ಹೊಲಯ ಮಾದಿಗರು ಶಿವಕ್ಷತ್ರಿಯರು, ಅದೇ ಕಾರಣಕ್ಕೆ ಅವರನ್ನು ಬಲಗೈ (ಬಲಭುಜ ಕ್ಷತ್ರಿಯ) ಎಡಗೈ (ಎಡಭುಜ ಕ್ಷತ್ರಿಯ) ಎಂದು ಕರೆಯುವುದು...

ಕರ್ನಾಟಕದ ಮಟ್ಟಿಗೆ ಆದಿಮ ಜಾತಿಕುಲಗಳೆನಿಸಿಕೊಳ್ಳುವ ಹೊಲಯ ಮಾದಿಗರನ್ನು ಕ್ರಮವಾಗಿ ಬಲಗೈ ಎಡಗೈ ಎಂದೂ ಗುರುತಿಸುವ ರೂಢಿಯೂ ಇದೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದರೆ ಇದರ ಹಿನ್ನೆಲೆ ಇತಿಹಾಸ ಬಹಳಷ್ಟು ಜನರಿಗೆ ತಿಳಿದಂತಿಲ್ಲ. ಸಾಮಾಜಶಾಸ್ತ್ರೀಯ ಸಂಶೋಧಕರ ಪ್ರಕಾರ ಹಿಂದೆ ಈ ಎಡಗೈ ಬಲಗೈ ವಿಂಗಡನೆ ಕೇವಲ ಹೊಲಯ ಮಾದಿಗರಿಗಷ್ಟೇ ಸೀಮಿತವಾಗದೇ ಕನ್ನಡ ದೇಶದ ಹೊಲೆಹದಿನೆಂಟು ಜಾತಿಗಳಿಗೂ ಅನ್ವಯಿಸುತ್ತಿತ್ತಂತೆ. ರಾಜಾಡಳಿತ ರಾಜತಂತ್ರಕ್ಕೆ ಹಾಗೂ ಬೇಸಾಯಕ್ಕೆ ಸಂಬಂಧಿಸಿದ ಜಾತಿಕುಲಗಳನ್ನೆಲ್ಲವನ್ನೂ ಬಲಗೈ ಜಾತಿಗಳೆಂದು, ಪಶುಪಾಲನೆ, ಬೇಟೆ, ಕಲಾವಂತಿಕೆ, ಕುಶಲಕಾರ್ಮಿಕ, ಹಾಗೂ ಕಸುಬಿನಾಧಾರದ ಜಾತಿಗಳನ್ನೆಲ್ಲಾ ಎಡಗೈ ಜಾತಿಗಳೆಂದು ಗುರುತಿಸಲಾಗಿದತ್ತೆಂದು ಹೇಳಲಾಗುತ್ತದೆ. ಆದರೆ ಈ ಬೇಧ ಇಂದು ಉಳಿದೆಲ್ಲಾ ಜಾತಿಗಳಲ್ಲಿ ಮರೆಯಾಗಿ ಹೊಲಯ ಮಾದಿಗರಿಗೆ ಮಾತ್ರ ಸೀಮಿತಗೊಂಡದ್ದು ಹೇಗೆ ಎಂಬುದು ಅಸ್ಪಷ್ಟವಾಗೇ ಉಳಿದುಬಿಟ್ಟಿದೆ. ಇದೆಲ್ಲದರ ನಡುವೆ ೧೭-೧೮ನೇ ಶತಮಾನದ ಜೈನ ಬರಹಗಾರ ದೇವಚಂದ್ರನು ತನ್ನ ರಾಜಾವಳಿ ಕಥಾಸಾರದಲ್ಲಿ ದಾಖಲಿಸಿರುವ ಒಂದು ಆದಿಶೈವ ಜನಪದ ಕಥೆಯು ಈ ಗೊಂದಲವನ್ನು ಪರಿಹರಿಸುವಂತೆ ಕಾಣಿಸುತ್ತದೆ.



ವೈದಿಕ ಪುರಾಣದಲ್ಲಿ ನಾಲ್ಕು ವರ್ಣೀಯರು ತಮ್ಮ ಗುಣಸೂಚಿಸುವಂತಹ ಬ್ರಹ್ಮನ ಅಂಗಗಳಿಂದ ಹುಟ್ಟಿದ ಕಥೆಯಂತೆ ಹೊಲಯ ಮಾದಿಗರಿಗೂ ಇಂಥಹ ಒಂದು ಪೌರಾಣಿಕ ಹಿನ್ನೆಲೆ ಇದೆ ಎಂಬುದು ಕೆಲವರಿಗೆ ಗೊತ್ತು, ಹಲವರಿಗೆ ಗೊತ್ತಿಲ್ಲ! ಪಾರ್ವತಿಯ ಹೊಲೆಮನೆ, ಎಂದರೆ ಪಾರ್ವತೀಯ ಗರ್ಭದಿಂದ ಜನಿಸಿದ ಅವಳಿ ಮಕ್ಕಳು ಹೊಲಯ ಮಾದಿಗರು ಎಂಬ ಕಥೆ ಹೊಲಯ ಮಾದಿಗರ ಆದಿಮ ಶಾಕ್ತ ಮೂಲದ ಬಗೆಗಿನ ಮೊಟ್ಟ ಮೊದಲ ಪೌರಾಣಿಕ ಜಾನಪದೀಯ ಹಿನ್ನೆಲೆಯಾದರೆ, ದೇವಚಂದ್ರ ದಾಖಲಿಸಿರುವ ಕಥೆಯು ಹೊಲಯ ಮಾದಿಗರು ಶಾಕ್ತ ಪಂಥದೊಡನೆ ಆದಿಶೈವ ಜನಪದ ಪಂಥದಲ್ಲಿಯೂ ಸ್ಥಾನ ಪಡೆದುಕೊಂಡದರ ಸೂಚಕವಾಗೇ ನಿಲ್ಲುತ್ತದೆ. ಈ ಆದಿಶೈವದ ಜನಪದ ಕಥೆಯ ಪ್ರಕಾರ ಪೂರ್ವಾಭಿಮುಖವಾಗಿ ಮುಳ್ಳುಗದ್ದುಗೆಯ ಮೇಲೆ, ಎಂದರೆ ಮೂಡಲಗಿರಿ ಸಾಲುಗಳ ಗದ್ದುಗೆಯ ಮೇಲೆ ಕುಳಿತ ಶಿವನ ಬಲಭುಜದಿಂದ ಹುಟ್ಟಿದ ಹೊಲಯರು ಬಲಭುಜ ಶಿವಕ್ಷತ್ರಿಯರೆಂದು, ಎಡಭುಜದಿಂದ ಹುಟ್ಟಿದ ಮಾದಿಗರನ್ನು ಎಡಭುಜ ಶಿವಕ್ಷತ್ರಿಯರೆಂದು ಕರೆಯಿಸಿಕೊಂಡತಂತೆ. ತನ್ನ ಬಲಕ್ಕಿದ್ದ ದಕ್ಷಿಣ ದೇಶವನ್ನು ಹೊಲಯರಿಗೂ, ತನ್ನ ಎಡಕ್ಕಿದ್ದ ಉತ್ತರ ದೇಶವನ್ನು ಮಾದಿಗರಿಗೂ ಗೊತ್ತುಪಡಿಸಿ ಆಳಲು ಆಜ್ಞಿಸಿದನೆಂಬ ಕಥೆ ಇದೆ.

ಇಲ್ಲಿ ಒಂದು ವಿಚಾರವನ್ನು ನಾವು ಗಮನಿಸಲೇ ಬೇಕಾಗಿದೆ. ಆರ್ಯ ಮತದಲ್ಲಿ ವರ್ಣಗಳ ಹುಟ್ಟಿನ ಬಗೆಗಿರುವ ಪೌರಾಣಿಕ ಕಥೆಗಳಲ್ಲಿ ಕೈ/ತೋಳು/ಭುಜವು ಕ್ಷಾತ್ರತ್ವದ ಸಂಕೇತವಾಗಿದೆ ಎಂಬುದನ್ನು ನಾವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಇದೇ ಕಾರಣಕ್ಕೆ ಆರ್ಯಮತದ ಕ್ಷತ್ರಿಯರು ಬ್ರಹ್ಮನ ತೋಳಿನಿಂದ ಹುಟ್ಟಿದರೆಂಬ ಪೌರಾಣಿಕ ಹಿನ್ನೆಲೆ ಇರುವುದು.


ಇನ್ನೂ ಇದಕ್ಕೆ ಪೂರಕವೆಂಬಂತೆ ಈಗಿನ ಹಲವು ಭಗೋಳಿಕ ಹಾಗೂ ಜನಾಂಗ ಶಾಸ್ತ್ತೀಯ ಅಂಶಗಳನ್ನು ನಾವು ಗಮನಿಸಬಹುದು. ಉತ್ತರ ಭಾರತದ ಇತಿಹಾಸವು ಮೋರಿಯ ಬುಡಕಟ್ಟಿನ ಮೌರ್ಯ ರಾಜಮನೆತನದಿಂದ ಉತ್ತುಂಗಕ್ಕೇರಿ ಜಗದ್ವಿಖ್ಯಾತಿಗೊಳ್ಳುತ್ತದೆ. ಈ ಮೋರಿಯ ಬುಡಕಟ್ಟು ಮಾತಂಗ (ಮಾದಿಗ) ಕುಲಕ್ಕೆ ಸಂಬಂಧಿಸಿದ ಜನಕುಲವಾಗಿದೆ ಎಂಬುದು ಹಲವು ಇತಿಹಾಸಕಾರರ ಅಭಿಪ್ರಾಯ. ಗಣಪತಿ ಎಂಬ ಕಲ್ಪನೆಯು ಸಹ ಇದೇ ಬುಡಕಟ್ಟಿನದ್ದು. ಹಾಗೆಯೇ ಮಾತಂಗರೇ ಯಾದವರ ಪೂರ್ವಜರು ಎಂಬುದು ನಿರೂಪಿತ ವಿಚಾರವಾಗಿದ್ದು ೬-೭ನೇ ಶತಮಾನದ ನಂತರದಲ್ಲಿ ಉತ್ತರ ಭಾರತವನ್ನಾಳಿದ ಬಹುತೇಕ ರಾಜಮನೆತನಗಳು ಇದೇ ಮೂಲದವಾಗಿವೆ.

ಇನ್ನೂ ದಕ್ಷಿಣ ಭಾರತದಲ್ಲಿ ಈ ವಿಚಾರದಲ್ಲಿ ಹೆಚ್ಚು ಸ್ಪಷ್ಟವಾದ ನಿದರ್ಶನಗಳನ್ನು ನಾವು ಗಮನಿಸಬಹುದು. ಇಲ್ಲಿ ಚಾಲುಕ್ಯರಿಂದ ಹಿಡಿದು ಚೋಳ ಚೇರರವರೆಗೂ ಬಹುತೇಕ ಅರಸೊತ್ತಿಗೆಗಳು ಹೊಲಯ ಆರಂಬಗಾರ ಮೂಲದವರು ಹಾಗೂ ಸ್ಕಂದ ದೇವರ ಆರಾಧಕರೇ ಆಗಿದ್ದಾರೆ. ೧೦-೧೧ನೇ ಶತಮಾನದ ಕಾಲದಲ್ಲಿ ಇದೇ ಕುಲಗಳು ವಲಸೆಯಾದ ಊಳಿಗ ಬೇಸಾಯಗಾರ ಜನಕುಲಗಳೊಂದಿಗೆ ಸಂಕರಗೊಂಡು ರಾಜತಂತ್ರ ಸ್ಥಾನಪಲ್ಲಟಗಳಿಂದ ಸ್ಥಾನಮಾನಗಳಲ್ಲಿ ಬದಲಾವಣೆಗಳಾಗುತ್ತವೆ.

ಇಲ್ಲಿ ಗಣಪತಿ ಹಾಗೂ ಸ್ಕಂದ, ಎಡ ಮತ್ತು ಬಲ, ಪಶುಪಾಲನೆ ಮತ್ತು ಬೇಸಾಯ ಎಲ್ಲವೂ ಸಹ ಎಡಗೈ ಮಾದಿಗರು ಹಾಗೂ ಬಲಗೈ ಹೊಲಯರಿಗೆ ಸಂಬಂಧಿಸಿದ ವಿಚಾರಗಳೇ ಆಗಿದ್ದು, ಶಿವಕ್ಷತ್ರಿಯ ಎಂಬ ಪದಕ್ಕೆ ಅದರ ಕಥಾ ಹಿನ್ನೆಲೆಗೆ ಹಿಂಬು ಕೊಡುವಂತಿದೆ.

ಭರತ ಖಂಡದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಆದಿಮ – ಪ್ರಕೃತಿ ಹಾಗೂ ಪೂರ್ವಜರ ಆರಾಧನೆ > ಆದಿಮ – ಶಾಕ್ತ > ಆದಿಮ ಶಾಕ್ತ - ಆದಿಮ ಶೈವ > ಆದಿಮ ಶಾಕ್ತ - ಆದಿಮ ಜೈನ > ಆದಿಮ ಶಾಕ್ತ - > ಆದಿಮ ಬೌದ್ದ > ಆದಿಮ ಶಾಕ್ತ - ಆದಿಮ ವೈಷ್ಣವಗಳು ಕ್ರಮವಾಗಿ ತಮ್ಮ ಧಾರ್ಮಿಕ ಪಾರುಪತ್ಯವನ್ನು ಸ್ಥಾಪಿಸುತ್ತಾ ತಮ್ಮೊಳಗೇ ಇನ್ನೂ ಹತ್ತು ಹಲವು ಕವಲುಗಳಿಗನ್ನು ಬೆಳೆಸಿಕೊಂಡವು. ಆದರೆ ಇಲ್ಲೆಲ್ಲಾ ಶಾಕ್ತವು ಸಾಮಾನ್ಯವಾಗಿರುವುದನ್ನು ಕಾಣಬಹುದು. ಇದು ಮಾತೃಗಣದವರಾದ ಹೊಲಯ ಮಾದಿಗರು ಆಯಾ ಮತಪಂಥಗಳ ಆದಿಮ ಸ್ಥಿತಿಯ ಮೇಲೆ ತೋರಿದ್ದ ಪ್ರಭಾವದ ಸೂಚಕವೇ ಆಗಿದೆ. ಮೂಲತಃ ಆದಿಮರಾಗಿ ಶಾಕ್ತ ಮಾತೃಗಣದವರಾಗಿದ್ದ ಹೊಲಯ ಮಾದಿಗರು ಆದಿಶೈವರಲ್ಲಿ ಶಿವಕ್ಷತ್ರಿಯರೆನಿಸಿಕೊಳ್ಳುತ್ತಾರೆ. ಬಹುಶಃ ಈ ಕಾಲಕ್ಕೆ ಹೊಲಯ ಮಾದಿಗರು ಆರ್ಯ ಮತೀಯರೊಡನೆ ಮುಖಾಮುಖಿಯಾಗಿ ಸಂಘರ್ಷ ಅಥವಾ  ಸಾಂಸ್ಕೃತಿಕ ಕೂಡುಕೊಳ್ಳುವಿಕೆಯ ಪರಿಸ್ಥಿತಿಯನ್ನು ಎದುರಿಸಿದ್ದರಿಂದಲೋ ಏನೋ ಶಿವಸಂಸ್ಕೃತಿಯ ಅಡಿಯಲ್ಲಿ ಹೊಲಯ ಮಾದಿಗ ಮೂಲದ ಆಳುವ ಜನಕುಲಗಳಿಗೆ ಎಡಭುಜ/ಬಲಭುಜ ಶಿವಕ್ಷತ್ರಿಯರೆಂಬ ಪಟ್ಟ ಸಿಕ್ಕಿದ್ದಾಗಿರಬಹುದು. ಇದಿಷ್ಟೇ ಅಲ್ಲದೇ, ಆದಿಮ ಶಾಕ್ತ – ಆದಿಮ ಜೈನರೊಳಗೆ ಪರಮಭಟ್ಟಾರಕರೆಂದೂ, ಆದಿಮ ಶಾಕ್ತ – ಆದಿಮ ಬೌದ್ದರಲ್ಲಿ ಮಹಾಮಲ್ಲ ಸಾಕಿಯ(ಶಾಕ್ಯ)ರೆಂದು, ಆದಿಮ ಶಾಕ್ತ – ಆದಿಮ ವೈಷ್ಣವದೊಳಗೆ ತಿರುಕುಲ – ಜಾಂಬವ/ಶಂಭು ಕುಲವೆಂದು ಹೊಲಯ ಮಾದಿಗರನ್ನು ಗುರುತಿಸಿ ಸಾಂಸ್ಕೃತಿಕ ಗೌರವವನ್ನು ತೋರಲಾಗಿದೆ.


 

ಆದಿಗುರು ಶ್ರೀ ಶಂಕರಾಚಾರ್ಯರ ಅದ್ವೈತ ಸಿದ್ದಾಂತಕ್ಕೆ ಪರಿಪೂರ್ಣತೆ ಕೊಟ್ಟದ್ದು ಅಲಂಕಾರನೆಂಬ ಹೊಲಯರ ಹುಡುಗ!!!

ಕೇರಳದ “ಪೊಟ್ಟನ್ ತೆಯ್ಯಂ” (ಉತ್ತರ ಕೇರಳದಲ್ಲಿ‌ ನಡೆಯುವ ಒಂದು ದೈವದ ಭೂತಾರಾಧನೆ) ಪ್ರಕಾರ ಶಂಕರರ “ಅದ್ವೈತ” ಸಿದ್ದಾಂತವನ್ನು ಪರಿಪೂರ್ಣಗೊಳಿಸಿ ಕೊಟ್ಟವ ಒಬ್ಬ ಪುಲಯ (ಹೊ...