ಮಹಾರಾಷ್ಟ್ರದ ಹೊಲಯರಾದ 'ಮಹಾರ ಸೈನಿಕರ ಯಶೋಗಾಥೆ'
"ಹೇ ಪೇಶ್ವೆ........
ನಾವೆಲ್ಲರೂ ಒಂದೇ, ನಾವು ಒಂದೇ ನೆಲದವರು, ಒಂದೇ ನೆಲದವರು......
ನಾವು ಒಗ್ಗೂಡಿ ಪರಂಗಿಯವರ ವಿರುದ್ಧ ಹೋರಾಡಬೇಕೆ ಹೊರತು ನಾವು ನಾವೇ ಕಿತ್ತಾಡಬಾರದು.....
ನಮಗೆ ನೀವು ಸಮ ಸಮಾಜವನ್ನು ಕೊಡಿ, ನಾವು ನಿಮಗೆ ಸ್ವತಂತ್ರ ಸಮಾಜವನ್ನು ತಂದು ಕೊಡುತ್ತೇವೆ"
೧೮೧೭-೧೮ ರಲ್ಲಿ ಆರಂಭವಾದ ಮೂರನೇ ಆಂಗ್ಲೊ ಮರಾಠಾ ಯುದ್ಧ ಸರಣಿಯ ಆರಂಭದಲ್ಲಿ ಪೇಶ್ವೆಗಳು ಮತ್ತು ಮಹಾರರು ಒಂದಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಯುದ್ಧದಲ್ಲಿ ಮುನ್ನಡೆಯಲ್ಲಿದ್ದರು.
ಆಗಲೇ ಮಹಾರ್ ಸೈನ್ಯದ ಸೇನಾಧಿಪತಿಯಾಗಿದ್ದ ಸಿಧನಾಕನು ಈ ಯುದ್ಧ ಇಲ್ಲಿಗೇ ನಿಲ್ಲದು ಇದು ಯಾವ ಕ್ಷಣದಲ್ಲಿ ಬೇಕಾದರು ಮುಂದುವರೆಯಬಹುದು ಎಂಬ ಪ್ರಜ್ಞೆಯಲ್ಲಿದ್ದವನೆ, ಆ ಮೇಲಿನ ಸಾಲನ್ನು ಪೇಶ್ವೆಗೆ ಹೇಳುತ್ತಾನೆ.
"ನೀವು ನಮ್ಮೊಡನೆ ಒಗ್ಗೂಡಿದರೂ ಅಷ್ಟೇ, ಒಗ್ಗೂಡದಿದ್ದರೂ ಅಷ್ಟೇ, ನಮ್ಮೊಡನೆ ಕೂಡಿ ದೇಶವನ್ನು ಸ್ವತಂತ್ರಗೊಳಿಸಿದರೂ ಅಷ್ಟೆ, ಸ್ವತಂತ್ರಗೊಳಿಸದಿದ್ದರೂ ಅಷ್ಟೆ! ನಿಮ್ಮನ್ನು ಮಾತ್ರ ಸಮಾನತೆಯಿಂದ ಕಾಣಲು ಸಾಧ್ಯವಿಲ್ಲ. ನಿಮಗೆ ಸಮ ಸಮಾಜ ಸಿಗುವುದಿಲ್ಲ" ಎಂದು ಉತ್ತರಿಸಿದ ಪೇಶ್ವೆ ಇಮ್ಮಡಿ ಬಾಜಿ ರಾವ್!
ಇಂಥ ಅವಮಾನದಿಂದ ಆಕ್ರೋಶಗೊಂಡ ಸಿಧನಾಕನು, ಈ ಯುದ್ಧವನ್ನು 'ಮಹಾರರ ಪ್ರತಿಷ್ಠೆಯ ವಿಷಯ'ವಾಗಿಸಿದ. ತಮ್ಮ ಅವಕಾಶಕ್ಕಾಗಿ ಸಮಯಕ್ಕಾಗಿ ಕಾದು ಕುಳಿತಿತ್ತು ಮಹಾರ್ ಸೈನ್ಯ.
ಅಷ್ಟಕ್ಕು ಈ ಪೇಶ್ವೆಗಳು ಯಾರು ಎಂಬುದರ ಬಗ್ಗೆ ಕಿರು ಪರಿಚಯ ನಿಮಗಿರಲಿ......
ಶಿವಾಜಿಯ ಮರಾಠಾ ಸಾಮ್ರಾಜ್ಯದಲ್ಲಿ ಅಧಿಕಾರ ವರ್ಗದ ಬ್ರಾಹ್ಮಣರು ಇವರು. ಇವರನ್ನೇ 'ಪೇಶ್ವೆ'ಯರು ಎಂದು ಗುರುತಿಸಲಾಗುತಿತ್ತು.
ಮರಾಠಾ ಸಾಮ್ರಾಜ್ಯಕ್ಕೆ ಪರ್ಯಾಯವಾಗಿಯೇ ಪೇಶ್ವೆಯರ ಆಡಳಿತವು ೧೬೭೪ರಲ್ಲಿ ಆರಂಭವಾಯಿತು.
ಈ ಪೇಶ್ವೆಗಳಿಂದ ಶಿವಾಜಿಯ ವಂಶಸ್ಥರಿಗಾದ ಅನ್ಯಾಯ ಅಷ್ಟಿಷ್ಟಲ್ಲ! ಸದ್ಯಕ್ಕೆ ಆ ವಿಷಯ ಈಗ ಬೇಡ. ಅದೆಲ್ಲಾ ಪಕ್ಕಕ್ಕಿರಲಿ. ಮರಾಠರ ಆಳ್ವಿಕೆಯಡಿ, ಶಿವಾಜಿಯ ಕಾಲದಿಂದಿಡಿದು, ಪೇಶ್ವೆಗಳ ಮೊದಲನೆ ಬಾಜಿ ರಾವ್'ನ ಕಾಲದವರೆಗು ಒಂದು ಮಟ್ಟಕ್ಕೆ ಎಲ್ಲವೂ ಸರಿ ಇತ್ತು. ಮಹಾರ್ ಹಾಗು ಇತರೆ ಜನಸಮುದಾಯಗಳು, ಸಾಮ್ರಾಜ್ಯದ ಸೇನೆಯಲ್ಲಿ ಸ್ಥಾನಗಳಿಸಿ ಸಾಮಾನ್ಯರಂತೆ ಜನಜೀವನ ಸಾಗಿಸುತ್ತಿದ್ದವು.
ಶಿವಾಜಿಯ ಕಾಲದಲ್ಲಿ ಮಹಾರ್ ಜನಾಂಗವು ಸಾಧಾರಣ ಸ್ಥಿತಿಯಲ್ಲಿತ್ತು. ಆದರೆ ಇದು ಹೆಚ್ಚು ಕಾಲ ಉಳಿದಿರಲಿಲ್ಲ. ಪೇಶ್ವೆ ಮೊದಲನೆ ಬಾಜಿರಾವ್ ಕಾಲಾನಂತರ ಹದಗೆಡುತ್ತಾ ಹೋಯಿತು. ಮಹಾರ್ ಜನಾಂಗ ಸಮೇತ ಇನ್ನು ಹಲವು ದಲಿತ ಜನಾಂಗಗಳು ಪೇಶ್ವೆಗಳ ದುರಾಡಳಿತಕ್ಕೆ ಒಳಗಾಗಬೇಕಾಯಿತು. ತಮ್ಮ ಸಾಮ್ರಾಜ್ಯದಲ್ಲಿ ವರ್ಣ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆಯನ್ನು ಅಪಾರವಾಗಿಯೇ ಅನುಸರಿಸುತ್ತಾ, ಕೆಳವರ್ಗದವರ ಶೋಷಣೆಯು ಹೆಚ್ಚಿತು. ಬ್ರಾಹ್ಮಣ್ಯ ಮತ್ತು ಬ್ರಾಹ್ಮಣರ ವೈಭವೀಕರಣವು ಬಹಳ ಬಿರುಸಾಗಿಯೇ ನಡೆದಿತ್ತು.
ಬಹುಜನರ ಶೋಷಣೆ ಹೆಚ್ಚಾಗಿತ್ತು. ಇಂಥದರಿಂದಲೇ ಬೇಸತ್ತಿದ ಮಹಾರ್ ಸೈನ್ಯವು ಒಂದು ಒಳ್ಳೆ ಸಮಯಕ್ಕಾಗಿ ಕಾದು ಕುಳಿತಿತ್ತು.
ಇದೇ ಕಾರಣದಿಂದ ಭೀಮ ತೀರದ ಕೋರೆಗಾವ್ ಯುದ್ಧವು ಮಹಾರರಿಗೆ ಬ್ರಿಟೀಷರ ಪರ ಎನ್ನುವುದಕ್ಕಿಂತ "ಮಹಾರರ ಪ್ರತಿಷ್ಠೆ" ಯಾಗಿ ಪರಿಣಮಿಸಿತು.
ಪುನಃ ೧೮೧೭ರ ಕಡೆಯಲ್ಲಿ ಈ ಯುದ್ಧದ ವಿದ್ಯುನ್ಮಾನಗಳು ಗರಿಗೆದರುತ್ತವೆ.
ಆದರೆ ಬ್ರಿಟಿಷರಿಗೆ ಈ ಬಾರಿ ಸ್ವಲ್ಪ ತಲೆನೋವೆ. ಏಕೆಂದರೆ ಬ್ರಿಟೀಷ್ ಸೈನ್ಯವು ತಮ್ಮ ಮಿಕ್ಕ ಸಂಸ್ಥಾನಗಳ ರಕ್ಷಣೆಗೆ ಅಥವ ಯುದ್ಧ ಕಾರ್ಯನಿಮತ್ತ ನಿಂತಿದ್ದವು. ಇನ್ನು ಕೆಲವು ಬಾರಿ ಹೆಚ್ಚೆಚ್ಚು ಯುದ್ಧಗಳಿಂದ ಸೈನ್ಯಗಳ ಸಾಮರ್ಥ್ಯ ಕುಂದು ದಣಿದಿದ್ದವು.
ಬ್ರಿಟೀಷರ ಉಳಿದ ಸಂಸ್ಥಾನಗಳಿಗೂ ಸೈನಿಕರ ಅಗತ್ಯವಿದ್ದುದ್ದರಿಂದ ತಮ್ಮ ಸೈನ್ಯವನ್ನು ಸಿದ್ಧಗೊಳಿಸುವುದರಲ್ಲಿ ಬ್ರಿಟೀಷರು ವಿಫಲರಾಗುತ್ತಾರೆ.
ಆಗಲೇ ಬ್ರಿಟೀಷರು ಮಹಾರ್ ಸೈನ್ಯದ ಸಹಾಯ ಹಸ್ತಕ್ಕೆ ಕೈ ಚಾಚುತ್ತದೆ.
ಇಂಥದ್ದೇ ಸಮಯಾವಕಾಶಕ್ಕಾಗಿ ಕಾದಿದ್ದ ಮಹಾರ್ ಸೈನ್ಯ ಮತ್ತದರ ಸೇನಾಧಿಪತಿ ಸಿಧನಾಕನು ಪುನಃ ಪೇಶ್ವೆಯ ಬಳಿ ಹೋಗಿ ಮೊದಲಿನಂತೆಯೇ "ಹೇ ಪೇಶ್ವೆ, ನಾವೆಲ್ಲರೂ ಒಂದೆ. ನಾವು ಭಾರತೀಯರು. ನಾವು ಒಗ್ಗೂಡಿ ಬ್ರಿಟೀಷರ ವಿರುದ್ಧ ಹೋರಾಡಬೇಕೆ ಹೊರತು ನಾವು ನಾವೇ ಕಿತ್ತಾಡಿಕೊಳ್ಳಬಾರದು. ನೀವು ನಮಗೆ ಸಮಾನತೆಯನ್ನು, ಸಮ ಸಮಾಜವನ್ನು ಕೊಡಿ. ನಾವು ನಿಮಗೆ ಸ್ವತಂತ್ರ್ಯ ಸಮಾಜವನ್ನು ದೊರಕಿಸಿಕೊಡುತ್ತೇವೆ" ಎಂದು ಹೇಳುತ್ತಾನೆ. ಆಗಲೂ ಸಹ ಪೇಶ್ವೆ ಇದನ್ನು ಒಪ್ಪುವುದಿಲ್ಲ!
ಪೇಶ್ವೆಯ ಈ ಭಂಡತನದಿಂದ ಮಹಾರ್ ನೈನ್ಯವು ಮತ್ತಷ್ಟು ದೃಢವಾಯಿತು. ಮಹಾರ್ ಸೈನ್ಯಕ್ಕೆ ತಾವು ಬ್ರಿಟೀಷ್ ಪರ ಹೋರಾಡುತಿದ್ದೇವೆ ಎನ್ನುವುದಕ್ಕಿಂತ "ಶೋಷಕರ ವಿರುದ್ಧ ಹೋರಾಡುತಿದ್ದೇವೆ" ಎಂಬ ಭಾವನೆ ಇತ್ತು. ಮಹಾರ್ ಮತ್ತು ಇತರೆ ದಲಿತ ಸಮುದಾಯಗಳಿಗೆ ಇದು ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದರಿಂದ ಮಹಾರ್ ಸೈನ್ಯವು ಬಹಳಷ್ಟು ಗಟ್ಟಿ ನಿಲುವು ತಾಳಿತು.
ದಿನಾಂಕ ೩೧-೧೨-೧೮೧೭ ರಂದು, ಈಗಿನ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿರೂರು ತಾಲೂಕಿನ ಭೀಮಾ ನದಿಯ ದಂಡೆಯ ಮೇಲಿನ ಕೋರೆಗಾವ್ ಎಂಬ ಗ್ರಾಮದಲ್ಲಿ ಯುದ್ಧ ಏರ್ಪಾಡಾಯಿತು.
ಅಕ್ಷರಶಃ ಅದು "ಮಹಾರ ಸೈನಿಕರ ಶೌರ್ಯತೆಯ ಪ್ರದರ್ಶನದ ಹಬ್ಬ" ವಾಗಿತ್ತು!
೨೦,೦೦೦ ಅಶ್ವದಳ, ೮೦೦೦ ಕಾಲ್ದಳ ಮತ್ತು ಫಿರಂಗಿ ಸಿಡಿಸುವವರನ್ನು ಹೊಂದಿದ್ದ ಪೇಶ್ವೆಗಳ ಸೈನ್ಯ ಮತ್ತು, ೫೦೦ ಮಹಾರ್ ಸೈನಿಕರ ಕಾಲ್ದಳ, ೨೦೦ ಅಶ್ವದಳ, ೨೦ ಗನ್ ಮ್ಯಾನ್'ಗಳನ್ನು ಹೊಂದಿದ್ದ ಮಹಾರ್ ಸೈನಿಕರ ನಡುವೆ ಯುದ್ಧವದು!
ಸನ್ನಿವೇಶವನ್ನು ನೆನೆಸಿಕೊಂಡರೆಯೇ ಒಂದು ಕ್ಷಣ ಮೈ ಅದರುತ್ತದೆ. ಗೆಲುವು ಪೇಶ್ವಗಳದ್ದೇ ಎಂದು ಅಂದುಕೊಳ್ಳುವಂತೆ ಮಾಡುತ್ತದೆ.
ಆದರೆ ನಡೆದದ್ದೇ ಬೇರೆ.
ಸರಿ ಸುಮಾರು ೭೦೦ ಜನಸಂಖ್ಯೆಯ (೫೦೦) ಮಹಾರ್ ಸೈನ್ಯವನ್ನು ಹೊಂದಿದ್ದ ಬ್ರಿಟೀಷ್ ಸೈನ್ಯದ ಸುತ್ತಲೂ, ಎಲ್ಲಾ ದಿಕ್ಕಿನಿಂದಲೂ ಪೇಶ್ವಗಳ ಸೈನ್ಯ ಆವರಿಸುತ್ತಾ ಆಕ್ರಮಣಕ್ಕೆ ಮುಂದಾಯಿತು. ಆದರೆ ಅಲ್ಲಿ ಸುದರ್ಶನ ಚಕ್ರಕ್ಕೆ ಸಿಕ್ಕ ಎದುರಾಳಿಗಳಂತೆ ಮಹಾರರು ಸುತ್ತುವರಿದಿದ್ದ ಪೇಶ್ವಗಳ ಸೈನ್ಯವನ್ನು "ಜೈ ಮಹಾಕಾಲ್” ಎಂಬ ಯುದ್ಧಘೋಷ ಕೂಗುತ್ತಲೇ ಮರ್ಧಿಸಿದರು. ೫೦೦-೭೦೦ ಜನರ ಒಂದು ಸೈನ್ಯದೆದುರು ೨೮,೦೦೦-೩೦,೦೦೦ ಜನರ ಸೈನ್ಯ ಸೋಲುವುದೆಂದರೇನು ???
ಇಂಥಹ ರೋಚಕ ಗೆಲುವೇ ಮಹಾರರ ಶೌರ್ಯತೆಯ ಸಂಕೇತವಾಯಿತು.
ರಾತ್ರಿ ಒಂಬತ್ತರ ಸುಮಾರಿಗೆ ಶುರುವಾಗಿದ ಯುದ್ಧ ಮಾರನೇಯ ದಿನ ಬೆಳಗ್ಗೆ ಒಂಬತ್ತರಷ್ಟರೊಳಗೆ ಮುಗಿದೇ ಹೋಗಿತ್ತು.
ಕೇವಲ ಹನ್ನೆರೆಡು ಗಂಟೆಗಳಲ್ಲಿ ಮಹಾರರು ಪೇಶ್ವೆ ಸಾಮ್ರಾಜ್ಯವನ್ನೇ ಪಥನ ಗೈದಿದ್ದರು.
ಇದರಿಂದ ಕುಗ್ಗಿದ ಉಳಿದ ಪೇಶ್ವೆಯರು ಮತ್ತವರ ಸೈನ್ಯವು ರಣಹೇಡಿಗಳಂತೆ ರಣರಂಗದಿಂದ ಕಾಲ್ಕಿತ್ತರು.
ಬ್ರಿಟೀಷರ ಸಹಾಯದಿಂದ ಮಹಾರರು ಯುದ್ಧಭೂಮಿಯಲ್ಲಿ ಗೆದ್ದರು ಎನ್ನಲು ಸಾಧ್ಯವೇ ಇಲ್ಲ. ಏಕೆಂದರೆ ಮಹಾರರು ಮತ್ತು ಪೇಶ್ವೆಯರು ಒಂದಾಗಿ ಬ್ರಿಟೀಷರ ವಿರುದ್ಧ ಹೋರಾಡಿದ್ದಾಗ ಪೇಶ್ವೆಯರಿಗೇ ಯುದ್ಧದಲ್ಲಿ ಮುನ್ನಡೆಯಾಗಿತ್ತು. ಬ್ರಿಟೀಷರಿಗೆ ಪೇಶ್ವೆಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಯಾವಾಗ ಪೇಶ್ವೆಯರ ಭಂಡತನ ಹೆಚ್ಚೆನಿಸಿತೊ ಅಂದೇ ಮಹಾರರ ಸೈನ್ಯವನ್ನು ಕಳೆದುಕೊಂಡಿತು.
ಶೌರ್ಯಲಕ್ಷ್ಮಿ ಇದ್ದೆಡೆ ವಿಜಯಲಕ್ಷ್ಮಿಯೂ ಇರುತ್ತಾಳೆ ಎಂಬಂತೆ ಮಹಾರರ ಸೈನ್ಯವಿದ್ದೆಡೆಯೆಲ್ಲಾ ಗೆಲುವು ಇರುತಿತ್ತು. ಇದು ಮಹಾರರ ಹಿರಿಮೆ ಗರಿಮೆಗೆ, ಅವರ ಯುದ್ಧ ತಂತ್ರ, ಶೌರ್ಯ ವೀರತ್ವಗಳಿಗೆ ಹಿಡಿದ ಕನ್ನಡಿಯಾಗಿತ್ತು.
ಗೆದ್ದವ ಕ್ಷತ್ರೀಯನಾಗುತ್ತಾನೆ, ಸೋತವ ಗುಲಾಮನಾಗುತ್ತಾನೆ ಎಂಬಂತೆ, ಮಹಾರರ ಈ ಗೆಲುವಿನಿಂದ ಮಹಾರರು ಮತ್ತು ಇತರೇ ಶೋಷಿತ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಚೇತರಿಸುತ್ತದೆ ಮತ್ತು ಪ್ರಗತಿ ಕಾಣುತ್ತದೆ. ಇದೆಲ್ಲಾ ಮುಗಿದ ೭೩ವರ್ಷಗಳ ಅಂತರದಲ್ಲಿ ಇದೇ ಸಮುದಾಯದಲ್ಲಿ ಡಾ|| ಬಿ.ಆರ್ ಅಂಬೇಡ್ಕರರ ಜನನವಾಗುತ್ತದೆ. ಇತಿಹಾಸಕಾರರಿಂದ ಕಡೆಗಣಿಸಲ್ಪಟ್ಟಿದ್ದ ಈ ಐತಿಹಾಸಿಕ ಘಟನೆಯ ಬಗ್ಗೆ ಅಧ್ಯಯಿಸಿ ಅಂಬೇಡ್ಕರರು ನಮಗೆ ಈ ಇತಿಹಾಸವನ್ನು ಉಳಿಸಿಕೊಟ್ಟಿದ್ದಾರೆ.
ಯುದ್ಧದಲ್ಲಿ ವಿಜಯೀಗಳಾಗಿ ವೀರ ಮರಣವನ್ನಪ್ಪಿದ ಸೈನಿಕರ ನೆನಪಿಗಾಗಿ ಕೋರೆಗಾವ್'ನಲ್ಲಿ ೭೫ ಅಡಿ ಎತ್ತರದ ವಿಜಯಸ್ತಂಭವನ್ನು ನಿರ್ಮಿಸಲಾಯಿತು. ಇದು ಪೂರ್ಣಗೊಂಡದ್ದು ೨೬ ಮಾರ್ಚ್ ೧೮೨೧ರಂದು. ಆ ಸ್ತಂಭದ ಮೇಲೆ ಯುದ್ಧದಲ್ಲಿ ವೀರಮರಣವನ್ನಪ್ಪಿದ ೨೨ ಮಹಾರ್ ಸೈನಿಕರ ಹೆಸರೂ ಸಹ ಇದೆ.
ಭೀಮಾ ನದಿ ದಡದ ಈ ವಿಜಯದ ಸಂಕೇತವೇ ಇಂದು ವಿಜಯಸ್ಥಂಭವಾಗಿ ತಲೆ ಎತ್ತಿ ನಿಂತಿದೆ.
ಮಹಾರ್ ಸೈನ್ಯದ ಸಾಹಸವನ್ನು ನೆನೆಯುತ್ತಾ, ಸಮ ಸಮಾಜದ ನಿರೀಕ್ಷಕರು, ಸಮಾನ ಮನಸ್ಕರರ ಮನೆಯಲ್ಲೂ ಸಾಂಕೇತಿಕ ಆಯುಧಪೂಜೆ ನಡೆಯಲಿ.
ನಮ್ಮ ಪೂರ್ವಜರನ್ನು ನೆನೆದು ಸ್ಮರಿಸಲಿ.......
ಜೈ ಮಹಾಕಾಲ್.
ಜೈ ಭೀಮ್