ಪ್ರೊಫೆಸರ್‌ ಭಗವಾನ್‌ ಆಗ ಸರಿಯಾಗೇ ಹೇಳಿದ್ದರಲ್ಲವೇ? ಸ್ವಯಂ ರಕ್ಷಣೆಗೆ ಪರಿಶಿಷ್ಟರು ಸಶಸ್ತ್ರಗಳನ್ನು ಹೊಂದುವುದು ಒಳ್ಳೆಯದೆ ತಾನೆ?


 




ಪ್ರೊಫೆಸರ್ ಭಗವಾನ್ ಅಂದು ಹೇಳಿದ್ದ ಮಾತನ್ನ‌ ನಾವು ವಿರೋಧಿಸಿದ್ವಿ. ವರ್ಷಗಳು ಕಳೆದವು ಹಾಗೆ ನಮ್ಮ‌ ಅಭಿಪ್ರಾಯವೂ ಬದಲಾಗಿದೆ.‌ ಪರಿಶಿಷ್ಟ ಸಮುದಾಯದವರಿಗೆ, ಅಗತ್ಯಕ್ಕೆ ತಕ್ಕಂತೆ ಈಗಾಗಲೇ ಇರುವ ಸಶಸ್ತ್ರಗಳನ್ನು ಹೊಂದಿರಲು ಇರುವ ಷರತ್ತುಗಳಂತೆಯೇ ಸಣ್ಣಪ್ರಮಾಣದಲ್ಲಿಯಾದರೂ ಸಶಸ್ತ್ರಗಳನ್ನು (ಗನ್, ತಲವಾರ) ಹೊಂದಲು ಸರ್ಕಾರ ಅನುವು ಮಾಡಿಕೊಡಬೇಕು.

ಪರಿಶಿಷ್ಟರ ಆರ್ಥಿಕತೆಯು ಈಗ ಒಂದು ಟ್ರಾನ್ಸ್ ಸ್ಥಿತಿಯಲ್ಲಿದೆ. ಅವರ ಇಷ್ಟು‌ ದಿನದ ಶ್ರಮ ದುಡಿಮೆ ಈಗ ಫಲ ಕೊಡುತ್ತಿದೆ. ಇದರ ಪರಿಣಾಮವಾಗಿ ಡಿಪಾರ್ಟ್ಮೆಂಟಲ್ ಸ್ಟೋರ್ಸ್, ಹೊಟೆಲ್, ಸಾವಯವ ಕೃಷಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಕಂಪ್ಯೂಟರ್ ಟ್ರೈನಿಂಗ್ ಸೆಂಟರ್, ಸೈಬರ್, ಕನ್ಸಲ್ಟೆನ್ಸಿ, ಟ್ರಾವಲ್ಸ್, ಮುಂತಾದ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಇವರ ಆಗಮನವಾಗ್ತಿದೆ. ಇದು ಒಳ್ಳೆಯ ಬೆಳವಣಿಗೆಯಾದರೆ, ಇದಕ್ಕೆ ಪ್ರತಿಯಾಗಿ ಕೆಲವು ಕಡೆ ಇವರ ವಿರುದ್ಧ ಷಡ್ಯಂತ್ರಗಳು, ಗಲಭೆಗಳು, ಅಸೂಯೆ ಕಿಚ್ಚುಗಳಿಂದ ಇವರ ಕೆಲಸಗಳನ್ನು ಹಾಳುಮಾಡಲಾಗ್ತಿದೆ.

ಎರಡು ತಿಂಗಳ ಹಿಂದೆ ಹಾಸನದ ಆಲೂರಿನಲ್ಲಿ ರಸ್ತೆ ಬದಿ ಕಬ್ಬಿನ‌ಹಾಲು ಮಾರುತ್ತಿದ್ದ ಪರಿಶಿಷ್ಟ ಸಮುದಾಯದ ವ್ಯಾಪರಿಯ ಮೇಲೆ ಜಾತಿ ಅಸೂಯೆಯ ಕಾರಣಕ್ಕಾಗಿ ಒಕ್ಕಲಿಗರಿಂದ ಹಲ್ಲೆಯಾಗಿತ್ತು. ಇದೊಂದು ಉದಾಹರಣೆ ಅಷ್ಟೇ. ಇಂಥಹ ಸಂಗತಿಗಳು ಬಹಳಷ್ಟಿವೆ.

ಸಶಸ್ತ್ರಗಳನ್ನು‌ ಹೊಂದುವುದು ಈ ಸಮಸ್ಯೆಗೆ ಸಂಪೂರ್ಣ ಪರಿಹಾರವಲ್ಲದೇ ಇರಬಹುದು, ಆದರೆ ಅರ್ಧಕ್ಕಿಂತ ಹೆಚ್ಚಿನ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಭಾರತದಂತಹ ಪರಂಪರಾ ನಿಷ್ಠ ರಾಷ್ಟ್ರದಲ್ಲಿ ಆಯುಧ ಅನ್ನೋದು ಅಧಿಕಾರದ ಸಂಕೇತವಾಗಿದೆ. ಹಳೇ ಮೈಸೂರು ಭಾಗ ದೊಡ್ಡ ಹೊಲಯರ ಮನೆಗಳಲ್ಲಿ ಒಡೆಯರ ಕಾಲದ ಗಂಡುಗತ್ತಿಗಳು, ತಲವಾರಗಳಿವೆ, ಕುಳವಾಡಿ ದಂಡಗಳಿವೆ. ಇವರು ಆರ್ಥಿಕವಾಗಿ ಕೊಂಚ ಅನುಕೂಲಸ್ಥರು. ಹಾಗೆಯೇ ಇಂಥವರ‌ ಮೇಲೆ ಮೇಲ್ವರ್ಗದಿಂದ ದಾಳಿಗಳಾದದೂ ಸಹ ಅಪರೂಪವೆ. ಹಾಗೇ ತುಮಕೂರು ಚಿತ್ರದುರ್ಗ ಭಾಗದ ಹರ್ತಿಗೌಡ ಚಲವಾದಿ ಹೊಲಯರು ಸಹ ಇಂಥಹ ಹಲವು ಐತಿಹಾಸಿಕ ಆಯುಧಗಳನ್ನು ಹೊಂದಿರುವ ಮನೆತನಗಳಾಗಿವೆ. ಕಲ್ಯಾಣ ಕರ್ನಾಟಕದ ಕೂಟಗಾರ ಮನೆತನದ ಹೊಲಯರ ಮನೆಗಳಲ್ಲೂ ಇಂಥಹ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ತಲವಾರ ಕತ್ತಿ ಬಾಕುಗಳಿವೆ.‌ ಆಯುಧ ಅನ್ನೋದು ಅಧಿಕಾರದ ಸೂಚಕವೂ ಹೌದು. ಮಾನಸಿಕವಾಗಿ ಸುರಕ್ಷತಾ ಭಾವವನ್ನುಂಟು ಮಾಡುವ ಮದ್ದೂ ಹೌದು.‌ ಕರ್ನಾಟಕದಲ್ಲಿ ಇಂಥಹ ಪ್ರವಿಲೇಜ್ ಇರುವುದು ಹೊಲಯರ ಅರ್ಧ ಜನಸಂಖ್ಯೆಗಷ್ಟೇ. ಹಾಗೂ ತಳವಾರಿಕೆಯ ಹಿನ್ನೆಯ ಇರುವ ಕೆಲವು ಮಾದಿಗರ ಮನೆತನಗಳಿಗಷ್ಟೇ. ಇನ್ನುಳಿದ ಅಪಾರ ಸಂಖ್ಯೆಯ ಹೊಲಯ ಮಾದಿಗರಿಗೆ ನಿಜಕ್ಕೂ ಈಗ ಅವಶ್ಯಕತೆ ಇರುವುದು ಈ ಸಶಸ್ತ್ರಗಳನ್ನು ಹೊಂದುವ ಹಕ್ಕೇ ಆಗಿದೆ. ಇದಕ್ಕಾಗಿ ಈಗಿನ ಸರ್ಕಾರವೂ ಪರಿಶಿಷ್ಟ ಸಮುದಾಯದ ಸಣ್ಣಪುಟ್ಟ ವ್ಯಾಪಾರಿಗಳು, ಸಣ್ಣಪುಟ್ಟ ಉದ್ಯಮಿಗಳ ಪರವಾಗಿ ಯೋಜನೆಗಳನ್ನು ರೂಪಿಸಿ ಸಹಕಾರ ನೀಡುತ್ತದೆಂದು ಭಾವಿಸುತ್ತೇವೆ.

ಹೊಲಯ ಮಾದಿಗರಿಗೆ ನಾವು ನೀಡಬಹುದಾದ ಒಂದೇ ಒಂದು ಸಜೆಷನ್, ರಣರಂಗಕ್ಕೆ ಆಯುಧಗಳೊಂದಿಗೆ ಹೋಗಿ ಬರಿಕೈಯಲ್ಲಿ ಹೋಗದಿರಿ. ನಾವು ಉದ್ಯಮಿಗಳಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಏನೇ ಸಮಸ್ಯೆಗಳು ಬಂದರೂ, ಯಾರೇ ತುಳಿಯಲು ಬಂದರೂ‌ ಅವರನ್ನ ಸಮರ್ಥವಾಗಿ ಎದುರಿಸಲು ತಯಾರಾಗಿರಬೇಕು.‌

No comments:

Post a Comment

ಆದಿಗುರು ಶ್ರೀ ಶಂಕರಾಚಾರ್ಯರ ಅದ್ವೈತ ಸಿದ್ದಾಂತಕ್ಕೆ ಪರಿಪೂರ್ಣತೆ ಕೊಟ್ಟದ್ದು ಅಲಂಕಾರನೆಂಬ ಹೊಲಯರ ಹುಡುಗ!!!

ಕೇರಳದ “ಪೊಟ್ಟನ್ ತೆಯ್ಯಂ” (ಉತ್ತರ ಕೇರಳದಲ್ಲಿ‌ ನಡೆಯುವ ಒಂದು ದೈವದ ಭೂತಾರಾಧನೆ) ಪ್ರಕಾರ ಶಂಕರರ “ಅದ್ವೈತ” ಸಿದ್ದಾಂತವನ್ನು ಪರಿಪೂರ್ಣಗೊಳಿಸಿ ಕೊಟ್ಟವ ಒಬ್ಬ ಪುಲಯ (ಹೊ...