೇ ಅಲ್ಲ. ಈ ರೀತಿಯಾಗಿ ಒಬ್ಬರ ಇತಿಹಾಸವನ್ನು, ಒಬ್ಬರ ಗುರುತಿನ ಹೆಸರನ್ನು, ಅದರ ಅರ್ಥವನ್ನೂ ಕೆಡಿಸುವುದು ಸಹ ಶೋಷಣೆಯೆ. ಇದು ಶೋಷಣೆಗಿಂತಲೂ ದೊಡ್ಡದು. ಇದನ್ನು ನಾವು ಆಗಾಗೇ ಅಲ್ಲಿಂದಲ್ಲೇ ಹೊಸಕಿ ಹಾಕಿತ್ತಿರಬೇಕು.

ಹಿಂದೆ ಬ್ರಿಟೀಷ್‌ ಸರ್ಕಾರವಿದ್ದಾಗಲೂ ಸಹ ಬೇಡರ, ಲಂಬಾಣಿಗಳ ಹಾಗೂ ಇತರೆ ಸಣ್ಣಪುಟ್ಟ ಬುಡಕಟ್ಟು ಸಮುದಾಯಗಳ ಮೇಲೆ ಕಳ್ಳ ದುಷ್ಟ ದರೋಡೆಕೋರ ಎಂಬಂತೆ ಆರೋಪಿಸುವ "ಕ್ರಿಮಿನಲ್‌ ಟ್ರೈಬ್"‌ ಕಾನೂನನ್ನು ರೂಪಿಸಿ ಇವರನ್ನೂ ಶೋಷಿಸಲಾಗಿತ್ತು. ಬ್ರಿಟೀಷರು ಭಾರತವನ್ನು ಬಿಟ್ಟು ತೊಲಗಿದ ನಂತರ ಆ ಕಾನೂನನ್ನು ರದ್ದು ಮಾಡಲಾಯಿತು. ಆದರೆ ಬ್ರಿಟೀಷರು ತೊಲಗಿದರೂ ಸಹ ಆ ಮನಸ್ಥಿತಿ ಇನ್ನೂ ಭಾರತದಲ್ಲಿ ಹಾಗೇ ಉಳಿದಿರುವುದಕ್ಕೆ ಸಾಕ್ಷಿ ಈ ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಕನ್ನಡ ನಿಘಂಟು.

ಹೊಲಯ ಎಂಬ ಪದದ ನಿಜಾರ್ಥ ಹೊಲಕ್ಕೆ ಹೊಂದಿಕೊಂಡವನು, ಹೊಲದವನು, ಹೊಲದೊಡೆಯ, ಮಣ್ಣಿನ ಮಗ, ಸಹಜ ಹುಟ್ಟುಳ್ಳವನು (ವೈದಿಕ ಹುಟ್ಟಿಗೆ ವಿರುದ್ಧವಾಗಿ), ವೈದಿಕಾರ್ಯ ಮತ ಚಾತುರ್ವಣ ವ್ಯವಸ್ಥೆಯಿಂದ ಹೊರಗುಳಿದವನು, ಅವರ್ಣೀಯ, ಆದಿಮ ಬುಡಕಟ್ಟು, ಪಾರ್ವತೀಯ ಮಕ್ಕಳು, ಶಾಕ್ತ ಧರ್ಮದವರು, ತಂತ್ರ ಪಂಥದವರು, ಲೋಕಾಯತರು, ಸಾಂಖ್ಯರು, ಅಜೀವಕರು ಎಂಬಲ್ಲಾ ಅರ್ಥಗಳಿದ್ದರೂ ಸಹ ಇಲ್ಲಿ ದುಷ್ಟ ನೀಚ ಎಂದು ಅರ್ಥ ಕೊಟ್ಟಿರುವುದನ್ನು ಕಂಡರೆ, ಹಿಂದೆ ಬೇಡರನ್ನು ಲಂಬಾಣಿಗಳನ್ನು ಕಳ್ಳರು ದುಷ್ಟರು ಎಂದೆಲ್ಲಾ ಜರಿದು ಕ್ರಿಮಿನಲ್‌ ಟ್ರೈಬ್ಸ್‌ ಎಂಬುದನ್ನು ಸೃಷ್ಟಿಸಿದ್ದ ಬ್ರಿಟೀಷರಂತೆ ಕನ್ನಡ ಸಾಹಿತ್ಯ ಪರಿಷತ್ತಿನೊಳಗೆ ಇಂಡೋ ಐರೋಪ್ಯ/ಬ್ರಿಟೀಷ್‌ ಸಂತತಿಗಳು ನುಸುಳಿರಬಹುದೇನೋ ಎಂಬ ಅನುಮಾನ ಮೂಡದೆ ಇರದು.

ಈ ಉಪಖಂಡ ಭಾರತವನ್ನು, ನಮ್ಮ ಕರ್ನಾಟ ರಾಷ್ಟ್ರವನ್ನು
ಮಹಾನ ಆಳರಸರಾಗಿಯೂ,
ಅರಿವಿಗರಾಗಿಯೂ,
ಕಾವಲಿನ ಕಾವುಂಡರಾಗಿಯೂ,
ತುರುಕಾಳಗದ ವೀರಮಕ್ಕಳಾಗಿಯೂ,
ರಣಕಾಳಗದ ರಣಕಲಿಗಳಾಗಿಯೂ,
ಊಳಿಗದ ಆಳುಗಳಾಗಿಯೂ,
ಕೋಟೆ, ಕೊತ್ತಲು, ಕೆರೆ, ಕಟ್ಟೆ, ಹೊಳೆದಾಟುಗಳಿಗೆ ಬಲಿ ಹಾರವಾಗಿಯೂ
ಗುಡಿಯೊಳಗೆ ಗದ್ದುಗೆಗಳಾಗಿಯೂ
ನೆಟ್ಟುಲಿಂಗಗಳಾಗಿಯೂ
ಈ ನೆಲದ ನಾಗರೀಕತೆಯನ್ನು ಕಟ್ಟಿದವರೂ ಹೊಲಯ ಮಾದಿಗರು ಮಾತ್ರ.
ಇಂಥ ಜನಕುಲಕ್ಕೆ ಇಂಥಹ ಅವಮಾನ ಸಲ್ಲದು. ಇಂಥಹ ತುಚ್ಛೀಕರಣವನ್ನು ಒಪ್ಪಲಾಗದು.


ಬನ್ನಿ, ಜುಲೈ  2ನೇ ತಾರೀಖು 2023, ಭಾನುವಾರ ಸಂಜೆ 5ಗಂಟೆಯಿಂದ 8ಗಂಟೆಯವರೆಗೆ, ನಮ್ಮTwitter (ಟ್ವಿಟರ್‌) ಹಾಗೂ Facebook (ಫೇಸ್‌ಬುಕ್) ಅಭಿಯಾನದಲ್ಲಿ ಪಾಲ್ಗೊಳ್ಳಿ. ಈ ಅಭಿಯಾನವನ್ನು ಬೆಂಬಲಿಸಿ, ಯಶಸ್ವಿಗೊಳಿಸಿ. ಇದು ಕೇವಲ ಆದಿ ಕನ್ನಡ ಕುಲಜನರ ಅಭಿಯಾನವಲ್ಲ, ಎಲ್ಲಾ ಕನ್ನಡ ಮನಸ್ಸುಗಳ, ಕನ್ನಡವಾದಿಗಳ, ಕನ್ನಡ ಪ್ರೇಮಿಗಳ, ಈ ನೆಲದ ಘನತೆಯ ವಿಚಾರ.

ಎಲ್ಲಾ ಕುಲಬಾಂಧವರಲ್ಲಿ ವಿನಂತಿ. ಶನಿವಾರದೊಳಗೆ ನಿಮ್ಮ ನಿಮ್ಮ Twitter (ಟ್ವಿಟರ್‌) ಹಾಗೂ Facebook (ಫೇಸ್‌ಬುಕ್) ಅಕೌಂಟ್‌ಅನ್ನು ಸಕ್ರಿಯವಾಗಿಟ್ಟುಕೊಂಡಿರಿ. ಅಭಿಯಾನ ಭಾನುವಾರ ಸಂಜೆ 5ಕ್ಕೆ ಪ್ರಾರಂಭವಾಗಿ ರಾತ್ರಿ 8ಕ್ಕೆ ಮುಗಿಯಲಿದೆ.

ಮುಂದಿನದ್ದನ್ನು ದಯವಿಟ್ಟು ಗಮನವಿಟ್ಟು ಓದಿ, ಅರ್ಥ ಮಾಡಿಕೊಳ್ಳಿ

Twitter (ಟ್ವಿಟರ್‌) ಹಾಗೂ Facebook (ಫೇಸ್‌ಬುಕ್) ಅಭಿಯಾನ ಮಾಡುವಾಗ ಟ್ವಿಟ್‌ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯರವನ್ನು (@Siddaramaiah), ಪ್ರಿಯಾಂಕ್‌ ಖರ್ಗೆ (@PriyankKharge) ಅವರನ್ನು ಹಾಗೂ  ಕನ್ನಡ ಸಾಹಿತ್ಯ ಪರಿಷತ್ (@Kannada Sahitya Parishat)‌  ಅನ್ನು ಟ್ಯಾಗ್‌ ಮಾಡುವುದನ್ನು ಮರೆಯಬೇಡಿ.


ಅಭಿಯಾನದಲ್ಲಿ ಭಾಗವಾಹಿಸಲು ನಾವು ಹಂಚಲಿರುವ ಇಮೇಜ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ನಿಮ್ಮ Twitter (ಟ್ವಿಟರ್)‌ ಹಾಗೂ Facebook (ಫೇಸ್‌ಬುಕ್‌) ಖಾತೆಯಲ್ಲಿ ಹಂಚಬೇಕು. ಹೀಗೆ ಹಂಚುವಾಗ ಪೋಸ್ಟ್‌ನಲ್ಲಿ ಬರೆದು ಬಳಸಬೇಕಿರುವ Hashtagಗಳು ಕೆಳಗಿನಂತಿವೆ.

Twitter (ಟ್ವಿಟರ್) ಗೆ (ಇದನ್ನು Twitterಗೆ ಕಾಪಿ ಪೇಸ್ಟ್‌ ಮಾಡಬಹುದು) 👇🏽

@Siddaramaiah
@KannadaParishat
@PriyankKharge
#ದಲಿತಜನಕುಲಗಳತುಷ್ಟೀಕರಣನಿಲ್ಲಿಸಿ #stopdemeaningdalitraces #shameonyoukasapa #adikannadakula #dalithistory #jaibhim #jaiholeya #jaiholaya #jaichalavadi #jaimadiga #jaiadijambava #jaiasadi #jaipanar #jainalkadaye #jaikoraga #jaimansa

 

Facebook (ಫೇಸ್‌ಬುಕ್‌) ಗೆ (ಇದನ್ನು Facebookಗೆ ಕಾಪಿ ಪೇಸ್ಟ್‌ ಮಾಡಬಹುದು) 👇🏽


@Siddaramaiah.Official
@kasapaofficial 
 @Priyank Kharge
#ದಲಿತಜನಕುಲಗಳತುಷ್ಟೀಕರಣನಿಲ್ಲಿಸಿ
#stopdemeaningdalitraces
#shameonyoukasapa
#adikannadakula
#dalithistory
#jaibhim #jaiholeya #jaiholaya #jaichalavadi #jaimadiga #jaiadijambava #jaiasadi #jaipanar #jainalkadaye #jaikoraga #jaimansa #jaiparava #jaipambada #jairanyar #jaikusa #jaihallir #jaibaira #jaibakuda #jaiajila #jaimaleya #jaikudiya #jaiADIMA #jaiADIKARNATAKA #jaiADIDRAVIDA #jaiADIANDHRA 

ಹೊಲಯ ಮಾದಿಗರು ಶಿವಕ್ಷತ್ರಿಯರು, ಅದೇ ಕಾರಣಕ್ಕೆ ಅವರನ್ನು ಬಲಗೈ (ಬಲಭುಜ ಕ್ಷತ್ರಿಯ) ಎಡಗೈ (ಎಡಭುಜ ಕ್ಷತ್ರಿಯ) ಎಂದು ಕರೆಯುವುದು...

ಕರ್ನಾಟಕದ ಮಟ್ಟಿಗೆ ಆದಿಮ ಜಾತಿಕುಲಗಳೆನಿಸಿಕೊಳ್ಳುವ ಹೊಲಯ ಮಾದಿಗರನ್ನು ಕ್ರಮವಾಗಿ ಬಲಗೈ ಎಡಗೈ ಎಂದೂ ಗುರುತಿಸುವ ರೂಢಿಯೂ ಇದೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದರೆ ಇದರ ಹಿನ್ನೆಲೆ ಇತಿಹಾಸ ಬಹಳಷ್ಟು ಜನರಿಗೆ ತಿಳಿದಂತಿಲ್ಲ. ಸಾಮಾಜಶಾಸ್ತ್ರೀಯ ಸಂಶೋಧಕರ ಪ್ರಕಾರ ಹಿಂದೆ ಈ ಎಡಗೈ ಬಲಗೈ ವಿಂಗಡನೆ ಕೇವಲ ಹೊಲಯ ಮಾದಿಗರಿಗಷ್ಟೇ ಸೀಮಿತವಾಗದೇ ಕನ್ನಡ ದೇಶದ ಹೊಲೆಹದಿನೆಂಟು ಜಾತಿಗಳಿಗೂ ಅನ್ವಯಿಸುತ್ತಿತ್ತಂತೆ. ರಾಜಾಡಳಿತ ರಾಜತಂತ್ರಕ್ಕೆ ಹಾಗೂ ಬೇಸಾಯಕ್ಕೆ ಸಂಬಂಧಿಸಿದ ಜಾತಿಕುಲಗಳನ್ನೆಲ್ಲವನ್ನೂ ಬಲಗೈ ಜಾತಿಗಳೆಂದು, ಪಶುಪಾಲನೆ, ಬೇಟೆ, ಕಲಾವಂತಿಕೆ, ಕುಶಲಕಾರ್ಮಿಕ, ಹಾಗೂ ಕಸುಬಿನಾಧಾರದ ಜಾತಿಗಳನ್ನೆಲ್ಲಾ ಎಡಗೈ ಜಾತಿಗಳೆಂದು ಗುರುತಿಸಲಾಗಿದತ್ತೆಂದು ಹೇಳಲಾಗುತ್ತದೆ. ಆದರೆ ಈ ಬೇಧ ಇಂದು ಉಳಿದೆಲ್ಲಾ ಜಾತಿಗಳಲ್ಲಿ ಮರೆಯಾಗಿ ಹೊಲಯ ಮಾದಿಗರಿಗೆ ಮಾತ್ರ ಸೀಮಿತಗೊಂಡದ್ದು ಹೇಗೆ ಎಂಬುದು ಅಸ್ಪಷ್ಟವಾಗೇ ಉಳಿದುಬಿಟ್ಟಿದೆ. ಇದೆಲ್ಲದರ ನಡುವೆ ೧೭-೧೮ನೇ ಶತಮಾನದ ಜೈನ ಬರಹಗಾರ ದೇವಚಂದ್ರನು ತನ್ನ ರಾಜಾವಳಿ ಕಥಾಸಾರದಲ್ಲಿ ದಾಖಲಿಸಿರುವ ಒಂದು ಆದಿಶೈವ ಜನಪದ ಕಥೆಯು ಈ ಗೊಂದಲವನ್ನು ಪರಿಹರಿಸುವಂತೆ ಕಾಣಿಸುತ್ತದೆ.



ವೈದಿಕ ಪುರಾಣದಲ್ಲಿ ನಾಲ್ಕು ವರ್ಣೀಯರು ತಮ್ಮ ಗುಣಸೂಚಿಸುವಂತಹ ಬ್ರಹ್ಮನ ಅಂಗಗಳಿಂದ ಹುಟ್ಟಿದ ಕಥೆಯಂತೆ ಹೊಲಯ ಮಾದಿಗರಿಗೂ ಇಂಥಹ ಒಂದು ಪೌರಾಣಿಕ ಹಿನ್ನೆಲೆ ಇದೆ ಎಂಬುದು ಕೆಲವರಿಗೆ ಗೊತ್ತು, ಹಲವರಿಗೆ ಗೊತ್ತಿಲ್ಲ! ಪಾರ್ವತಿಯ ಹೊಲೆಮನೆ, ಎಂದರೆ ಪಾರ್ವತೀಯ ಗರ್ಭದಿಂದ ಜನಿಸಿದ ಅವಳಿ ಮಕ್ಕಳು ಹೊಲಯ ಮಾದಿಗರು ಎಂಬ ಕಥೆ ಹೊಲಯ ಮಾದಿಗರ ಆದಿಮ ಶಾಕ್ತ ಮೂಲದ ಬಗೆಗಿನ ಮೊಟ್ಟ ಮೊದಲ ಪೌರಾಣಿಕ ಜಾನಪದೀಯ ಹಿನ್ನೆಲೆಯಾದರೆ, ದೇವಚಂದ್ರ ದಾಖಲಿಸಿರುವ ಕಥೆಯು ಹೊಲಯ ಮಾದಿಗರು ಶಾಕ್ತ ಪಂಥದೊಡನೆ ಆದಿಶೈವ ಜನಪದ ಪಂಥದಲ್ಲಿಯೂ ಸ್ಥಾನ ಪಡೆದುಕೊಂಡದರ ಸೂಚಕವಾಗೇ ನಿಲ್ಲುತ್ತದೆ. ಈ ಆದಿಶೈವದ ಜನಪದ ಕಥೆಯ ಪ್ರಕಾರ ಪೂರ್ವಾಭಿಮುಖವಾಗಿ ಮುಳ್ಳುಗದ್ದುಗೆಯ ಮೇಲೆ, ಎಂದರೆ ಮೂಡಲಗಿರಿ ಸಾಲುಗಳ ಗದ್ದುಗೆಯ ಮೇಲೆ ಕುಳಿತ ಶಿವನ ಬಲಭುಜದಿಂದ ಹುಟ್ಟಿದ ಹೊಲಯರು ಬಲಭುಜ ಶಿವಕ್ಷತ್ರಿಯರೆಂದು, ಎಡಭುಜದಿಂದ ಹುಟ್ಟಿದ ಮಾದಿಗರನ್ನು ಎಡಭುಜ ಶಿವಕ್ಷತ್ರಿಯರೆಂದು ಕರೆಯಿಸಿಕೊಂಡತಂತೆ. ತನ್ನ ಬಲಕ್ಕಿದ್ದ ದಕ್ಷಿಣ ದೇಶವನ್ನು ಹೊಲಯರಿಗೂ, ತನ್ನ ಎಡಕ್ಕಿದ್ದ ಉತ್ತರ ದೇಶವನ್ನು ಮಾದಿಗರಿಗೂ ಗೊತ್ತುಪಡಿಸಿ ಆಳಲು ಆಜ್ಞಿಸಿದನೆಂಬ ಕಥೆ ಇದೆ.

ಇಲ್ಲಿ ಒಂದು ವಿಚಾರವನ್ನು ನಾವು ಗಮನಿಸಲೇ ಬೇಕಾಗಿದೆ. ಆರ್ಯ ಮತದಲ್ಲಿ ವರ್ಣಗಳ ಹುಟ್ಟಿನ ಬಗೆಗಿರುವ ಪೌರಾಣಿಕ ಕಥೆಗಳಲ್ಲಿ ಕೈ/ತೋಳು/ಭುಜವು ಕ್ಷಾತ್ರತ್ವದ ಸಂಕೇತವಾಗಿದೆ ಎಂಬುದನ್ನು ನಾವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಇದೇ ಕಾರಣಕ್ಕೆ ಆರ್ಯಮತದ ಕ್ಷತ್ರಿಯರು ಬ್ರಹ್ಮನ ತೋಳಿನಿಂದ ಹುಟ್ಟಿದರೆಂಬ ಪೌರಾಣಿಕ ಹಿನ್ನೆಲೆ ಇರುವುದು.


ಇನ್ನೂ ಇದಕ್ಕೆ ಪೂರಕವೆಂಬಂತೆ ಈಗಿನ ಹಲವು ಭಗೋಳಿಕ ಹಾಗೂ ಜನಾಂಗ ಶಾಸ್ತ್ತೀಯ ಅಂಶಗಳನ್ನು ನಾವು ಗಮನಿಸಬಹುದು. ಉತ್ತರ ಭಾರತದ ಇತಿಹಾಸವು ಮೋರಿಯ ಬುಡಕಟ್ಟಿನ ಮೌರ್ಯ ರಾಜಮನೆತನದಿಂದ ಉತ್ತುಂಗಕ್ಕೇರಿ ಜಗದ್ವಿಖ್ಯಾತಿಗೊಳ್ಳುತ್ತದೆ. ಈ ಮೋರಿಯ ಬುಡಕಟ್ಟು ಮಾತಂಗ (ಮಾದಿಗ) ಕುಲಕ್ಕೆ ಸಂಬಂಧಿಸಿದ ಜನಕುಲವಾಗಿದೆ ಎಂಬುದು ಹಲವು ಇತಿಹಾಸಕಾರರ ಅಭಿಪ್ರಾಯ. ಗಣಪತಿ ಎಂಬ ಕಲ್ಪನೆಯು ಸಹ ಇದೇ ಬುಡಕಟ್ಟಿನದ್ದು. ಹಾಗೆಯೇ ಮಾತಂಗರೇ ಯಾದವರ ಪೂರ್ವಜರು ಎಂಬುದು ನಿರೂಪಿತ ವಿಚಾರವಾಗಿದ್ದು ೬-೭ನೇ ಶತಮಾನದ ನಂತರದಲ್ಲಿ ಉತ್ತರ ಭಾರತವನ್ನಾಳಿದ ಬಹುತೇಕ ರಾಜಮನೆತನಗಳು ಇದೇ ಮೂಲದವಾಗಿವೆ.

ಇನ್ನೂ ದಕ್ಷಿಣ ಭಾರತದಲ್ಲಿ ಈ ವಿಚಾರದಲ್ಲಿ ಹೆಚ್ಚು ಸ್ಪಷ್ಟವಾದ ನಿದರ್ಶನಗಳನ್ನು ನಾವು ಗಮನಿಸಬಹುದು. ಇಲ್ಲಿ ಚಾಲುಕ್ಯರಿಂದ ಹಿಡಿದು ಚೋಳ ಚೇರರವರೆಗೂ ಬಹುತೇಕ ಅರಸೊತ್ತಿಗೆಗಳು ಹೊಲಯ ಆರಂಬಗಾರ ಮೂಲದವರು ಹಾಗೂ ಸ್ಕಂದ ದೇವರ ಆರಾಧಕರೇ ಆಗಿದ್ದಾರೆ. ೧೦-೧೧ನೇ ಶತಮಾನದ ಕಾಲದಲ್ಲಿ ಇದೇ ಕುಲಗಳು ವಲಸೆಯಾದ ಊಳಿಗ ಬೇಸಾಯಗಾರ ಜನಕುಲಗಳೊಂದಿಗೆ ಸಂಕರಗೊಂಡು ರಾಜತಂತ್ರ ಸ್ಥಾನಪಲ್ಲಟಗಳಿಂದ ಸ್ಥಾನಮಾನಗಳಲ್ಲಿ ಬದಲಾವಣೆಗಳಾಗುತ್ತವೆ.

ಇಲ್ಲಿ ಗಣಪತಿ ಹಾಗೂ ಸ್ಕಂದ, ಎಡ ಮತ್ತು ಬಲ, ಪಶುಪಾಲನೆ ಮತ್ತು ಬೇಸಾಯ ಎಲ್ಲವೂ ಸಹ ಎಡಗೈ ಮಾದಿಗರು ಹಾಗೂ ಬಲಗೈ ಹೊಲಯರಿಗೆ ಸಂಬಂಧಿಸಿದ ವಿಚಾರಗಳೇ ಆಗಿದ್ದು, ಶಿವಕ್ಷತ್ರಿಯ ಎಂಬ ಪದಕ್ಕೆ ಅದರ ಕಥಾ ಹಿನ್ನೆಲೆಗೆ ಹಿಂಬು ಕೊಡುವಂತಿದೆ.

ಭರತ ಖಂಡದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಆದಿಮ – ಪ್ರಕೃತಿ ಹಾಗೂ ಪೂರ್ವಜರ ಆರಾಧನೆ > ಆದಿಮ – ಶಾಕ್ತ > ಆದಿಮ ಶಾಕ್ತ - ಆದಿಮ ಶೈವ > ಆದಿಮ ಶಾಕ್ತ - ಆದಿಮ ಜೈನ > ಆದಿಮ ಶಾಕ್ತ - > ಆದಿಮ ಬೌದ್ದ > ಆದಿಮ ಶಾಕ್ತ - ಆದಿಮ ವೈಷ್ಣವಗಳು ಕ್ರಮವಾಗಿ ತಮ್ಮ ಧಾರ್ಮಿಕ ಪಾರುಪತ್ಯವನ್ನು ಸ್ಥಾಪಿಸುತ್ತಾ ತಮ್ಮೊಳಗೇ ಇನ್ನೂ ಹತ್ತು ಹಲವು ಕವಲುಗಳಿಗನ್ನು ಬೆಳೆಸಿಕೊಂಡವು. ಆದರೆ ಇಲ್ಲೆಲ್ಲಾ ಶಾಕ್ತವು ಸಾಮಾನ್ಯವಾಗಿರುವುದನ್ನು ಕಾಣಬಹುದು. ಇದು ಮಾತೃಗಣದವರಾದ ಹೊಲಯ ಮಾದಿಗರು ಆಯಾ ಮತಪಂಥಗಳ ಆದಿಮ ಸ್ಥಿತಿಯ ಮೇಲೆ ತೋರಿದ್ದ ಪ್ರಭಾವದ ಸೂಚಕವೇ ಆಗಿದೆ. ಮೂಲತಃ ಆದಿಮರಾಗಿ ಶಾಕ್ತ ಮಾತೃಗಣದವರಾಗಿದ್ದ ಹೊಲಯ ಮಾದಿಗರು ಆದಿಶೈವರಲ್ಲಿ ಶಿವಕ್ಷತ್ರಿಯರೆನಿಸಿಕೊಳ್ಳುತ್ತಾರೆ. ಬಹುಶಃ ಈ ಕಾಲಕ್ಕೆ ಹೊಲಯ ಮಾದಿಗರು ಆರ್ಯ ಮತೀಯರೊಡನೆ ಮುಖಾಮುಖಿಯಾಗಿ ಸಂಘರ್ಷ ಅಥವಾ  ಸಾಂಸ್ಕೃತಿಕ ಕೂಡುಕೊಳ್ಳುವಿಕೆಯ ಪರಿಸ್ಥಿತಿಯನ್ನು ಎದುರಿಸಿದ್ದರಿಂದಲೋ ಏನೋ ಶಿವಸಂಸ್ಕೃತಿಯ ಅಡಿಯಲ್ಲಿ ಹೊಲಯ ಮಾದಿಗ ಮೂಲದ ಆಳುವ ಜನಕುಲಗಳಿಗೆ ಎಡಭುಜ/ಬಲಭುಜ ಶಿವಕ್ಷತ್ರಿಯರೆಂಬ ಪಟ್ಟ ಸಿಕ್ಕಿದ್ದಾಗಿರಬಹುದು. ಇದಿಷ್ಟೇ ಅಲ್ಲದೇ, ಆದಿಮ ಶಾಕ್ತ – ಆದಿಮ ಜೈನರೊಳಗೆ ಪರಮಭಟ್ಟಾರಕರೆಂದೂ, ಆದಿಮ ಶಾಕ್ತ – ಆದಿಮ ಬೌದ್ದರಲ್ಲಿ ಮಹಾಮಲ್ಲ ಸಾಕಿಯ(ಶಾಕ್ಯ)ರೆಂದು, ಆದಿಮ ಶಾಕ್ತ – ಆದಿಮ ವೈಷ್ಣವದೊಳಗೆ ತಿರುಕುಲ – ಜಾಂಬವ/ಶಂಭು ಕುಲವೆಂದು ಹೊಲಯ ಮಾದಿಗರನ್ನು ಗುರುತಿಸಿ ಸಾಂಸ್ಕೃತಿಕ ಗೌರವವನ್ನು ತೋರಲಾಗಿದೆ.


 

ಸಮಾನತೆಯ ಪ್ರತಿಪಾದಕ, ದಾರ್ಶನಿಕ ನಾಯಕ, ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ, ನೀರಾವರಿ ತಜ್ಞ, ಮತ್ತು ಭಾರತದ ಸಂವಿಧಾನ ಶಿಲ್ಪಿ

ಸಮಾನತೆಯ ಪ್ರತಿಪಾದಕ, ದಾರ್ಶನಿಕ ನಾಯಕ, ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ, ನೀರಾವರಿ ತಜ್ಞ, ಮತ್ತು ಭಾರತದ ಸಂವಿಧಾನ ಶಿಲ್ಪಿ ಡಾ. ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ಅವರ 132 ನೇ ಜಯಂತಿಯ ಸವಿನೆನಪು

ಅವರು ನಮ್ಮನಿಮ್ಮಂತೆಯೇ ಇದ್ದವರು, ದೊಡ್ಡ ಕನಸುಗಳನ್ನು ಕಟ್ಟಿಕೊಂಡಿದ್ದ ಲೋವರ್‌ ಮಿಡಲ್‌ ಕ್ಲಾಸ್‌ ವರ್ಗದ ವ್ಯಕ್ತಿ. ಆದರೆ ಅವರ ಗುರಿಯತ್ತ ಸಾಗುವ ಅವರ ಹಾದಿಯಲ್ಲಿನ ಸವಾಲು ಕೇವಲ ಬಡತನ ಮಾತ್ರವಾಗಿರಲಿಲ್ಲ. ಜಾತಿವಾದಿಗಳ ಜಾತೀಯತೆ ತಾರತಮ್ಯಗಳೂ ಸಹ ಅವರು ಎದುರಿಸಿದ ಸವಾಲುಗಳ ಪೈಕಿ ದೊಡ್ಡದು, ಅವರ ಸಮಾನತೆಯ ಸಿದ್ದಾಂತ ಮತ್ತು ಬೌದ್ಧಿಕತೆ ಮತ್ತು ಭಾರತೀಯ ಸಮಾಜದ ವಂಚಿತ ವರ್ಗಗಳ ಉನ್ನತಿಗೆ ಅವರು ಪಟ್ಟ ಶ್ರಮ ದೊಡ್ಡದು. ಅವರು ತಮ್ಮ ಕುಟುಂಬ ಅಥವಾ ತಮ್ಮ ಜಾತಿಯ ಜನರ ಜವಾಬ್ದಾರಿಯನ್ನು ಮಾತ್ರ ಹೊಂದಿರಲಿಲ್ಲ ಆದರೆ ಪ್ರತಿನಿಧಿತ್ವದಿಂದ ವಂಚಿತವಾಗಿದ್ದ ಎಲ್ಲಾ ಜಾತಿಗಳು ಮತ್ತು ಜನಾಂಗಗಳಿಗಾಗಿ ಶ್ರಮಿಸಿ ಅವರನ್ನು ಬೆಳಕಿನೆಡೆಗೆ ನಡೆಯುವಂತೆ ಮಾಡಿದರು. ಸ್ತ್ರೀ ಪ್ರತಿನಿಧಿತ್ವಕ್ಕೆ ಅಂಬೇಡ್ಕರರ ಕೊಡುಗೆ ದೊಡ್ಡದು. ಇಂದು ಭಾರತದ ಪ್ರತಿಯೊಂದು ಹೆಣ್ಣು ಮಗಳು ಸಹ ತಮಗಿರುವ ಹಕ್ಕು ಅಧಿಕಾರ ಪ್ರತಿನಿಧಿತ್ವಕ್ಕೆ ಅಂಬೇಡ್ಕರರಿಗೆ ಕೃತಜ್ಞರಾಗಿಬೇಕೆಂದರೆ ತಪ್ಪಾಗಲಾರದು. ಇಂದು, ನಾವು ಅವರ ಕಾಲದಲ್ಲಿದ್ದಕ್ಕಿಂತ ಹೆಚ್ಚು ವ್ಯವಸ್ಥೆಗಳನ್ನು ಹೊಂದಿದ್ದೇವೆ ಅದಕ್ಕೆ ತಕ್ಕಂತೆ ಅವಕಾಶಗಳನ್ನೂ ಸಹ ಹೊಂದಿದ್ದೇವೆ. ಅಂಬೇಡ್ಕರರನ್ನು ಸ್ಪೂರ್ತಿಯಾಗಿ  ನಾವು ನಿರಾಶೆಗೊಳ್ಳದೆ ನಮ್ಮ ಗುರಿಯತ್ತ ಹೆಜ್ಜೆ ಮುಂದುವರೆಸೋಣ!




Remembering Dr. Bhim Rao Ram Ji Ambedkar, a Proponent of Equality, visionary leader, social reformer, Economist, Irrigation Specialist, and architect of the Constitution of India, on his 132nd Birthday

He was just like us, a guy from the lower middle class who dreamt of big. But the challenges in his path towards his goal were not only poverty but also the caste discrimination of casteist classes who wasn’t happy with his self-upliftment and intellectualism and intolerant towards the upliftment of deprived classes of Indian society. He not only had a responsibility to his family or his caste people but to all those misrepresented castes and creeds, and he made them a way to walk towards the light. Ambedkar's contribution to the representation of women and their rights was immense. It wouldn't be an exaggeration to thank Ambedkar for the rights and representation that every girl child in India has today. Today, we are facilitated more than his time, and we should take him as an inspiration aspect from him to cross obstacles in our path. So let’s not feel down, and keep on nearing our goals like pioneers!

ಬಂಜಾರರನ್ನು ಬಲಗೈ ದಲಿತರೆಂದು ಬಿಂಬಿಸುತ್ತಾ ಗೊಂದಲವನ್ನುಂಟು ಮಾಡಿ ಹೊಲಯರ (ಚಲವಾದೇರ) ಮತ್ತು ಮಾದಿಗರ ನಡುವೆ ಮನಸ್ತಾಪವನ್ನುಂಟು ಮಾಡುತ್ತಿರುವ ಮಾಧ್ಯಮಗಳು ಹಾಗೂ ಕೆಲ ಪ್ರಭಾವಿಗಳು!

ಬಂಜಾರರನ್ನು ಬಲಗೈ ದಲಿತರೆಂದು ಬಿಂಬಿಸುತ್ತಾ ಗೊಂದಲವನ್ನುಂಟು ಮಾಡಿ ಹೊಲಯರ ಮತ್ತು ಮಾದಿಗರ ನಡುವೆ ಮನಸ್ತಾಪವನ್ನುಂಟು ಮಾಡುತ್ತಿರುವ ಕರ್ನಾಟಕದ ಸುದ್ದಿ ಮಾಧ್ಯಮಗಳು ಹಾಗೂ ಸಮಾಜಿಕ ಜಾಲತಾಣದ ಕೆಲ ಪ್ರಭಾವಿಗಳು!

BTVಯ ರಾಧಾ ಹಿರೇಗೌಡರ್‌ ಅವರು ಒಳಮೀಸಲಾತಿಯ ವಿಚಾರವಾಗಿ ಡಿಬೇಟ್‌ ಪ್ರೋಗ್ರಾಮ್‌ ನಡೆಸುತ್ತಾ ಹೊಲಯ ಸಂಬಂಧಿತ ಜಾತಿಗಳನ್ನು ಹಾಗೂ ಬಂಜಾರರನ್ನು ಒಟ್ಟಿಗೆ "ಬಲಗೈ" ಎಂದು ಕರೆದು, ಮಾದಿಗರು ಹಾಗೂ ಸಂಬಂಧಿತ ಜಾತಿಗಳನ್ನು "ಎಡಗೈ" ಎಂದು ಕರೆದು ಗೊಂದಲವನ್ನು ಸೃಷ್ಟಿಸಿದ್ದರು.

ಇದೇ ಛಾಳಿ ಮುಂದುವರೆದು ಸಾಮಾಜಿಕ ಜಾಲತಾಣದಲ್ಲಿಯೂ ಸಹ ಕೆಲವರು ಹೀಗೆ ಬಲಗೈ ಎಂದರೆ ಹೊಲಯರು, ಹೊಲಯ ಸಂಬಂಧಿತ ಜಾತಿಗಳು ಮತ್ತು ಬಂಜಾರರು ಎಂಬಂತೆಯೆ Congress ಹಾಗೂ BJP ಅಭ್ಯರ್ಥಿಗಳ ಬಿಡುಗಡೆಯಾದ ಪಟ್ಟಿಯನ್ನು ಹಂಚಿ ಅದರೊಡನೆ ಬಲಗೈ ಸಮುದಾಯಗಳಿಗೆ ಸಿಂಹಪಾಲು ಎಂಬಂತೆ ಬರೆದು ಹಂಚುತ್ತಿದ್ದರು! ಆದರೆ ವಾಸ್ತವದಲ್ಲಿ ನಿಜಕ್ಕೂ ಸೀಟ್/ಟಿಕೆಟ್‌ ಹಂಚಿಕೆಯ ವಿಷಯದಲ್ಲಿ ಸಿಂಹಪಾಲು ಪಡೆದಿದ್ದದ್ದು ಲಂಬಾಣಿ ಅಭ್ಯರ್ಥಿಗಳು. ಇನ್ನೂ ಇವರು ಹೊಲಯರನ್ನು ಹಾಗೂ ಬಂಜಾರರನ್ನು ಸೇರಿಸಿ ಕೊಡುತ್ತಿದ್ದ ಸೀಟ್‌/ಟಿಕೆಟ್‌ಗಳ ಲೆಕ್ಕವಂತು ಎಡಗೂ ಸಮುದಾಯವಾದ ಮಾದಿಗರನ್ನು ತಮಗಾದ ಅನ್ಯಾಯಕ್ಕೆ ಕೆರಳಿಸುವಂತಿತ್ತು ಎಂಬುದೇನು ಸುಳ್ಳಲ್ಲ. ಇತ್ತೀಚೆಗೆ ಹೊಲಯ ಮಾದಿಗರ ವೈಮನಸ್ಯವೂ ಸ್ವಲ್ಪ ತಣ್ಣಗಾಗಿದ್ದರೂ ಸಹ ಆಗಾಗೆ ಅದು ವ್ಯಕ್ತವಾಗುವುದೇನೂ ಸುಳ್ಳಲ್ಲ. ಅದರ ಮೇಲೆ ಇಂಥಹ ಯಡವಟ್ಟು ಸುದ್ದಿಗಳು ಈ ಅವಳಿ ಸಮುದಾಯಗಳ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸುವ ಕುತಂತ್ರವಲ್ಲದೆ ಮತ್ತೇನು?


ಜನಸಂಖ್ಯೆಗೆ ಅನುಗುಣವಾಗಿ ಹೊಲಯರಿಗೆ ಹಾಗೂ ಹೊಲಯ ಸಂಬಂಧಿತ ಜಾತಿಗಳಿಗೆ 15 ರಿಂದ 16, ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳಿಗೆ  16 ರಿಂದ 17, ಲಂಬಾಣಿ ಹಾಗೂ ಭೋವಿಗಳಿಗೆ  ತಲಾ 2 ರಿಂದ 3  ಹಾಗೂ ಉಳಿದ ಸಮುದಾಯಗಳಿಗೆ 1 ರಿಂದ 2 ಸೀಟ್‌/ಟಿಕೆಟ್‌ಗಳ ಹಂಚಿಕೆಯಾಗಬೇಕು, ಆದರೆ ಇಲ್ಲಿ ಆಗುವುದೇ ಬೇರೆ!

ಸದ್ಯಕ್ಕೆ ನಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕದ ಅವರ್ಣೀಯ ವರ್ಗಗಳೆಂದೇ ಪರಿಗಣಿಸಲ್ಪಟ್ಟಿದ್ದ ಪರಿಶಿಷ್ಟ ಜಾತಿ (SC) ಪಟ್ಟಿಯಲ್ಲಿ ಅವರ್ಣೀಯರಲ್ಲದ ಸ್ಪಶ್ಯ ಸಮುದಾಯಗಳಾದ ಬಂಜಾರ (ಲಂಬಾಣಿ) ಹಾಗೂ ಭೋವಿಗಳನ್ನು ಬಹಳ ಹಿಂದೆಯೇ ರಾಜಕೀಯ ಹಿತಾಸಕ್ತಿಗಳಿಂದ ಸೇರಿಸಿದ್ದು ನಮಗೆಲ್ಲರಿಗೂ ತಿಳಿದೇ ಇದೆ. ನೈಜ್ಯ ಅವರ್ಣೀಯರ ಒಗ್ಗಟಿನ ಕೊರತೆಯಿಂದಲೂ ಹಾಗೂ ಅದೇ ಅವರ್ಣೀಯ ರಾಜಕಾರಣಿಗಳ ರಾಜಕೀಯ ಸ್ವಹಿತಾಸಕ್ತಿಯಿಂದಲೂ ಅಂದು ಇದನ್ನು ವಿರೋಧಿಸುವವರು ಯಾರೂ ಇರಲಿಲ್ಲ. ಆದರೆ ಇಂದು ಅದೇ ಒಂದು ದೊಡ್ಡ ಸಮಸ್ಯೆಯಾಗಿ SC ವರ್ಗದೊಳಗಿನ ದೊಡ್ಡ ಸಂಖ್ಯೆಯ ಹೊಲಯ (ಚಲವಾದಿ) ಹಾಗೂ ಮಾದಿಗ ಸಮುದಾಯಗಳಿಗೆ ಪರಿಣಮಿಸಿರುವುದಂತು ಸತ್ಯ.

BJP ಹಾಗೂ Congress ಅಂಥಹ ದೊಡ್ಡ ಪಕ್ಷಗಳು ಇಂದು ಇದೇ ಸಮಸ್ಯೆಯನ್ನ ಅವರ್ಣೀಯ ಜನಸಮುದಾಯಗಳ ಹಿತಾಸಕ್ತಿಗೆ ವಿರುದ್ದವಾಗಿ ಹಾಗೂ ಅವರ್ಣೀಯರ ಅಭಿವೃದ್ದಿ ಬೆಳವಣಿಗೆಗಳ ವಿರುದ್ದವಾಗಿ ಬಳಸಿಕೊಳ್ಳಲು ನಿಂತಿರುವುದು ದೊಡ್ಡ ದುರಂತವೇ ಸರಿ. 

ಅದರಲ್ಲೂ ಇಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು ಕರ್ನಾಟಕದ ಒಟ್ಟು 224 ಕ್ಷೇತ್ರಗಳ ಪೈಕಿ ಒಟ್ಟು 36  ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರಗಳಿದ್ದು ಇವುಗಳಲ್ಲಿ ಎಷ್ಟು ಕ್ಷೇತ್ರದಲ್ಲಿ  68 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿರುವ ಅವರ್ಣೀಯರಿಗೆ, ಎಂದರೆ ಹೊಲಯರ (33 ಲಕ್ಷ) ಹಾಗೂ ಮಾದಿಗರ (35 ಲಕ್ಷ) ಸಂಬಂಧಿ ಜಾತಿಯ ಅಭ್ಯರ್ಥಿಗಳಿಗೆ ಹಾಗೂ, ಸುಮಾರು 20 ಲಕ್ಷದಷ್ಟು ಇರುವ ಸ್ಪೃಶ್ಯ ಸಮುದಾಯಗಳಾದ ಬಂಜಾರ/ಲಂಬಾಣಿ (11 ಲಕ್ಷ) ಹಾಗೂ ಭೋವಿ (9 ಲಕ್ಷ)  ಸಮುದಾಯದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಗಲಿದೆ ಎಂದು ಕಾದು ನೋಡಬೇಕಾಗಿದೆ ಎನ್ನುಷ್ಟರಲ್ಲೇ BJP ಪಕ್ಷವು 36 SC ಮೀಸಲು ಕ್ಷೇತ್ರಗಳಲ್ಲಿ 29 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ನಮ್ಮ ಅನುಮಾನವನ್ನು, ತಮ್ಮ ಅವರ್ಣೀಯ ದಲಿತ ವಿರೋಧಿತನವನ್ನು ಬಯಲು ಮಾಡಿಕೊಂಡಿದೆ.

ಒಟ್ಟು 36 ಕ್ಷೇತ್ರಗಳ ಪೈಕಿ 29 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಾಗಿದ್ದು ಇದರಲ್ಲಿ ಪರಿಶಿಷ್ಟ ಜಾತಿ ವರ್ಗದಲ್ಲಿಯೇ ಅತ್ಯಂತ ಅಲ್ಪಸಂಖ್ಯಾತ ಜನಸಮುದಾಯವಾದ ಲಂಬಾಣಿ (9) ಹಾಗೂ ಭೋವಿ (5) ಸಮಾಜದ ಒಟ್ಟು 15 ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟಿದ್ದು ಬಹುಸಂಖ್ಯಾತರಾದ ಹೊಲಯರು (6) ಮಾದಿಗರು (8) ಹಾಗು ಸಂಬಂಧಿತ ಸಮುದಾಯದ ಒಟ್ಟು 14 ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟಿದೆ! ಇದು ಜನಪ್ರತಿನಿಧಿತ್ವ ಅನ್ಯಾಯವಲ್ಲದೇ ಮತ್ತಿನ್ನೇನು? 68 ಲಕ್ಷ ಜನಸಂಖ್ಯೆಯ ಹೊಲಯ ಮಾದಿಗರ ರಾಜಕೀಯ ಪ್ರತಿನಿಧಿತ್ವ 20 ಲಕ್ಷದಷ್ಟಿರುವ ಲಂಬಾಣಿ ಭೋವಿಗಳ ಪ್ರತಿನಿಧಿತ್ವಕ್ಕಿಂತಲೂ ಕಡಿಮೆಯೆ? ಈಗಾಗಲೇ ಕನ್ನಡ ಪರರು ಸಹ ಇದು BJPಯ ಕನ್ನಡ ವಿರೋಧಿತನ, ಕನ್ನಡ ಪರಿಶಿಷ್ಟರ ರಾಜಕೀಯ ಮೀಸಲಾತಿಯನ್ನು ಅಲ್ಪಸಂಖ್ಯಾತ ಕನ್ನಡೇತರರನ್ನು ಓಲೈಸಲು ಬಳಸಿಕೊಂಡು ಕನ್ನಡ ವಿರೋಧಿತನವನ್ನು ತೋರುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಅದರಲ್ಲೂ ದೊಡ್ಡ ಹೊಲಗೇರಿ ಎಂದು ಕರೆಸಿಕೊಳ್ಳುವ ಮಂಡ್ಯದ ಮಳವಳ್ಳಿಯಲ್ಲಿ BJP ಅಭ್ಯರ್ಥಿ ಭೋವಿ ಸಮಾಜದವರು. ಹೊಲಯ ಮಾದಿಗರೇ ಹೆಚ್ಚಿರುವ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ BJP ಅಭ್ಯರ್ಥಿ ಬಂಜಾರ ಸಮುದಾಯದವರು! ಇನ್ನೂ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿರುವ ಬಂಜಾರ ಭೋವಿ ಮತದಾರರ ಎದುರು ಲಕ್ಷಗಳ ಸಂಖ್ಯೆಯಲ್ಲಿರುವ ಹೊಲಯ ಮಾದಿಗ ಮತದಾರರನ್ನು ಕಡೆಗಣಿಸಿರುವುದಂತು ಸ್ಪಷ್ಟವಾಗಿ ತಿಳಿಯುತ್ತಿದೆ.

ಇನ್ನೊಂದು ಕಡೆ Congress ಸಹ ಮೀಸಲು ಕ್ಷೇತ್ರದ 22 ಅಭ್ಯರ್ಥಿ ಪಟ್ಟಿಯನ್ನು ಘೋಷಣೆ ಮಾಡಿದ್ದು ಅದು ಸ್ವತಃ ಹೊಲಯ ಮಾದಿಗರ ನಡುವೆಯೇ ಮನಸ್ತಾಪವನ್ನುಂಟು ಮಾಡುವಂತಿದೆ. ಹನ್ನೆರೆಡು ಹೊಲಯ ಸಂಬಂಧಿತ ಜಾತಿಯ ಅಭ್ಯರ್ಥಿಗಳಿಗೆ, ನಾಲ್ವರು ಮಾದಿಗ ಸಂಬಂಧಿತ ಜಾತಿಯ ಅಭ್ಯರ್ಥಿಗಳಿಗೆ, ನಾಲ್ವರು ಲಂಬಾಣಿ ಅಭ್ಯರ್ಥಿಗಳಿಗೆ, ಹಾಗೂ‌ ಇಬ್ಬರು ಭೋವಿ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಿದೆ. ಮಾದಿಗರು ಹೆಚ್ಚಿರುವಂತಹ ಕಲ್ಯಾಣ ಕರ್ನಾಟಕ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಹ ಹೊಲಯ ಸಂಬಂಧಿ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ. ಇನ್ನೂ ಹಲವು ಕಡೆ ಮಾದಿಗರು ಹೆಚ್ಚಿರುವ ಕ್ಷೇತ್ರಗಳಲ್ಲಿ ಭೋವಿ ಅಭ್ಯರ್ಥಿಗಳಿಗೆ ಹಾಗೂ ಹೊಲಯರು ಹೆಚ್ಚಿರುವ ಕಡೆ ಲಂಬಾಣಿ ಅಭ್ಯರ್ಥಿಗಳಿಗೂ ಟಿಕೆಟ್‌ ನೀಡಿದ್ದು, ಕಾಂಗ್ರೆಸ್‌ ವಿಚಾರದಲ್ಲಿ ಮಾತ್ರ ಇದು ಅವರ್ಣೀಯ v/s ಸ್ಪೃಶ್ಯ ತಿಕ್ಕಾಟವಾಗದೇ ಹೊಲಯರು ಮತ್ತು ಮಾದಿಗರೇ ಕಿತ್ತಾಡುವಂತಾಗಿದೆ. 

ಹೊಲಯ ಮಾದಿಗರು ಸೂಕ್ಷ್ಮಮತಿಗಳಾಗಿ ಯೋಚಿಸಿ ಈ ಬಾರಿ ಮತ ಚಲಾಯಿಸಬೇಕಿದೆ. ಸದ್ಯದ ಪರಿಸ್ಥಿತಿಗೆ ಎಡಗೈ ಬಲಗೈ ಜಗಳಗಳನ್ನು ಪಕ್ಕಕ್ಕೆ ಸರಿಸಿ, ಎರಡೂ ಕೈಗಳನ್ನು ಜೋಡಿಸಿ ನಿರ್ಧರಿಸಬೇಕು. ಅದರಲ್ಲೂ ಇದೇ ಟಿಕೆಟ್‌ ಹಂಚಿಕೆ ವಿಚಾರವಾಗಿ ಹೊಲಯರು ಮಾದಿಗರೊಡನೆಯ ವೈಮನಸ್ಯದ ಕಾರಣಕ್ಕೆ ಲಂಬಾಣಿಗಳನ್ನು ಗೆಲ್ಲಿಸುವುದು ಹಾಗೂ ಮಾದಿಗರು ಹೊಲಯರೊಡನೆಯ ವೈಮನಸ್ಯದ ಕಾರಣಕ್ಕೆ ತಾವು ಹೆಚ್ಚಿರುವೆಡೆ ಹೊಲಯರನ್ನು ಸೋಲಿಸಿ ಮೂರನೇಯವರಿಗೆ ಲಾಭ ಮಾಡಿಕೊಡಬಾರದು. ಸದ್ಯಕ್ಕೆ ಈ ವಿಷಯ ಕನ್ನಡನಾಡಿನ ಅಸ್ಮಿತೆಯ ವಿಚಾರವೂ ಆಗಿದೆ. ಕನ್ನಡೇತರ ಸ್ಪೃಶ್ಯ ಪರಿಶಿಷ್ಟರು ನಮ್ಮ ನಾಡವನ್ನು ಆವರಿಸಿಕೊಂಡು ಕಬಳಿಸಿಕೊಳ್ಳುವ ದುರಂತವನ್ನು ಒಟ್ಟಿಗೆ ತಡೆಯಬೇಕಿದೆ. ಹೊಲಯರು ಮಾದಿಗರೂ ವೈಮನಸ್ಯಗಳನ್ನು ಮರೆತು ಪರಸ್ಪರ ಒಳಿತಿಗೆ ಕೆಲಸ ಮಾಡಲೇ ಬೇಕಾದ "ಮಾಡು ಇಲ್ಲವೇ ಮಡಿ" ಪರಿಸ್ಥಿತಿಗೆ ತಲುಪಿದ್ದೇವೆ ಎಂಬ ಅರಿವನ್ನು ಮೂಡಿಸಿಕೊಳ್ಳಬೇಕು. ಬಲಿಷ್ಠ ನಾಯಕರನ್ನು ಹುಟ್ಟಿಹಾಕಿ ರಾಜಕೀಯದ ಮೇಲೆ ನಮ್ಮದೇ ಆದಂತಹ ವರ್ಚಸ್ಸು ಹಿಡಿತಗಳನ್ನು ಸಂಪಾದಿಸುವವರೆಗೂ ನ್ಯಾಯವಾಗಿ ನಮಗೆ ಸಲ್ಲಬೇಕಾದದೇನನ್ನೂ ಸಹ ನಾವು ಧಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಮ್ಮ ನಡುವಿನ ಬಿರುಕು ಇದನ್ನು ಸಾಧ್ಯವಾಗಿಸುತ್ತಿಲ್ಲ ಎಂಬುದು ಸಹ ಅಷ್ಟೇ ಸತ್ಯ. ಒಂದುಗೂಡಿ, ಟಿಕೆಟ್‌ ಹಂಚಿಕೆಯಲ್ಲಿ ಯಾವುದೇ ಪಕ್ಷ ಮಾಡಿರುವ ಯಡವಟ್ಟನ್ನೂ ಮೀರಿ ಒಗ್ಗಟ್ಟು ತೋರಿ, ಒಬ್ಬರಿಗೊಬ್ಬರು ಆಗುವಂತೆ ನಡೆದುಕೊಂಡು ಮುಂದೆ ಸ್ವತಃ ನಮಗೆ ನಾವೇ ನ್ಯಾಯವನ್ನು ದೊರಕಿಸಿಕೊಳ್ಳುವ ಸ್ಥಾನವನ್ನು ಗಳಿಸಬೇಕಿದೆ. ಈಗಲೂ ಎಡಗೈ ಬಲಗೈ ಎಂದು ಕುತ್ತಾಡುತ್ತಿದ್ದರೆ ಕಿತ್ತು ತಿನ್ನುವ ಪರಿಸ್ಥಿತಿಗಿಂತಲೂ ಕೆಟ್ಟ ಪರಿಸ್ಥಿತಿಯನ್ನು ನಾವುಗಳು ಎದುರಿಸಬೇಕಾಗುವುದೋ ಏನೋ! ಹೊಲಯ ಹನುಮ ಮಾದಿಗ ಜಾಂಬವ ಸೇರಿದರಷ್ಟೇ ನಾವು, ನಮ್ಮ ವರ್ಚಸ್ಸು ಸ್ಥಿತಿಗತಿಗಳು ಆಕಾಶಕ್ಕೇರಲು ಸಾಧ್ಯವಿರುವುದು ಎಂಬ ಅರಿವು ನಮ್ಮೊಳಗೆ ಸದಾ ಇರಲಿ.



ಹೊಲೆಯ ಎಂದರೆ ಹಿರಿದಿದೆ ಅದರರ್ಥ!

 




ಹೊಲಯ/Holaya :

  • ಹೊಲದವನು/Man of the land or agricultural fields;
  • ಹೊಲಕ್ಕೆ ಸಂಬಂಧಿಸಿದ ವ್ಯಕ್ತಿ/Man related to the the land or agricultural fields;
  • ಹೊಲ ಮಾಡುವವನು/Man who cultivates the land or agricultural field;
  • ಹೊಲದ ಒಡೆಯ/Owner of the land or agricultural field;
  • ಹೊಲಗೇಯುವವನು/Man who works on land or agricultural field;
  • ಮೊದಲ ರೈತ/The first and foremost cultivator; 
  • ಆದಿ ಬೇಸಾಯಗಾರ/The First Agriculturalist;
  • ಆರಂಬಗಾರ/The Agriculturist or the First Borns;
  • ಅರವ/Cultivator or Agriculturist

 

ಹೊಲೆಯ/Holeya : 

  • "ಹೊಲೆ", ಎಂದರೆ ಮಣ್ಣು, ಹೊಲೆಯ ಎಂದರೆ ಮಣ್ಣಿನವನು/Man related to the Soil; ಶಾಸನಗಳಲ್ಲಿ ಹಾಗೂ ಶರಣಪರಂಪರೆಯ ವಚನಗಳಲ್ಲಿ ಕೆಲವು ಕಡೆ ಉಲ್ಲೇಖಗೊಂಡಿರುವ "ಹೊಲೆ-ಹದಿನೆಂಟು ಕುಲಜಾತಿ" ಎಂಬ ಹೆಸರು, ಹಾಗೂ ಜಾನಪದಗಳಲ್ಲಿರುವ "ಹೊಲೆಚೆಲುವ" (ಮೇಲುಕೋಟೆ ಚೆಲುವರಾಯ ಸ್ವಾಮಿ), "ಹೊಲೆಜೋಗಿ" (ಆದಿಚುಂಚನಗಿರಿ ಬೋರೆದೇವರು/ಕಾಲಭೈರವ), ಇಲ್ಲಿ ಹೊಲೆ ಎಂಬುದು Native (ನೇಟಿವ್:ನಾಡ/ನಾಡವನು) = People Related to the land ಎಂಬರ್ಥ ಕೊಡುತ್ತಿದ್ದು ನೇರವಾಗಿ "ನಾಡ" / "ನಾಡವನು" ಎಂಬ ಸಮಾನಾರ್ಥ ಪದವಾಗಿದೆ. "ಹೊಲೆ-ಹದಿನೆಂಟು ಕುಲಜಾತಿ" ಎಂದರೆ ನಾಡಿನವರಾದ ಹೊಲೆಯರ ಸಹಿತ ಹದಿನೆಂಟು ಜಾತಿ/ಕುಲದವರು, "ಇಲ್ಲವೇ" ನಾಡಿನವರಾದ ಹದಿನೆಂಟು ಕುಲಜಾತಿಗಳು ಎಂಬರ್ಥವನ್ನು ಕೊಡುತ್ತದೆ.
  • ಮಣ್ಣಿನಿಂದಾದವ/Man who rised from the Soil;
  • ಮಣ್ಣಿನ ಮಗ/Son of the Soil;
  • ಪಾರ್ವತೀ ದೇವಿಯ ಹೊಲೆಮನೆಯಲ್ಲಿ (ಎಂದರೆ ಬಸಿರಿನಲ್ಲಿ) ಹುಟ್ಟಿದವ/Men who was born in the womb of Goddess Parvati Devi (ಪೌರಾಣಿಕ ಹಿನ್ನೆಲೆಯ ಪ್ರಕಾರ ಪಾರ್ವತೀ ದೇವಿಯ ಹೊಲೆಮನೆ, ಎಂದರೆ ಬಸಿರು/ಗರ್ಭದಲ್ಲಿ ಜನಿಸಿದ ಅವಳಿಗಳು ಹೊಲಯರು ಮತ್ತು ಮಾದಿಗರು. ಮೊದಲು ಹುಟ್ಟಿದವನು ಮಾದಿಗ, ಮಹಾ ಆದಿ-ಗ ಎನಿಸಿಕೊಂಡನು, ನಂತರ ಹುಟ್ಟಿದವನು ಪಾರ್ವತೀ ದೇವಿಯ ಹೊಲೆಮನೆಯಿಂದಲೇ ಎಂದರೆ ಬಸಿರು/ಗರ್ಭದಿಂದಲೇ ಹೆಸರು ಪಡೆದು ಹೊಲೆಯನೆನಿಸಿದ./According to the folklore Adishaiva mythological background, the Holaya & Madiga twins were born in the womb of Goddess Parvati. The firstborn became Madiga, as the term itself means the first human "Maha Adi-ga", the next born took his name from the womb (womb is holemane in Kannada) of Goddess Parvati itself.)


ಪುಲಯ/Pulaya (ಹಳಗನ್ನಡದ ಪ ಹೊಸಗನ್ನಡದಲ್ಲಿ ಹ ಆದಂತೆ ಹಳಗನ್ನಡದ ಪುಲಯ ಹೊಸಗನ್ನಡದಲ್ಲಿ ಹೊಲಯ ಎಂದಾಗುತ್ತದೆ. ಪುಲ ಹಾಗೂ ಹೊಲ ಎರಡೂ ಕೃಷಿ ಭೂಮಿ ಎಂಬ ಅರ್ಥವನ್ನೇ ನೀಡುತ್ತದೆ./"Pa" in Halagannada is "ha" in Hosgannada, Pulaya in Halagannada is Holaya in Hosgannada. Both Pula and Hola mean agricultural land) :

  • ಹೊಲದೊಡೆಯOwner of the land or agricultural field; (ಪುಲ ಎಂಬ ಹಳಗನ್ನಡ ಪದದ ಅರ್ಥ ಹೊಲ ಅಥವಾ ನೆಲ ಎಂದು ಅರ್ಥೈಸುತ್ತದೆ./ The Halagannada word pula means agricultural field or land.);
  • ಬೆಳೆದು ತಿನ್ನುವವನು/ Who cultivates and eat or who eats what he raises in his agricultral fields (ಪುಲುಸು ಎಂಬ ಹಳಗನ್ನಡದ ಈಗಿನ ರೂಪ ಹುಲುಸು ಎಂದು. ಬೆಳೆದ ಫಸಲನ್ನು ಹುಲುಸು ಎಂದು, ಇದಕ್ಕೆ ವೃದ್ದಿ, ಸಮೃದ್ಧಿ ಎಂಬ ಅರ್ಥಗಳುಂಟು/ Hulusu is the current form of the old-Kannada word Pulusu. The raised/grown crop is called Hulusu, which also means growth & prosperity);
  • ಮಹಾ-ಮನು/The Great Human (ಪುಲ್‌ ಎಂಬ ಪದಕ್ಕೆ ಸಂಸ್ಕೃತದಲ್ಲಿ ಮಹಾನ್‌ ಎಂಬ ಅರ್ಥವಿದೆ. ಸಪ್ತ ಮಹರ್ಷಿಗಳಲ್ಲೊಬ್ಬನಾದ ಶ್ರೀ ಪುಲಸ್ತ್ಯನು ಹೊಲಯರ ಮೂಲಪುರುಷರಲೊಬ್ಬ ಎನ್ನಲಾಗುತ್ತದೆ. ಈ ಹೆಸರಿನಲ್ಲಿರುವ ಪುಲ್‌ ಎಂಬ ಧಾತು ಪದದ ಅರ್ಥ "ಮಹಾನ್"‌ ಎಂದಾಗಿದ್ದು, ಪುಲಯ ಎಂಬ ಪದಕ್ಕೆ ಇದು ಮಹಾ-ಮನು ಎಂಬ ಅರ್ಥವನ್ನು ಕೊಡುತ್ತದೆ/ The word Pul means great in Sanskrit. Sri Pulastya, one of the seven great sages, is said to be one of the progenitors of the Holayas. The elemental word pul in this name means "great", which gives the word pulaya meaning as "maha-manu", The Great Human)

 

ಪೊಲೆಯ/Pulaya : (ಹಳಗನ್ನಡದ ಪ ಹೊಸಗನ್ನಡದಲ್ಲಿ ಹ ಆದಂತೆ ಹಳಗನ್ನಡದ ಪೊಲೆಯ ಹೊಸಗನ್ನಡದಲ್ಲಿ ಹೊಲೆಯ ಎಂದಾಗುತ್ತದೆ. ಪೊಲೆ ಹಾಗೂ ಹೊಲೆ ಎರಡೂ ಮಣ್ಣು ಎಂಬ ಅರ್ಥವನ್ನೇ ನೀಡುತ್ತದೆ/"Pa" in Halagannada is "ha" in Hosgannada, and "Poleya" in Halagannada is Holeya in Hosgannada. Both Poley and Holey mean soil)

  • "ಹೊಲೆ" ಅಥವಾ "ಪೊಲೆ", ಎಂದರೆ ಮಣ್ಣು, ಮಣ್ಣಿನವನು/ Man related to the Soil;
  • ಮಣ್ಣಿನಿಂದಾದವ/ Man who rised from the Soil;
  • ಮಣ್ಣಿನ ಮಗ/ Son of the Soil;
  • ಪಾರ್ವತೀ ದೇವಿ ಬಸಿರಿನಲ್ಲಿ (ಹೊಲೆಮನೆಯಲ್ಲಿ) ಹುಟ್ಟಿದವ/ Men who was born in the womb of Goddess Parvati Devi;

 

ಪೊಲಿಯ/ಹೊಲಿಯ/Poliya/Holiya : (ಪೊಲಿಯ ಹಾಗು ಹೊಲಿಯ ಎಂಬ ಪದವು ಹೊಲಯ/ಪುಲಯ ಅಥವಾ ಹೊಲೆಯ/ಪೊಲೆಯ ಪದಗಳಿಗೆ ಸಂಬಂಧಿಸಿದ ಒಂದು ರೂಪವಾಗಿದೆ./The word Poliya and Holiya is a related form of the words Holaya/Pulaya or Holeya/Poleya.)

  • ಸಮೃದ್ದತೆಯ ಜಾನಪದ ದೈವವಾದ ಪೊಲಿದೇವ/ಬಲಿದೇವರ ಆರಾಧಕರು/The Worshippers of Polideva/Balideva - The Folklore God of Plentifullness (ಕೊರಗರು ಹಾಗೂ ಮಲೆನಾಡು ಹಾಗೂ ತುಳುನಾಡಿನ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಸಮುದಾಯಗಳು/Koragas, Adi Karnataka and Adi Dravidian communities of Malenadu and Tulunadu);
  • ಬಲೀಂದ್ರನ ವಂಶಸ್ಥರು/The Decedents of Balindra; (ಮಲೆನಾಡಿನ ಹೊಲಯರು/Holayas of Malenadu Regions);
  • ಬಲೀಂದ್ರ ಕುಲದವರು/People related to the clan of Balindra (ಮಲೆನಾಡಿನ ಹೊಲಯರ ಕುಲಗಳಲ್ಲೊಂದು/One of the many kulas of Malenadu Holayas);
  • ಗುಡ್ಡಗಾಹಿ ಅಥವಾ ಬೆಟ್ಟದ ಹೊಲಯರನ್ನು ಸೂಚಿಸುವ ಮಲೆಪ/ಮಲೆಯ/ಮಲೆಯವ ಎಂಬರ್ಥ ಕೊಡುವ ಪದ/Poliya is a term indicating the Holayas of rainforests & Hilly Regions where Malepa/Maleya/Maleyava names are also used to identify them.


ಪುಲತಿ/ಪರತಿ/ಹೊಲತಿ/ಹರತಿ/ಹರಿತಿ/ಹರಿತಿ/Pulati/Parati/Holati/Harati/Hariti :

  • ಹೊಲಯರ ಹೆಂಗಸು/Holaya Women
  • ಕೃಷಿಯನ್ನು ಆವಿಷ್ಕರಿಸಿದವಳು/Founder of Cultivation/Agriculture
  • ಮಾತೃಗಣದ ಅಧಿದೇವತೆ/The First & Foremost Goddess of Matriarchy
  • ಊರಮ್ಮ/ಗ್ರಾಮದೇವತೆ/Village Goddess
  • ಏಳೂರಮ್ಮ ಅಥವಾ ಸಪ್ತಮಾತೃಕೆಯರ ಪೈಕಿ ಮೊದಲನೆಯವಳು/The First among Seven Goddsess (ಪೊಲೇರಮ್ಮ/Poleramma)
  • ಮಾತಂಗಿಯ ಅವಳಿ ಒಡಹುಟ್ಟು/Twin Sisiter of Goddess Matangi
  • ಮೈ ನೆರೆದ ಹೆಣ್ಣು/Girl who enters puberty


ಹೊಲಗೇರಿ/Holageri :

  • ಹೊಲಯರ ಕೇರಿ/Place Inhabitated by Holayas.
  • ಹೊಲಯರು ವಾಸಿಸುವ ಊರಿನ ಭಾಗ/Part of a village settlement where Holayas live.
  • ಊರಿನ ಆದಿ ಮತ್ತು ಅಂತ್ಯ ಭಾಗ/The starting and ending point of a village settlement.
  • ಊರೊಂದರ ದಕ್ಷಿಣ, ಪೂರ್ವ ಅಥವಾ ಪಶ್ಚಿಮ ಭಾಗ/Southern, Eastern or Western part of village settlement.
  • ಮೊದಲ ತಂಗಾಳಿ ಸೋಕುವ ಕೇರಿ (The street or part of village where the first breeze of Southwestern mansoons blow through)
  • ತೆಂಕಣಾಚಾರರ ವಾಸಸ್ಥಾನ/place where Tenkanacharyas live (ನಯಸೇನನ ಧರ್ಮಾಮೃತದಂತೆ/According to Nayasena's Dharmamrita of 12th CE)


ಮಾಹಿತಿ ಮೂಲ/Information Source

  • Rev. F. Kittel - Some remarks on Dr. Pope's "Notes on the South - Indian or Dravidian Family of Languages" Indian Antiquary, Vol. Vlll, February 1879
  • Gustav Oppert Ph.D. On the Original Inhabitants of Bharatavarsa or India, The Dravidians, 1888
  • W.F. Sinclair - Notes on Caste in the Dekhan, India Antiquary, 1874, Vol-ll
  • R. Narasimhacharya - History of Kannada Language
  • Ullal Narasinga Rao - A Kisamwar Glossary of Kannada Words, 1891
  • John A. Halloran - Sumerian Lexicon, Version 3.0
  • Dr. Gundert - Malayalam Dictionary
  • Sir Henry M Elliot - Supplemental Glossary of Indian Terms, Vol. l
  • Hampa Nagarajaiah - Dravida Basha Vijnana
  • Rev. F. Kittel - Kannada - English - Kannada Dictionary
  • South Indian Inscriptions
  • Epigraphia Carnatica
  • Dr. B N Chandraiah - A Descriptive Grammer of Harijan Dialect, 1987
  • W T Elmore - Dravidian Gods in Modern Hinduism, 1913
  • J T Molesworth - Dictionary, Marathi and English, Bombay, 1857


ಕನ್ನಡದ ವಿಚಾರದಲ್ಲಿ ನಮ್ಮದು ನೇರ ನಿಷ್ಠೂರ ನಿಲುವು

ನಾವು ಆರಂಬಗಾರರು. ಆದಿಕನ್ನಡಿಗರು. ಆದಿದ್ರಾವಿಡರು. ಈ ನಾಡು ಕಟ್ಟಿದವರು. ಈ ನುಡಿಯ ಕಟ್ಟಿದವರು. ಬಿದ್ದು ಮಣ್ಣಾದ, ಕನ್ನಡದ ಆರಂಬಗಾರರು ಕಟ್ಟಿದ ಮಹಾರಸೊತ್ತಿಗೆಗಳ ವಾರಸುದಾರರು. ಯಾರ ದಂಡಿಗೂ, ದಾಳಿಗೂ, ದೌರ್ಜನ್ಯಗಳಿಗೂ ಜಗ್ಗದೇ ನಿಂತು ನಾಡನ್ನುಳಿಸಿದವರು. ನುಡಿಯನ್ನುಳಿಸಿದವರು. ಕನ್ನಡನಾಡಿನ ಹಿತ ಕಾಯುವುದು ನಮ್ಮ ಆದ್ಯತೆಯಾದೆ. ಹೊರನಾಡುಗಳಲ್ಲಿ ನಮ್ಮ ಸಮಾನರಾದವರ ಮೇಲೆ ಆಗುವ ದೌರ್ಜನಗಳನನು ವಿರೋಧಿಸುವ ಬರದಲ್ಲಿ, ಅವರುಗಳಿಗೆ ನೈತಿಕ ಬೆಂಬಲವಾಗಿ ನಿಲ್ಲುವ ಆತುರದಲ್ಲಿ ನಮ್ಮ ನಾಡನ್ನೇ ನಾವು ಹಾಳುಗೆಡವಿಕೊಳ್ಳುವ ದಡ್ಡತನ ತೋರುವುದು ಸರಿಯಲ್ಲ. ಈಗ ನಾವು ಮಾಡುವ ಇಂಥ ದೊಡ್ಡ ತಪ್ಪುಗಳಿಗೆ ಮುಂದೆ ಅಪಾರವಾದ ದಂಡವನ್ನೂ ನಾವೇ ತರಬೇಕಾಬಹುದು!


ಅವರ್ಣೀಯ ವರ್ಗಗಳಿಗೆಂದಿದ್ದ ಪರಿಶಿಷ್ಟ ಜಾತಿಯ ಮೀಸಲಾತಿಯನ್ನ ಈಗಾಗಲೇ ಕನ್ನಡೇತರ ಪರಿಶಿಷ್ಟರು ಹುರಿದು ಮುಕ್ಕುತ್ತಿದ್ದಾರೆ! ಇದರ ಮೇಲೆ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿ ನೆಲಹಿಡುಕತನ ತೋರಿದ ಆಳುವ ಸರ್ಕಾರಗಳ ಕೆಟ್ಟನಡೆ ಈಗಾಗಲೇ ಕರ್ನಾಟಕದ ನೆಲವನ್ನು ಹರಿದು ಅದೆಷ್ಟು ಪರಭಾಷಿಕರಿಗೆ ಹಂಚಿದೆಯೋ ತಿಳಿಯದು. ಇನ್ನೂ ಒಳಮೀಸಲಾತಿಗಾಗಿ ಹೋರಾಟಗಳು ಒಂದು ತಾತ್ವಿಕ ಯಶಸ್ಸನ್ನೂ, ಅಂತ್ಯವನ್ನು ಕಂಡಿಲ್ಲ. ಇವೆಲ್ಲವುದರ ನಡುವೆ ಪರರಾಜ್ಯದ ಅವರ್ಣೀಯ ಪರಿಶಿಷ್ಟರನ್ನ ಕರ್ನಾಟಕಕ್ಕೆ ಬಂದು ನೆಲೆಸಿ ಸೇಫ್ ಆಗಿರಿ ಎಂದು ಆಹ್ವಾನಿಸುವುದು ನಮ್ಮ ಕಾಲಮೇಲೆ ನಾವೇ ಚಪ್ಪಡಿಯನ್ನು ಎಳೆದುಕೊಂಡಂತೆ.

ಹೀಗೆ ಕರೆಯುವವರ ಬಾಲಿಶತನಕ್ಕೆ ಮದ್ದೇನು? ಹೇಡಿಗಳಾಗಿ ಓಡಿಬನ್ನಿ ಎಂಬುದಿವರ ಸಂದೇಶವಾ? ಅಥವಾ ಕರ್ನಾಟಕ ಬಿಟ್ಟಿ ಬಿದ್ದಿದೆ, ಬಂದುಬಿಡಿ ಎಂಬುದಾ? ಅಥವಾ ಕರ್ನಾಟಕದಲ್ಲಿ ಜಾತಿ ದೌರ್ಜನ್ಯಗಳೇ ಇಲ್ಲ ಎಂಬುದಾ? ಕರ್ನಾಟಕಕ್ಕೆ ಬೇರೆ ಕಾನೂನು, ಉಳಿದ ಭಾರತಕ್ಕೆ ಬೇರೆ ಕಾನೂನು ಇದೆಯಾ?

ಯಾದಗಿರಿ ಕೊಪ್ಪಳಗಳಲ್ಲಿ ಹತ್ರಾಸ್‌, ಮೊನಿಷ ವಾಲ್ಮೀಕಿ ಅತ್ಯಾಚಾರಗಳಂತಹ ಪ್ರಕರಣಗಳು ಆಗಿವೆ. ಆಗ ಇವರು ಏನು ಹೇಳಿರಬಹುದು? ಆದಿ ಕನ್ನಡಿಗರೆಲ್ಲಾ ಕರ್ನಟಕವನ್ನು ಬಿಟ್ಟು ಕೇರಳ ತಮಿಳುನಾಡು ಸೇರಿಕೊಳ್ಳಿ ಎನ್ನುತ್ತಿದ್ದರಾ?

ಉತ್ತರ ಭಾರತದಲ್ಲಿ ನಡೆಯುವುದು ಮಾತ್ರ ಜಾತಿ ದೌರ್ಜನ್ಯಗಳಾ? ದಕ್ಷಿಣ ಭಾರತವೇನು ಕ್ಲೀನ್ ಹ್ಯಾಂಡಾ?

ಏನಾಗಿದೆ ಇವರುಗಳಿಗೆ? ಕನ್ನಡ ಜನ ಈ ಕಂಡಕಂಡವರ ಸಿದ್ದಾಂತಗಳಿಗೆ ಅಡಿಯಾಳಾಗಿ ತಾಯಿನೆಲ ತಾಯಿನುಡಿಗಳ ತಲೆಹೊಡೆಯುವ ಬುದ್ಧಿ ಬಿಡುವುದು ಯಾವಾಗಾ?

ಪರನಾಡುಗಳಲ್ಲಿ ಅವರುಗಳ ಮೇಲೆ ಆಗುತ್ತಿರುವ ಅನ್ಯಾಯ ದೌರ್ಜನ್ಯಗಳಿಗೆ ಮರುಕ ವ್ಯಕ್ತಪಡಿಸುವ. ಅವರ ಬೆಂಬಲಕ್ಕೆ ನಿಲ್ಲುವ. ಅದನ್ನು ಬಿಟ್ಟು ಅತಿರೇಕದ ಬುದ್ದಿ ತೋರಿ ಊರುಬಿಟ್ಟು ಇಲ್ಲಿ ಬನ್ನಿ ಎಂದು ಕರೆವುದು ನಮಗೆ ನಾವು ಮಾಡಿಕೊಳ್ಳುವ ಅವಮಾನ ಅಷ್ಟೇ ಅಲ್ಲ, ಅವರುಗಳನ್ನೂ ಹೇಡಿಗಳಂತಾಗಿಸಿ ಅವರಿಗೂ ಮಾಡುವ ಅವಮಾನವೇ ಆಗಿದೆ.

ಆಕ್ರೋಶ ಆತುರಗಳಲ್ಲೂ ಸಹ ಮೈಮರೆತು ತಾಯಿ, ತಾಯ್ನೆಲ, ತಾಯ್ನುಡಿಗಳಿಗೆ ಕುತ್ತು ತಂದೊಡ್ಡಿಕೊಳ್ಳುವ ಯೋಚನೆ ಮಾಡಬಾರದು. ಇಂಥದ್ದು ಆಗಿಯೇ ನಮ್ಮೊಳಕ್ಕೆ ಪರಕೀಯರು ಒಕ್ಕಿದ್ದು.

ಈ ನೆಲದವರು ನಾವು ಎಂಬ ಹಮ್ಮು ಇದ್ದಮೇಲೆ ಈ ನೆಲತನ ನಮ್ಮ ಜನ ನಮ್ಮ ಮೊದಲ ಆದ್ಯತೆ ಆಗಿರಬೇಕು.‌ ಅವರ ದಲಿತ ಪರ ಹೋರಾಟದ ಬಗ್ಗೆ ಯಾವುದೇ ತಕರಾರಿಲ್ಲ. ಆ ವಿಚಾರದಲ್ಲಿ ಅವರೊಂದಿಗೆ ನಾವು ನಿಲ್ಲುತ್ತೇವೆ. ಆದರೆ ಕನ್ನಡ ಡೆಮಾಗ್ರಫಿ ಹಾಳು ಮಾಡುವ ಮಾತಾಡಿದರೆ ಅದಕ್ಕೆ ನಮ್ಮ ಬೆಂಬಲ ಇಲ್ಲ.

ಬಾಂಗ್ಲಾ ಹಿಂದೂಗಳು ದಂಡಿದಂಡಿಯಾಗಿ ಕರ್ನಾಟಕಕ್ಕೆ ವಲಸೆಯಾಗುತ್ತಿದ್ದ ಕಾಲವದು. ಎಲ್ಲಾ ಹಿಂದುತ್ವವಾದಿಗಳು, ಕೇಸರಿಪಡೆಯು “ಅವರೂ ಹಿಂದೂಗಳೇ ಅಲ್ವಾ? ಬಿಡಿ ಬಂದಿರಲಿ” ಎಂದು ಅದನ್ನು ಬೆಂಬಲಿಸಿ. ಆಗಲೂ ಯಾರಿಗೂ ಕನ್ನಡ ಡೆಮಾಗ್ರಫಿ ಬಗ್ಗೆ ಕಾಳಜಿ ಇದ್ದಂತಿರಲಿಲ್ಲ. ಈಗ ಕನ್ನಡನಾಡಿನ ಆದಿಜನರೂ ಅವರಂತೆಯೇ ವರ್ತಿಸಿತ್ತಿರುವುದು ದರಂತವಲ್ಲದೇ ಮತ್ತೇನು ಅಲ್ಲ! ನಾವೂ ಅವರನ್ನು ವಿರೋಧಿಸಿದ್ದೇವೆ. ಈಗಲೂ ನಮ್ಮದು ಅಂಥದ್ದೇ ನಿಲುವು. ಕನ್ನಡದ ವಿಚಾರದಲ್ಲಿ ನಮ್ಮದು ನೇರ ನಿಷ್ಠೂರ ನಿಲುವು.

ನಮ್ಮ ಅರಸೊತ್ತಿಗೆಗಳು ಬಿದ್ದಂತೆ ನಾವೂ ಬಿದ್ದೆವು, ಆಳಿದವರ ಕಾಲ್ತುಳಿತಕ್ಕೊಳಪಟ್ಟೆವು. ಬಹುಭಾಗ ನಮ್ಮ ಸಂಸ್ಕೃತಿ ಆಚರಣೆ ರೀವಾಜುಗಳಿಂದ ವಂಚಿತವಾದೆವು. ಕಾಲ ಕಳೆದಂತೆ, ಬದುಕಿನ ಅನಿವಾರ್ಯತೆಗಳಿಗೆದರಾಗಿ, ಇತಿಹಾಸ ವೈಷಮ್ಯಗಳು ಅಳಿದು, ಸ್ನೇಹದಿಂದಲೋ, ಅವಶ್ಯಕತೆಯಿಂದಲೋ, ಅನಿವಾರ್ಯದಿಂದಲೋ ಆ ಗಾಯಗಳಿಗೆ ಔಷಧಿ ಬೀಳುತ್ತಿದೆ. ಅದಕ್ಕೆ ಮದ್ದನ್ನು ಹಚ್ಚಿ ಇನ್ನಷ್ಟು ಬೇಗ ಅದನ್ನು ವಾಸಿಯಾಗುವಂತೆ ನಿಗಾವಹಿಸಬೇಕೇ ಹೊರತು ಅದನ್ನು ಕೆರೆದು ಕೆದಕಿ ಗಾಯಗಳು ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡಬಾರದು.

ಗಾಯ ಇದ್ದರೂ ಇಲ್ಲವೆಂದು ತೋರಿಕೊಳ್ಳುವುದು ಎಷ್ಟು ದಡ್ಡತನವೋ, ಅದನ್ನು ಕೆರೆದು ಕೆದಕಿ ಇನ್ನಷ್ಟು ರೋಗ ಹೆಚ್ಚಿಸಿಕೊಳ್ಳುವುದು ಅಷ್ಟೇ ದಡ್ಡತನ. ಭಾರತೀಯತೆ, ಸಂಪ್ರದಾಯ, ಸಂಸ್ಕೃತಿ, ಆಚರಣೆಗಳ ನೆಪವೊಡ್ಡಿ ಕೆಟ್ಟದ್ದನ್ನು ಉಳಿಸಿಕೊಳ್ಳುವುದು ಗಾಯ ಇದ್ದರೂ ಇಲ್ಲವೆಂಬಂತೆ ತೋರಿಸಿಕೊಳ್ಳುವ ದಡ್ಡತನವಾದರೆ, ಎಲ್ಲರೂ ಜಾತೀಯತೆ ಬೇದಗಳ ಮರೆತು ಒಂದುಗೂಡುವ ಹೊತ್ತಿನಲ್ಲಿ ಮತ್ತದೇ ಶೋಷಣೆಯ ಗುಂಗಿನಲ್ಲಿ ಬೆರೆಯುವ ಹೊತ್ತಿನಲ್ಲಿ ಬೇರೆ ನಿಲ್ಲುವುದು ಗಾಯವನ್ನು ಕೆರೆದು ಕೆದಕಿ ಇನ್ನಷ್ಟು ರೋಗ ಹೆಚ್ಚಿಸಿಕೊಳ್ಳುವಂತ ದಡ್ಡತನವಾಗಿದೆ. ಕನ್ನಡ ಪರತೆ ಎಂದರೆ ಅದು ನಾವು ಕಟ್ಟಿದ ನುಡಿಗೆ ನಾವು ನೀಡುವ ರಕ್ಷಣೆ. ಇಂಥಹ ಕೆಲಸದಲ್ಲಿ ಜಾತೀಯತೆ ಬೇಧಗಳನ್ನು ಮೀರಿ ಕನ್ನಡಿಗರೊಡನೆ ಬೆರೆವುದು ಸಹ ಒಂದು ಬಲಿಷ್ಠವಾದ “ಜಾತೀಯತೆ ನಾಶದ ಅಸ್ತ್ರ”ವೇ ಆಗಿದೆ. ಕನ್ನಡಿಗನೆಂಬ ಮಾನದಂಡದೆದುರು ಎಲ್ಲರೂ ಒಗ್ಗೂಡುವುದಾದರೆ ಅದಕಿಂತ ಒಳ್ಳೆಯ ಜಾತೀಯತೆ ವಿನಾಶದ ಅಸ್ತ್ರ ಬೇಕೆ? 

ಏಳಿ, ಎಚ್ಚರಿಕೆಯಿಂದಿರಿ. ಕನ್ನಡ ಕೇಂದ್ರಿತ ರಾಜಕಾರಣದ ರೂವಾರಿಗಳಾಗುವ ವಿಫುಲ ಅವಕಾಶಗಳಿವೆ. ಇದು ಅವಕಾಶವಷ್ಟೇ ಅಲ್ಲ, ಆದಿ ಕನ್ನಡಿಗರಾಗಿ ನಮ್ಮ ಜವಾಬ್ದಾರಿಯೂ ಹೌದು. ಇದು ನಮ್ಮ ಆದಿ ಕನ್ನಡ ಪರಂಪರೆಗೆ ನಾವು ಕೊಡುವ ಕೊಡುಗೆ. ಇದನ್ನು ಕಾಯ್ದು ಬೆಳೆಸಿದರೆ ಕನ್ನಡವೆಂಬ ಕೂಟವು ಜಾತೀಯತೆಯ ಬೇಧಗಳನ್ನು ಮೀರಿ ನಿಂತು ಅಲ್ಲಿ ಎಲ್ಲರೊಳಗೊಬ್ಬರಾಗಿ ಕನ್ನಡಿಗರಾಗಿ ಬದುಕನ್ನು ಕಟ್ಟಿಕೊಳ್ಳುವ ವ್ಯವಸ್ಥೆಯನ್ನೇ ಹುಟ್ಟಿಹಾಕಬಹುದು.

ಒಂದು ವಿಚಾರವನ್ನು ಮರೆಯಬಾರದು. ಭಾಷೆಯೇ ಮನುಷ್ಯನನ್ನು ಇತರೆ ಪ್ರಾಣಿವರ್ಗದಿಂದ ಭಿನ್ನವಾಗಿಸಿ ಮನುಷ್ಯನನ್ನು ಮಾಡಿದೆ. ಭಾಷೆಯಿಂದಲೇ ನಾಗರೀಕತೆ. ಭಾಷೆಯಿಂದಲೇ ಸಂಸ್ಕೃತಿ ಪರಂಪರೆಗಳು, ಮತ ಧರ್ಮಗಳು. ಅದಿಲ್ಲದೇ ಮನುಷ್ಯ ಇತರವುಗಳಂತೆ ಯಕಶ್ಚಿತ್‌ ಒಂದು ಪ್ರಾಣಿ. ಅಂಥ ಕನ್ನಡವು ಆದಿ ಕನ್ನಡಿಗರು ಕಟ್ಟಿದ ನಾಗರೀಕತೆ, ನಾಡು, ಸಂಸ್ಕೃತಿ, ಪರಂಪರೆಗಳಾಗಿವೆ. ಅದರ ಉಳಿವೆ ನಮ್ಮ ಉಳಿವು ಎಂಬಂತೆ ಸಾಧಿಸುವುದು ಸಹ ನಮ್ಮ ಜವಬ್ದಾರಿಯೇ. ಕನ್ನಡದ ವಾರಸುದಾರರಾಗಿ ಮುಂದೆ ನಿಂತು ಎಲ್ಲಾ ರೀತಿಯ ಅಸಮಾನತೆಯನ್ನು ಮೀರಿ ಬೆಳೆಯುವುದು ನಮ್ಮ ಕರ್ತವ್ಯವೂ ಹೌದು.

ನೆನಪಿರಲಿ. ನಮ್ಮ ಪೂರ್ವಜರು, ಆದಿ ಕನ್ನಡಿಗರು ಕನ್ನಡಕ್ಕೆ ಅಂಟಿಕೊಂಡು ನಾಡನ್ನು ಕಟ್ಟುದವರು. ವೈಭವೋಪೇತ ಸಾಮ್ರಾಜ್ಯಗಳನ್ನು ಹುಟ್ಟಿಹಾಕಿದವರು. ನಮ್ಮ ಒಳಿತು ಕೆಡುಕುಗಳಿಗೆ ನಾವೇ ಹೊಣೆಯಾಗಿದ್ದೇವೆ. ನಾವು ತೆಗೆದುಕೊಳ್ಳುವ ನಿರ್ಧಾರಗಳು, ನಾವಿಡುವ ಹೆಜ್ಜೆ ನಮ್ಮ ಪಾಲಿಗೆ, ನಮ್ಮ ಸಮುದಾಯದ ಪಾಲಿಗೆ, ನಮ್ಮ ಕನ್ನಡದ ಪಾಲಿಗೆ ರಚನಾತ್ಮಕ (Constructive) ಆಗಿ ಇರಬೇಕು. ಆದದ್ದು ಆಗಿಹೋಗಿದೆ. ಅದೇ ಗುಂಗಿನಲ್ಲಿ ಕಾಲ ಕಳೆದರೆ, ಅವುಗಳ ಬೆನ್ನಿಗೆ ಬಿದ್ದು ಅದರದೇ ಸನ್ನಿಯಲ್ಲಿ ಮುಳುಗಿ ಬೌದ್ಧಿಕ ಸ್ವಾಸ್ಥ್ಯವನ್ನು ಹಾಳುಮಾಡಿಕೊಳ್ಳುವುದು ನಮಗೂ ನಮ್ಮ ಮುಂದಿನ ಪೀಳಿಗೆಗೂ, ಸಮುದಾಯಕ್ಕೂ ವಿನಾಶಕಾರಿ (destructive) ಆಗಿದೆ.

ಹೊಲಯ ಮಾದಿಗರು ಯಾರೊಡನೆ ನಿಲ್ಲಬೇಕು, ಯಾರ ಪರವಾಗಿರಬೇಕು ಎಂದು ಸ್ಪಷ್ಟವಾಗಿ ನಿರ್ಧರಿಸಬೇಕಿದೆ. ಹೊಲಯರು ಮತ್ತು ಮಾದಿಗರನ್ನು ಮೇಲೇರಲು ಉತ್ತಮ ಮಾರ್ಗ ಯಾವುದು?

ನಗರೀಕರಣ, ಸೌಹಾರ್ದತೆ, ಸ್ನೇಹಸಂಬಂಧ, ಒಂದು ಸಾಮಾನ್ಯ ಗುರಿಗಾಗಿ ಜಾತಿಬೇಧಗಳ ಮರೆತು ಒಂದಾಗಿ ಕೆಲಸ ಮಾಡುವ ಸಮಮನಸ್ಸುಗಳ ನಡುವೆ ಬೆಳೆಯುವುದು, ಇತ್ಯಾದಿ ವಿಚಾರಗಳ ಭಾಗವಾಗಿ ಸಮಾಜದ ಮುಖ್ಯವಾಹಿನಿಯೊಂದಿಗೆ ಹೊಂದಿಕೊಳ್ಳುವುದೇ?

ಅಥವಾ ಕೆಲವು ರಾಜಕೀಯ ಸಿದ್ಧಾಂತಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಲಾಭವಾಗುವಂತೆ ಅವರಿವರ ಸಿದ್ದಾಂತಗಳ ಅಡಿಯಾಳುಗಳಾಗಿ ಗಲಭೆ ಸಂಘರ್ಷಗಳಲ್ಲಿ ಮುಳುಗಿಹೋಗುವುದಾ? ಹಿಂದೆ ನಡೆದುಹೋದ ಶೋಷಣೆಯ ಗುಂಗಿನಲ್ಲೇ ಮುಂದಿನ ಭವಿಷ್ಯದ ಸೊಗಸನ್ನೆಲ್ಲಾ ಕಳೆದುಕೊಳ್ಳುವುದಾ?

ನಾಡು ನುಡಿಯ ಸಿದ್ದಾಂತದಲ್ಲಿ, ನುಡಿ ಕೇಂದ್ರಿತ ರಾಯಕಾರಣದಲ್ಲಿ ಸ್ವಾಭಿಮಾನದ ರಾಜಕೀಯ ಪ್ರವೃತ್ತಿಯನ್ನು ರೂಢಿಸಿಕೊಂಡು ನಿಮ್ಮಲ್ಲಿರುವ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುವುದು ಈ ನಮ್ಮ ನಾಡಿಗೂ ನಮ್ಮ ನುಡಿಗೂ ನಮ್ಮ ನಾಡ ಜನರಿಗೂ ಆದಿ ಕನ್ನಡಿಗರಾದ ನಾವು ಕೊಡುವ ಒಳ್ಳೆಯ ಕೊಡುಗೆಯಾಗುತ್ತದೆ.

ಯಾರು ನಿಮ್ಮ ನಿಜ ಇತಿಹಾಸ ವಿಚಾರಗಳನ್ನು ಹಂಚಿಕೊಳ್ಳುವರೋ, ಯಾರು ನಿಮ್ಮಲ್ಲಿರುವ ಜಾತಿ ಕೀಳರಿಮಗೆ ಮದ್ದನ್ನು ಕೊಟ್ಟು ಅದನ್ನು ನಿವಾರಿಸುವರೋ, ನಿಮ್ಮ ಆದಿಮ ಸಂಸ್ಕೃತಿ ಪರಂಪರೆಗಳ ಬಗ್ಗೆ ಬರೆದು ನಿಮ್ಮಲ್ಲಿ ಅರಿವು ಮೂಡಿಸುವವರೋ, ಯಾರು ನಿಮಗೆ ಉದ್ದಾರವಾಗಲು ಉದ್ಯಮಗಳ ಐಡಿಯಾಗಳನ್ನು ನೀಡುವರೋ, ಅದಕ್ಕೆ ಪೂರಕವಾದ ಮಾಹಿತಿ, ಸೌಲಭ್ಯಗಳನ್ನು ಹಂಚಿಕೊಳ್ಳುವರೋ, ಹೀಗೆ ನಿಮ್ಮ ಒಳಿತಿಗೆ ಕಾರಣವಾಗುವ ಯಾವುದೇ ವಿಚಾರದೊಂದಿಗೆ ನಿಲ್ಲಿ. ಶಿಕ್ಷಣ, ದುಡಿಮೆ/ಉದ್ಯಮ, ಭೂ ಹಿಡುವಳಿ, ಸಂಘಟನೆ, ನಾಡು ನುಡಿ ನೆಲ ಜನ ಕೇಂದ್ರಿತ ಸಿದ್ದಾಂತ, ಸಕ್ರೀಯ ರಾಜಕಾರಣ ಆಸಕ್ತಿಯಷ್ಟೇ ನಮ್ಮನ್ನು ಉದ್ದರಿಸುವುದು.

ಆದಿಗುರು ಶ್ರೀ ಶಂಕರಾಚಾರ್ಯರ ಅದ್ವೈತ ಸಿದ್ದಾಂತಕ್ಕೆ ಪರಿಪೂರ್ಣತೆ ಕೊಟ್ಟದ್ದು ಅಲಂಕಾರನೆಂಬ ಹೊಲಯರ ಹುಡುಗ!!!

ಕೇರಳದ “ಪೊಟ್ಟನ್ ತೆಯ್ಯಂ” (ಉತ್ತರ ಕೇರಳದಲ್ಲಿ‌ ನಡೆಯುವ ಒಂದು ದೈವದ ಭೂತಾರಾಧನೆ) ಪ್ರಕಾರ ಶಂಕರರ “ಅದ್ವೈತ” ಸಿದ್ದಾಂತವನ್ನು ಪರಿಪೂರ್ಣಗೊಳಿಸಿ ಕೊಟ್ಟವ ಒಬ್ಬ ಪುಲಯ (ಹೊ...