ಹೊಲೆಯ ಎಂದರೆ ಹಿರಿದಿದೆ ಅದರರ್ಥ!

 




ಹೊಲಯ/Holaya :

  • ಹೊಲದವನು/Man of the land or agricultural fields;
  • ಹೊಲಕ್ಕೆ ಸಂಬಂಧಿಸಿದ ವ್ಯಕ್ತಿ/Man related to the the land or agricultural fields;
  • ಹೊಲ ಮಾಡುವವನು/Man who cultivates the land or agricultural field;
  • ಹೊಲದ ಒಡೆಯ/Owner of the land or agricultural field;
  • ಹೊಲಗೇಯುವವನು/Man who works on land or agricultural field;
  • ಮೊದಲ ರೈತ/The first and foremost cultivator; 
  • ಆದಿ ಬೇಸಾಯಗಾರ/The First Agriculturalist;
  • ಆರಂಬಗಾರ/The Agriculturist or the First Borns;
  • ಅರವ/Cultivator or Agriculturist

 

ಹೊಲೆಯ/Holeya : 

  • "ಹೊಲೆ", ಎಂದರೆ ಮಣ್ಣು, ಹೊಲೆಯ ಎಂದರೆ ಮಣ್ಣಿನವನು/Man related to the Soil; ಶಾಸನಗಳಲ್ಲಿ ಹಾಗೂ ಶರಣಪರಂಪರೆಯ ವಚನಗಳಲ್ಲಿ ಕೆಲವು ಕಡೆ ಉಲ್ಲೇಖಗೊಂಡಿರುವ "ಹೊಲೆ-ಹದಿನೆಂಟು ಕುಲಜಾತಿ" ಎಂಬ ಹೆಸರು, ಹಾಗೂ ಜಾನಪದಗಳಲ್ಲಿರುವ "ಹೊಲೆಚೆಲುವ" (ಮೇಲುಕೋಟೆ ಚೆಲುವರಾಯ ಸ್ವಾಮಿ), "ಹೊಲೆಜೋಗಿ" (ಆದಿಚುಂಚನಗಿರಿ ಬೋರೆದೇವರು/ಕಾಲಭೈರವ), ಇಲ್ಲಿ ಹೊಲೆ ಎಂಬುದು Native (ನೇಟಿವ್:ನಾಡ/ನಾಡವನು) = People Related to the land ಎಂಬರ್ಥ ಕೊಡುತ್ತಿದ್ದು ನೇರವಾಗಿ "ನಾಡ" / "ನಾಡವನು" ಎಂಬ ಸಮಾನಾರ್ಥ ಪದವಾಗಿದೆ. "ಹೊಲೆ-ಹದಿನೆಂಟು ಕುಲಜಾತಿ" ಎಂದರೆ ನಾಡಿನವರಾದ ಹೊಲೆಯರ ಸಹಿತ ಹದಿನೆಂಟು ಜಾತಿ/ಕುಲದವರು, "ಇಲ್ಲವೇ" ನಾಡಿನವರಾದ ಹದಿನೆಂಟು ಕುಲಜಾತಿಗಳು ಎಂಬರ್ಥವನ್ನು ಕೊಡುತ್ತದೆ.
  • ಮಣ್ಣಿನಿಂದಾದವ/Man who rised from the Soil;
  • ಮಣ್ಣಿನ ಮಗ/Son of the Soil;
  • ಪಾರ್ವತೀ ದೇವಿಯ ಹೊಲೆಮನೆಯಲ್ಲಿ (ಎಂದರೆ ಬಸಿರಿನಲ್ಲಿ) ಹುಟ್ಟಿದವ/Men who was born in the womb of Goddess Parvati Devi (ಪೌರಾಣಿಕ ಹಿನ್ನೆಲೆಯ ಪ್ರಕಾರ ಪಾರ್ವತೀ ದೇವಿಯ ಹೊಲೆಮನೆ, ಎಂದರೆ ಬಸಿರು/ಗರ್ಭದಲ್ಲಿ ಜನಿಸಿದ ಅವಳಿಗಳು ಹೊಲಯರು ಮತ್ತು ಮಾದಿಗರು. ಮೊದಲು ಹುಟ್ಟಿದವನು ಮಾದಿಗ, ಮಹಾ ಆದಿ-ಗ ಎನಿಸಿಕೊಂಡನು, ನಂತರ ಹುಟ್ಟಿದವನು ಪಾರ್ವತೀ ದೇವಿಯ ಹೊಲೆಮನೆಯಿಂದಲೇ ಎಂದರೆ ಬಸಿರು/ಗರ್ಭದಿಂದಲೇ ಹೆಸರು ಪಡೆದು ಹೊಲೆಯನೆನಿಸಿದ./According to the folklore Adishaiva mythological background, the Holaya & Madiga twins were born in the womb of Goddess Parvati. The firstborn became Madiga, as the term itself means the first human "Maha Adi-ga", the next born took his name from the womb (womb is holemane in Kannada) of Goddess Parvati itself.)


ಪುಲಯ/Pulaya (ಹಳಗನ್ನಡದ ಪ ಹೊಸಗನ್ನಡದಲ್ಲಿ ಹ ಆದಂತೆ ಹಳಗನ್ನಡದ ಪುಲಯ ಹೊಸಗನ್ನಡದಲ್ಲಿ ಹೊಲಯ ಎಂದಾಗುತ್ತದೆ. ಪುಲ ಹಾಗೂ ಹೊಲ ಎರಡೂ ಕೃಷಿ ಭೂಮಿ ಎಂಬ ಅರ್ಥವನ್ನೇ ನೀಡುತ್ತದೆ./"Pa" in Halagannada is "ha" in Hosgannada, Pulaya in Halagannada is Holaya in Hosgannada. Both Pula and Hola mean agricultural land) :

  • ಹೊಲದೊಡೆಯOwner of the land or agricultural field; (ಪುಲ ಎಂಬ ಹಳಗನ್ನಡ ಪದದ ಅರ್ಥ ಹೊಲ ಅಥವಾ ನೆಲ ಎಂದು ಅರ್ಥೈಸುತ್ತದೆ./ The Halagannada word pula means agricultural field or land.);
  • ಬೆಳೆದು ತಿನ್ನುವವನು/ Who cultivates and eat or who eats what he raises in his agricultral fields (ಪುಲುಸು ಎಂಬ ಹಳಗನ್ನಡದ ಈಗಿನ ರೂಪ ಹುಲುಸು ಎಂದು. ಬೆಳೆದ ಫಸಲನ್ನು ಹುಲುಸು ಎಂದು, ಇದಕ್ಕೆ ವೃದ್ದಿ, ಸಮೃದ್ಧಿ ಎಂಬ ಅರ್ಥಗಳುಂಟು/ Hulusu is the current form of the old-Kannada word Pulusu. The raised/grown crop is called Hulusu, which also means growth & prosperity);
  • ಮಹಾ-ಮನು/The Great Human (ಪುಲ್‌ ಎಂಬ ಪದಕ್ಕೆ ಸಂಸ್ಕೃತದಲ್ಲಿ ಮಹಾನ್‌ ಎಂಬ ಅರ್ಥವಿದೆ. ಸಪ್ತ ಮಹರ್ಷಿಗಳಲ್ಲೊಬ್ಬನಾದ ಶ್ರೀ ಪುಲಸ್ತ್ಯನು ಹೊಲಯರ ಮೂಲಪುರುಷರಲೊಬ್ಬ ಎನ್ನಲಾಗುತ್ತದೆ. ಈ ಹೆಸರಿನಲ್ಲಿರುವ ಪುಲ್‌ ಎಂಬ ಧಾತು ಪದದ ಅರ್ಥ "ಮಹಾನ್"‌ ಎಂದಾಗಿದ್ದು, ಪುಲಯ ಎಂಬ ಪದಕ್ಕೆ ಇದು ಮಹಾ-ಮನು ಎಂಬ ಅರ್ಥವನ್ನು ಕೊಡುತ್ತದೆ/ The word Pul means great in Sanskrit. Sri Pulastya, one of the seven great sages, is said to be one of the progenitors of the Holayas. The elemental word pul in this name means "great", which gives the word pulaya meaning as "maha-manu", The Great Human)

 

ಪೊಲೆಯ/Pulaya : (ಹಳಗನ್ನಡದ ಪ ಹೊಸಗನ್ನಡದಲ್ಲಿ ಹ ಆದಂತೆ ಹಳಗನ್ನಡದ ಪೊಲೆಯ ಹೊಸಗನ್ನಡದಲ್ಲಿ ಹೊಲೆಯ ಎಂದಾಗುತ್ತದೆ. ಪೊಲೆ ಹಾಗೂ ಹೊಲೆ ಎರಡೂ ಮಣ್ಣು ಎಂಬ ಅರ್ಥವನ್ನೇ ನೀಡುತ್ತದೆ/"Pa" in Halagannada is "ha" in Hosgannada, and "Poleya" in Halagannada is Holeya in Hosgannada. Both Poley and Holey mean soil)

  • "ಹೊಲೆ" ಅಥವಾ "ಪೊಲೆ", ಎಂದರೆ ಮಣ್ಣು, ಮಣ್ಣಿನವನು/ Man related to the Soil;
  • ಮಣ್ಣಿನಿಂದಾದವ/ Man who rised from the Soil;
  • ಮಣ್ಣಿನ ಮಗ/ Son of the Soil;
  • ಪಾರ್ವತೀ ದೇವಿ ಬಸಿರಿನಲ್ಲಿ (ಹೊಲೆಮನೆಯಲ್ಲಿ) ಹುಟ್ಟಿದವ/ Men who was born in the womb of Goddess Parvati Devi;

 

ಪೊಲಿಯ/ಹೊಲಿಯ/Poliya/Holiya : (ಪೊಲಿಯ ಹಾಗು ಹೊಲಿಯ ಎಂಬ ಪದವು ಹೊಲಯ/ಪುಲಯ ಅಥವಾ ಹೊಲೆಯ/ಪೊಲೆಯ ಪದಗಳಿಗೆ ಸಂಬಂಧಿಸಿದ ಒಂದು ರೂಪವಾಗಿದೆ./The word Poliya and Holiya is a related form of the words Holaya/Pulaya or Holeya/Poleya.)

  • ಸಮೃದ್ದತೆಯ ಜಾನಪದ ದೈವವಾದ ಪೊಲಿದೇವ/ಬಲಿದೇವರ ಆರಾಧಕರು/The Worshippers of Polideva/Balideva - The Folklore God of Plentifullness (ಕೊರಗರು ಹಾಗೂ ಮಲೆನಾಡು ಹಾಗೂ ತುಳುನಾಡಿನ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಸಮುದಾಯಗಳು/Koragas, Adi Karnataka and Adi Dravidian communities of Malenadu and Tulunadu);
  • ಬಲೀಂದ್ರನ ವಂಶಸ್ಥರು/The Decedents of Balindra; (ಮಲೆನಾಡಿನ ಹೊಲಯರು/Holayas of Malenadu Regions);
  • ಬಲೀಂದ್ರ ಕುಲದವರು/People related to the clan of Balindra (ಮಲೆನಾಡಿನ ಹೊಲಯರ ಕುಲಗಳಲ್ಲೊಂದು/One of the many kulas of Malenadu Holayas);
  • ಗುಡ್ಡಗಾಹಿ ಅಥವಾ ಬೆಟ್ಟದ ಹೊಲಯರನ್ನು ಸೂಚಿಸುವ ಮಲೆಪ/ಮಲೆಯ/ಮಲೆಯವ ಎಂಬರ್ಥ ಕೊಡುವ ಪದ/Poliya is a term indicating the Holayas of rainforests & Hilly Regions where Malepa/Maleya/Maleyava names are also used to identify them.


ಪುಲತಿ/ಪರತಿ/ಹೊಲತಿ/ಹರತಿ/ಹರಿತಿ/ಹರಿತಿ/Pulati/Parati/Holati/Harati/Hariti :

  • ಹೊಲಯರ ಹೆಂಗಸು/Holaya Women
  • ಕೃಷಿಯನ್ನು ಆವಿಷ್ಕರಿಸಿದವಳು/Founder of Cultivation/Agriculture
  • ಮಾತೃಗಣದ ಅಧಿದೇವತೆ/The First & Foremost Goddess of Matriarchy
  • ಊರಮ್ಮ/ಗ್ರಾಮದೇವತೆ/Village Goddess
  • ಏಳೂರಮ್ಮ ಅಥವಾ ಸಪ್ತಮಾತೃಕೆಯರ ಪೈಕಿ ಮೊದಲನೆಯವಳು/The First among Seven Goddsess (ಪೊಲೇರಮ್ಮ/Poleramma)
  • ಮಾತಂಗಿಯ ಅವಳಿ ಒಡಹುಟ್ಟು/Twin Sisiter of Goddess Matangi
  • ಮೈ ನೆರೆದ ಹೆಣ್ಣು/Girl who enters puberty


ಹೊಲಗೇರಿ/Holageri :

  • ಹೊಲಯರ ಕೇರಿ/Place Inhabitated by Holayas.
  • ಹೊಲಯರು ವಾಸಿಸುವ ಊರಿನ ಭಾಗ/Part of a village settlement where Holayas live.
  • ಊರಿನ ಆದಿ ಮತ್ತು ಅಂತ್ಯ ಭಾಗ/The starting and ending point of a village settlement.
  • ಊರೊಂದರ ದಕ್ಷಿಣ, ಪೂರ್ವ ಅಥವಾ ಪಶ್ಚಿಮ ಭಾಗ/Southern, Eastern or Western part of village settlement.
  • ಮೊದಲ ತಂಗಾಳಿ ಸೋಕುವ ಕೇರಿ (The street or part of village where the first breeze of Southwestern mansoons blow through)
  • ತೆಂಕಣಾಚಾರರ ವಾಸಸ್ಥಾನ/place where Tenkanacharyas live (ನಯಸೇನನ ಧರ್ಮಾಮೃತದಂತೆ/According to Nayasena's Dharmamrita of 12th CE)


ಮಾಹಿತಿ ಮೂಲ/Information Source

  • Rev. F. Kittel - Some remarks on Dr. Pope's "Notes on the South - Indian or Dravidian Family of Languages" Indian Antiquary, Vol. Vlll, February 1879
  • Gustav Oppert Ph.D. On the Original Inhabitants of Bharatavarsa or India, The Dravidians, 1888
  • W.F. Sinclair - Notes on Caste in the Dekhan, India Antiquary, 1874, Vol-ll
  • R. Narasimhacharya - History of Kannada Language
  • Ullal Narasinga Rao - A Kisamwar Glossary of Kannada Words, 1891
  • John A. Halloran - Sumerian Lexicon, Version 3.0
  • Dr. Gundert - Malayalam Dictionary
  • Sir Henry M Elliot - Supplemental Glossary of Indian Terms, Vol. l
  • Hampa Nagarajaiah - Dravida Basha Vijnana
  • Rev. F. Kittel - Kannada - English - Kannada Dictionary
  • South Indian Inscriptions
  • Epigraphia Carnatica
  • Dr. B N Chandraiah - A Descriptive Grammer of Harijan Dialect, 1987
  • W T Elmore - Dravidian Gods in Modern Hinduism, 1913
  • J T Molesworth - Dictionary, Marathi and English, Bombay, 1857


ಕನ್ನಡದ ವಿಚಾರದಲ್ಲಿ ನಮ್ಮದು ನೇರ ನಿಷ್ಠೂರ ನಿಲುವು

ನಾವು ಆರಂಬಗಾರರು. ಆದಿಕನ್ನಡಿಗರು. ಆದಿದ್ರಾವಿಡರು. ಈ ನಾಡು ಕಟ್ಟಿದವರು. ಈ ನುಡಿಯ ಕಟ್ಟಿದವರು. ಬಿದ್ದು ಮಣ್ಣಾದ, ಕನ್ನಡದ ಆರಂಬಗಾರರು ಕಟ್ಟಿದ ಮಹಾರಸೊತ್ತಿಗೆಗಳ ವಾರಸುದಾರರು. ಯಾರ ದಂಡಿಗೂ, ದಾಳಿಗೂ, ದೌರ್ಜನ್ಯಗಳಿಗೂ ಜಗ್ಗದೇ ನಿಂತು ನಾಡನ್ನುಳಿಸಿದವರು. ನುಡಿಯನ್ನುಳಿಸಿದವರು. ಕನ್ನಡನಾಡಿನ ಹಿತ ಕಾಯುವುದು ನಮ್ಮ ಆದ್ಯತೆಯಾದೆ. ಹೊರನಾಡುಗಳಲ್ಲಿ ನಮ್ಮ ಸಮಾನರಾದವರ ಮೇಲೆ ಆಗುವ ದೌರ್ಜನಗಳನನು ವಿರೋಧಿಸುವ ಬರದಲ್ಲಿ, ಅವರುಗಳಿಗೆ ನೈತಿಕ ಬೆಂಬಲವಾಗಿ ನಿಲ್ಲುವ ಆತುರದಲ್ಲಿ ನಮ್ಮ ನಾಡನ್ನೇ ನಾವು ಹಾಳುಗೆಡವಿಕೊಳ್ಳುವ ದಡ್ಡತನ ತೋರುವುದು ಸರಿಯಲ್ಲ. ಈಗ ನಾವು ಮಾಡುವ ಇಂಥ ದೊಡ್ಡ ತಪ್ಪುಗಳಿಗೆ ಮುಂದೆ ಅಪಾರವಾದ ದಂಡವನ್ನೂ ನಾವೇ ತರಬೇಕಾಬಹುದು!


ಅವರ್ಣೀಯ ವರ್ಗಗಳಿಗೆಂದಿದ್ದ ಪರಿಶಿಷ್ಟ ಜಾತಿಯ ಮೀಸಲಾತಿಯನ್ನ ಈಗಾಗಲೇ ಕನ್ನಡೇತರ ಪರಿಶಿಷ್ಟರು ಹುರಿದು ಮುಕ್ಕುತ್ತಿದ್ದಾರೆ! ಇದರ ಮೇಲೆ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿ ನೆಲಹಿಡುಕತನ ತೋರಿದ ಆಳುವ ಸರ್ಕಾರಗಳ ಕೆಟ್ಟನಡೆ ಈಗಾಗಲೇ ಕರ್ನಾಟಕದ ನೆಲವನ್ನು ಹರಿದು ಅದೆಷ್ಟು ಪರಭಾಷಿಕರಿಗೆ ಹಂಚಿದೆಯೋ ತಿಳಿಯದು. ಇನ್ನೂ ಒಳಮೀಸಲಾತಿಗಾಗಿ ಹೋರಾಟಗಳು ಒಂದು ತಾತ್ವಿಕ ಯಶಸ್ಸನ್ನೂ, ಅಂತ್ಯವನ್ನು ಕಂಡಿಲ್ಲ. ಇವೆಲ್ಲವುದರ ನಡುವೆ ಪರರಾಜ್ಯದ ಅವರ್ಣೀಯ ಪರಿಶಿಷ್ಟರನ್ನ ಕರ್ನಾಟಕಕ್ಕೆ ಬಂದು ನೆಲೆಸಿ ಸೇಫ್ ಆಗಿರಿ ಎಂದು ಆಹ್ವಾನಿಸುವುದು ನಮ್ಮ ಕಾಲಮೇಲೆ ನಾವೇ ಚಪ್ಪಡಿಯನ್ನು ಎಳೆದುಕೊಂಡಂತೆ.

ಹೀಗೆ ಕರೆಯುವವರ ಬಾಲಿಶತನಕ್ಕೆ ಮದ್ದೇನು? ಹೇಡಿಗಳಾಗಿ ಓಡಿಬನ್ನಿ ಎಂಬುದಿವರ ಸಂದೇಶವಾ? ಅಥವಾ ಕರ್ನಾಟಕ ಬಿಟ್ಟಿ ಬಿದ್ದಿದೆ, ಬಂದುಬಿಡಿ ಎಂಬುದಾ? ಅಥವಾ ಕರ್ನಾಟಕದಲ್ಲಿ ಜಾತಿ ದೌರ್ಜನ್ಯಗಳೇ ಇಲ್ಲ ಎಂಬುದಾ? ಕರ್ನಾಟಕಕ್ಕೆ ಬೇರೆ ಕಾನೂನು, ಉಳಿದ ಭಾರತಕ್ಕೆ ಬೇರೆ ಕಾನೂನು ಇದೆಯಾ?

ಯಾದಗಿರಿ ಕೊಪ್ಪಳಗಳಲ್ಲಿ ಹತ್ರಾಸ್‌, ಮೊನಿಷ ವಾಲ್ಮೀಕಿ ಅತ್ಯಾಚಾರಗಳಂತಹ ಪ್ರಕರಣಗಳು ಆಗಿವೆ. ಆಗ ಇವರು ಏನು ಹೇಳಿರಬಹುದು? ಆದಿ ಕನ್ನಡಿಗರೆಲ್ಲಾ ಕರ್ನಟಕವನ್ನು ಬಿಟ್ಟು ಕೇರಳ ತಮಿಳುನಾಡು ಸೇರಿಕೊಳ್ಳಿ ಎನ್ನುತ್ತಿದ್ದರಾ?

ಉತ್ತರ ಭಾರತದಲ್ಲಿ ನಡೆಯುವುದು ಮಾತ್ರ ಜಾತಿ ದೌರ್ಜನ್ಯಗಳಾ? ದಕ್ಷಿಣ ಭಾರತವೇನು ಕ್ಲೀನ್ ಹ್ಯಾಂಡಾ?

ಏನಾಗಿದೆ ಇವರುಗಳಿಗೆ? ಕನ್ನಡ ಜನ ಈ ಕಂಡಕಂಡವರ ಸಿದ್ದಾಂತಗಳಿಗೆ ಅಡಿಯಾಳಾಗಿ ತಾಯಿನೆಲ ತಾಯಿನುಡಿಗಳ ತಲೆಹೊಡೆಯುವ ಬುದ್ಧಿ ಬಿಡುವುದು ಯಾವಾಗಾ?

ಪರನಾಡುಗಳಲ್ಲಿ ಅವರುಗಳ ಮೇಲೆ ಆಗುತ್ತಿರುವ ಅನ್ಯಾಯ ದೌರ್ಜನ್ಯಗಳಿಗೆ ಮರುಕ ವ್ಯಕ್ತಪಡಿಸುವ. ಅವರ ಬೆಂಬಲಕ್ಕೆ ನಿಲ್ಲುವ. ಅದನ್ನು ಬಿಟ್ಟು ಅತಿರೇಕದ ಬುದ್ದಿ ತೋರಿ ಊರುಬಿಟ್ಟು ಇಲ್ಲಿ ಬನ್ನಿ ಎಂದು ಕರೆವುದು ನಮಗೆ ನಾವು ಮಾಡಿಕೊಳ್ಳುವ ಅವಮಾನ ಅಷ್ಟೇ ಅಲ್ಲ, ಅವರುಗಳನ್ನೂ ಹೇಡಿಗಳಂತಾಗಿಸಿ ಅವರಿಗೂ ಮಾಡುವ ಅವಮಾನವೇ ಆಗಿದೆ.

ಆಕ್ರೋಶ ಆತುರಗಳಲ್ಲೂ ಸಹ ಮೈಮರೆತು ತಾಯಿ, ತಾಯ್ನೆಲ, ತಾಯ್ನುಡಿಗಳಿಗೆ ಕುತ್ತು ತಂದೊಡ್ಡಿಕೊಳ್ಳುವ ಯೋಚನೆ ಮಾಡಬಾರದು. ಇಂಥದ್ದು ಆಗಿಯೇ ನಮ್ಮೊಳಕ್ಕೆ ಪರಕೀಯರು ಒಕ್ಕಿದ್ದು.

ಈ ನೆಲದವರು ನಾವು ಎಂಬ ಹಮ್ಮು ಇದ್ದಮೇಲೆ ಈ ನೆಲತನ ನಮ್ಮ ಜನ ನಮ್ಮ ಮೊದಲ ಆದ್ಯತೆ ಆಗಿರಬೇಕು.‌ ಅವರ ದಲಿತ ಪರ ಹೋರಾಟದ ಬಗ್ಗೆ ಯಾವುದೇ ತಕರಾರಿಲ್ಲ. ಆ ವಿಚಾರದಲ್ಲಿ ಅವರೊಂದಿಗೆ ನಾವು ನಿಲ್ಲುತ್ತೇವೆ. ಆದರೆ ಕನ್ನಡ ಡೆಮಾಗ್ರಫಿ ಹಾಳು ಮಾಡುವ ಮಾತಾಡಿದರೆ ಅದಕ್ಕೆ ನಮ್ಮ ಬೆಂಬಲ ಇಲ್ಲ.

ಬಾಂಗ್ಲಾ ಹಿಂದೂಗಳು ದಂಡಿದಂಡಿಯಾಗಿ ಕರ್ನಾಟಕಕ್ಕೆ ವಲಸೆಯಾಗುತ್ತಿದ್ದ ಕಾಲವದು. ಎಲ್ಲಾ ಹಿಂದುತ್ವವಾದಿಗಳು, ಕೇಸರಿಪಡೆಯು “ಅವರೂ ಹಿಂದೂಗಳೇ ಅಲ್ವಾ? ಬಿಡಿ ಬಂದಿರಲಿ” ಎಂದು ಅದನ್ನು ಬೆಂಬಲಿಸಿ. ಆಗಲೂ ಯಾರಿಗೂ ಕನ್ನಡ ಡೆಮಾಗ್ರಫಿ ಬಗ್ಗೆ ಕಾಳಜಿ ಇದ್ದಂತಿರಲಿಲ್ಲ. ಈಗ ಕನ್ನಡನಾಡಿನ ಆದಿಜನರೂ ಅವರಂತೆಯೇ ವರ್ತಿಸಿತ್ತಿರುವುದು ದರಂತವಲ್ಲದೇ ಮತ್ತೇನು ಅಲ್ಲ! ನಾವೂ ಅವರನ್ನು ವಿರೋಧಿಸಿದ್ದೇವೆ. ಈಗಲೂ ನಮ್ಮದು ಅಂಥದ್ದೇ ನಿಲುವು. ಕನ್ನಡದ ವಿಚಾರದಲ್ಲಿ ನಮ್ಮದು ನೇರ ನಿಷ್ಠೂರ ನಿಲುವು.

ನಮ್ಮ ಅರಸೊತ್ತಿಗೆಗಳು ಬಿದ್ದಂತೆ ನಾವೂ ಬಿದ್ದೆವು, ಆಳಿದವರ ಕಾಲ್ತುಳಿತಕ್ಕೊಳಪಟ್ಟೆವು. ಬಹುಭಾಗ ನಮ್ಮ ಸಂಸ್ಕೃತಿ ಆಚರಣೆ ರೀವಾಜುಗಳಿಂದ ವಂಚಿತವಾದೆವು. ಕಾಲ ಕಳೆದಂತೆ, ಬದುಕಿನ ಅನಿವಾರ್ಯತೆಗಳಿಗೆದರಾಗಿ, ಇತಿಹಾಸ ವೈಷಮ್ಯಗಳು ಅಳಿದು, ಸ್ನೇಹದಿಂದಲೋ, ಅವಶ್ಯಕತೆಯಿಂದಲೋ, ಅನಿವಾರ್ಯದಿಂದಲೋ ಆ ಗಾಯಗಳಿಗೆ ಔಷಧಿ ಬೀಳುತ್ತಿದೆ. ಅದಕ್ಕೆ ಮದ್ದನ್ನು ಹಚ್ಚಿ ಇನ್ನಷ್ಟು ಬೇಗ ಅದನ್ನು ವಾಸಿಯಾಗುವಂತೆ ನಿಗಾವಹಿಸಬೇಕೇ ಹೊರತು ಅದನ್ನು ಕೆರೆದು ಕೆದಕಿ ಗಾಯಗಳು ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡಬಾರದು.

ಗಾಯ ಇದ್ದರೂ ಇಲ್ಲವೆಂದು ತೋರಿಕೊಳ್ಳುವುದು ಎಷ್ಟು ದಡ್ಡತನವೋ, ಅದನ್ನು ಕೆರೆದು ಕೆದಕಿ ಇನ್ನಷ್ಟು ರೋಗ ಹೆಚ್ಚಿಸಿಕೊಳ್ಳುವುದು ಅಷ್ಟೇ ದಡ್ಡತನ. ಭಾರತೀಯತೆ, ಸಂಪ್ರದಾಯ, ಸಂಸ್ಕೃತಿ, ಆಚರಣೆಗಳ ನೆಪವೊಡ್ಡಿ ಕೆಟ್ಟದ್ದನ್ನು ಉಳಿಸಿಕೊಳ್ಳುವುದು ಗಾಯ ಇದ್ದರೂ ಇಲ್ಲವೆಂಬಂತೆ ತೋರಿಸಿಕೊಳ್ಳುವ ದಡ್ಡತನವಾದರೆ, ಎಲ್ಲರೂ ಜಾತೀಯತೆ ಬೇದಗಳ ಮರೆತು ಒಂದುಗೂಡುವ ಹೊತ್ತಿನಲ್ಲಿ ಮತ್ತದೇ ಶೋಷಣೆಯ ಗುಂಗಿನಲ್ಲಿ ಬೆರೆಯುವ ಹೊತ್ತಿನಲ್ಲಿ ಬೇರೆ ನಿಲ್ಲುವುದು ಗಾಯವನ್ನು ಕೆರೆದು ಕೆದಕಿ ಇನ್ನಷ್ಟು ರೋಗ ಹೆಚ್ಚಿಸಿಕೊಳ್ಳುವಂತ ದಡ್ಡತನವಾಗಿದೆ. ಕನ್ನಡ ಪರತೆ ಎಂದರೆ ಅದು ನಾವು ಕಟ್ಟಿದ ನುಡಿಗೆ ನಾವು ನೀಡುವ ರಕ್ಷಣೆ. ಇಂಥಹ ಕೆಲಸದಲ್ಲಿ ಜಾತೀಯತೆ ಬೇಧಗಳನ್ನು ಮೀರಿ ಕನ್ನಡಿಗರೊಡನೆ ಬೆರೆವುದು ಸಹ ಒಂದು ಬಲಿಷ್ಠವಾದ “ಜಾತೀಯತೆ ನಾಶದ ಅಸ್ತ್ರ”ವೇ ಆಗಿದೆ. ಕನ್ನಡಿಗನೆಂಬ ಮಾನದಂಡದೆದುರು ಎಲ್ಲರೂ ಒಗ್ಗೂಡುವುದಾದರೆ ಅದಕಿಂತ ಒಳ್ಳೆಯ ಜಾತೀಯತೆ ವಿನಾಶದ ಅಸ್ತ್ರ ಬೇಕೆ? 

ಏಳಿ, ಎಚ್ಚರಿಕೆಯಿಂದಿರಿ. ಕನ್ನಡ ಕೇಂದ್ರಿತ ರಾಜಕಾರಣದ ರೂವಾರಿಗಳಾಗುವ ವಿಫುಲ ಅವಕಾಶಗಳಿವೆ. ಇದು ಅವಕಾಶವಷ್ಟೇ ಅಲ್ಲ, ಆದಿ ಕನ್ನಡಿಗರಾಗಿ ನಮ್ಮ ಜವಾಬ್ದಾರಿಯೂ ಹೌದು. ಇದು ನಮ್ಮ ಆದಿ ಕನ್ನಡ ಪರಂಪರೆಗೆ ನಾವು ಕೊಡುವ ಕೊಡುಗೆ. ಇದನ್ನು ಕಾಯ್ದು ಬೆಳೆಸಿದರೆ ಕನ್ನಡವೆಂಬ ಕೂಟವು ಜಾತೀಯತೆಯ ಬೇಧಗಳನ್ನು ಮೀರಿ ನಿಂತು ಅಲ್ಲಿ ಎಲ್ಲರೊಳಗೊಬ್ಬರಾಗಿ ಕನ್ನಡಿಗರಾಗಿ ಬದುಕನ್ನು ಕಟ್ಟಿಕೊಳ್ಳುವ ವ್ಯವಸ್ಥೆಯನ್ನೇ ಹುಟ್ಟಿಹಾಕಬಹುದು.

ಒಂದು ವಿಚಾರವನ್ನು ಮರೆಯಬಾರದು. ಭಾಷೆಯೇ ಮನುಷ್ಯನನ್ನು ಇತರೆ ಪ್ರಾಣಿವರ್ಗದಿಂದ ಭಿನ್ನವಾಗಿಸಿ ಮನುಷ್ಯನನ್ನು ಮಾಡಿದೆ. ಭಾಷೆಯಿಂದಲೇ ನಾಗರೀಕತೆ. ಭಾಷೆಯಿಂದಲೇ ಸಂಸ್ಕೃತಿ ಪರಂಪರೆಗಳು, ಮತ ಧರ್ಮಗಳು. ಅದಿಲ್ಲದೇ ಮನುಷ್ಯ ಇತರವುಗಳಂತೆ ಯಕಶ್ಚಿತ್‌ ಒಂದು ಪ್ರಾಣಿ. ಅಂಥ ಕನ್ನಡವು ಆದಿ ಕನ್ನಡಿಗರು ಕಟ್ಟಿದ ನಾಗರೀಕತೆ, ನಾಡು, ಸಂಸ್ಕೃತಿ, ಪರಂಪರೆಗಳಾಗಿವೆ. ಅದರ ಉಳಿವೆ ನಮ್ಮ ಉಳಿವು ಎಂಬಂತೆ ಸಾಧಿಸುವುದು ಸಹ ನಮ್ಮ ಜವಬ್ದಾರಿಯೇ. ಕನ್ನಡದ ವಾರಸುದಾರರಾಗಿ ಮುಂದೆ ನಿಂತು ಎಲ್ಲಾ ರೀತಿಯ ಅಸಮಾನತೆಯನ್ನು ಮೀರಿ ಬೆಳೆಯುವುದು ನಮ್ಮ ಕರ್ತವ್ಯವೂ ಹೌದು.

ನೆನಪಿರಲಿ. ನಮ್ಮ ಪೂರ್ವಜರು, ಆದಿ ಕನ್ನಡಿಗರು ಕನ್ನಡಕ್ಕೆ ಅಂಟಿಕೊಂಡು ನಾಡನ್ನು ಕಟ್ಟುದವರು. ವೈಭವೋಪೇತ ಸಾಮ್ರಾಜ್ಯಗಳನ್ನು ಹುಟ್ಟಿಹಾಕಿದವರು. ನಮ್ಮ ಒಳಿತು ಕೆಡುಕುಗಳಿಗೆ ನಾವೇ ಹೊಣೆಯಾಗಿದ್ದೇವೆ. ನಾವು ತೆಗೆದುಕೊಳ್ಳುವ ನಿರ್ಧಾರಗಳು, ನಾವಿಡುವ ಹೆಜ್ಜೆ ನಮ್ಮ ಪಾಲಿಗೆ, ನಮ್ಮ ಸಮುದಾಯದ ಪಾಲಿಗೆ, ನಮ್ಮ ಕನ್ನಡದ ಪಾಲಿಗೆ ರಚನಾತ್ಮಕ (Constructive) ಆಗಿ ಇರಬೇಕು. ಆದದ್ದು ಆಗಿಹೋಗಿದೆ. ಅದೇ ಗುಂಗಿನಲ್ಲಿ ಕಾಲ ಕಳೆದರೆ, ಅವುಗಳ ಬೆನ್ನಿಗೆ ಬಿದ್ದು ಅದರದೇ ಸನ್ನಿಯಲ್ಲಿ ಮುಳುಗಿ ಬೌದ್ಧಿಕ ಸ್ವಾಸ್ಥ್ಯವನ್ನು ಹಾಳುಮಾಡಿಕೊಳ್ಳುವುದು ನಮಗೂ ನಮ್ಮ ಮುಂದಿನ ಪೀಳಿಗೆಗೂ, ಸಮುದಾಯಕ್ಕೂ ವಿನಾಶಕಾರಿ (destructive) ಆಗಿದೆ.

ಹೊಲಯ ಮಾದಿಗರು ಯಾರೊಡನೆ ನಿಲ್ಲಬೇಕು, ಯಾರ ಪರವಾಗಿರಬೇಕು ಎಂದು ಸ್ಪಷ್ಟವಾಗಿ ನಿರ್ಧರಿಸಬೇಕಿದೆ. ಹೊಲಯರು ಮತ್ತು ಮಾದಿಗರನ್ನು ಮೇಲೇರಲು ಉತ್ತಮ ಮಾರ್ಗ ಯಾವುದು?

ನಗರೀಕರಣ, ಸೌಹಾರ್ದತೆ, ಸ್ನೇಹಸಂಬಂಧ, ಒಂದು ಸಾಮಾನ್ಯ ಗುರಿಗಾಗಿ ಜಾತಿಬೇಧಗಳ ಮರೆತು ಒಂದಾಗಿ ಕೆಲಸ ಮಾಡುವ ಸಮಮನಸ್ಸುಗಳ ನಡುವೆ ಬೆಳೆಯುವುದು, ಇತ್ಯಾದಿ ವಿಚಾರಗಳ ಭಾಗವಾಗಿ ಸಮಾಜದ ಮುಖ್ಯವಾಹಿನಿಯೊಂದಿಗೆ ಹೊಂದಿಕೊಳ್ಳುವುದೇ?

ಅಥವಾ ಕೆಲವು ರಾಜಕೀಯ ಸಿದ್ಧಾಂತಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಲಾಭವಾಗುವಂತೆ ಅವರಿವರ ಸಿದ್ದಾಂತಗಳ ಅಡಿಯಾಳುಗಳಾಗಿ ಗಲಭೆ ಸಂಘರ್ಷಗಳಲ್ಲಿ ಮುಳುಗಿಹೋಗುವುದಾ? ಹಿಂದೆ ನಡೆದುಹೋದ ಶೋಷಣೆಯ ಗುಂಗಿನಲ್ಲೇ ಮುಂದಿನ ಭವಿಷ್ಯದ ಸೊಗಸನ್ನೆಲ್ಲಾ ಕಳೆದುಕೊಳ್ಳುವುದಾ?

ನಾಡು ನುಡಿಯ ಸಿದ್ದಾಂತದಲ್ಲಿ, ನುಡಿ ಕೇಂದ್ರಿತ ರಾಯಕಾರಣದಲ್ಲಿ ಸ್ವಾಭಿಮಾನದ ರಾಜಕೀಯ ಪ್ರವೃತ್ತಿಯನ್ನು ರೂಢಿಸಿಕೊಂಡು ನಿಮ್ಮಲ್ಲಿರುವ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುವುದು ಈ ನಮ್ಮ ನಾಡಿಗೂ ನಮ್ಮ ನುಡಿಗೂ ನಮ್ಮ ನಾಡ ಜನರಿಗೂ ಆದಿ ಕನ್ನಡಿಗರಾದ ನಾವು ಕೊಡುವ ಒಳ್ಳೆಯ ಕೊಡುಗೆಯಾಗುತ್ತದೆ.

ಯಾರು ನಿಮ್ಮ ನಿಜ ಇತಿಹಾಸ ವಿಚಾರಗಳನ್ನು ಹಂಚಿಕೊಳ್ಳುವರೋ, ಯಾರು ನಿಮ್ಮಲ್ಲಿರುವ ಜಾತಿ ಕೀಳರಿಮಗೆ ಮದ್ದನ್ನು ಕೊಟ್ಟು ಅದನ್ನು ನಿವಾರಿಸುವರೋ, ನಿಮ್ಮ ಆದಿಮ ಸಂಸ್ಕೃತಿ ಪರಂಪರೆಗಳ ಬಗ್ಗೆ ಬರೆದು ನಿಮ್ಮಲ್ಲಿ ಅರಿವು ಮೂಡಿಸುವವರೋ, ಯಾರು ನಿಮಗೆ ಉದ್ದಾರವಾಗಲು ಉದ್ಯಮಗಳ ಐಡಿಯಾಗಳನ್ನು ನೀಡುವರೋ, ಅದಕ್ಕೆ ಪೂರಕವಾದ ಮಾಹಿತಿ, ಸೌಲಭ್ಯಗಳನ್ನು ಹಂಚಿಕೊಳ್ಳುವರೋ, ಹೀಗೆ ನಿಮ್ಮ ಒಳಿತಿಗೆ ಕಾರಣವಾಗುವ ಯಾವುದೇ ವಿಚಾರದೊಂದಿಗೆ ನಿಲ್ಲಿ. ಶಿಕ್ಷಣ, ದುಡಿಮೆ/ಉದ್ಯಮ, ಭೂ ಹಿಡುವಳಿ, ಸಂಘಟನೆ, ನಾಡು ನುಡಿ ನೆಲ ಜನ ಕೇಂದ್ರಿತ ಸಿದ್ದಾಂತ, ಸಕ್ರೀಯ ರಾಜಕಾರಣ ಆಸಕ್ತಿಯಷ್ಟೇ ನಮ್ಮನ್ನು ಉದ್ದರಿಸುವುದು.

ಆದಿಗುರು ಶ್ರೀ ಶಂಕರಾಚಾರ್ಯರ ಅದ್ವೈತ ಸಿದ್ದಾಂತಕ್ಕೆ ಪರಿಪೂರ್ಣತೆ ಕೊಟ್ಟದ್ದು ಅಲಂಕಾರನೆಂಬ ಹೊಲಯರ ಹುಡುಗ!!!

ಕೇರಳದ “ಪೊಟ್ಟನ್ ತೆಯ್ಯಂ” (ಉತ್ತರ ಕೇರಳದಲ್ಲಿ‌ ನಡೆಯುವ ಒಂದು ದೈವದ ಭೂತಾರಾಧನೆ) ಪ್ರಕಾರ ಶಂಕರರ “ಅದ್ವೈತ” ಸಿದ್ದಾಂತವನ್ನು ಪರಿಪೂರ್ಣಗೊಳಿಸಿ ಕೊಟ್ಟವ ಒಬ್ಬ ಪುಲಯ (ಹೊ...