ಹೊಲಯ ಎಂದರೇನು ಗೊತ್ತೆ ?
ಹೊಲಯರೆಂದರೆ ಯಾರು ಗೊತ್ತೆ ?
ಹೊಲಯರೆಂದರೆ ಯಾರು ಗೊತ್ತೆ ?
ಬಹಳಷ್ಟು ಮಂದಿಗೆ ಇದು ತಿಳಿದಿರುವುದಿಲ್ಲ. ಅವರಿವರುಗೆ ಬಿಡಿ, ಸ್ವತಃ ಹೊಲಯರಲ್ಲಿ ಹಲವರಿಗೆ ತಿಳಿದೇ ಇಲ್ಲ ಎನ್ನಬಹುದು. ಪೂರ್ವಾಗ್ರಹ ಪೀಡಿತ ಬಾಯಿಗಳಲ್ಲಿ ಬೈಗುಳದಂತೆ ಕೆಲವು ಕಡೆ ಬಳಕೆಯಾಗುವ ಈ ಪದಕ್ಕಿರುವ ಇತಿಹಾಸ ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ. ಆ ತಿಳುವಳಿಕೆಯ ಕೊರತೆ ಇಂದು, ಈ ಬರಹದ ಮೂಲಕ ನೀಗಲಿದೆ ಎಂದು ಆಶಿಸುತ್ತೇನೆ.
ಕರುನಾಡಿನ ಮೇರೆಯೊಳಗೆ ಹೇಳುವಯದಾದರೆ ಹೊಲಯರು ಆದಿ ಕನ್ನಡಿಗರು. ಪ್ರಾಚೀನ ಕನ್ನಡ ಸಾಹಿತ್ಯ ಕೃತಿಗಳ ಆಧಾರ, ಇಲ್ಲಿ ಹೊಲಯರೆ ಮಾದರು, ಮಾದರೆ ಹೊಲಯರು, ಈ ಎರಡು ಪದಗಳ ನಡುವೆ ಭೇದವಿರಲಿಲ್ಲ. ಕರುನಾಡ ಸೀಮೆ ಎಂದರೆ ಇಡೀ ಡೆಖ್ಖನ್ ಪ್ರಸ್ಥಭೂಮಿಯನ್ನು ಸೂಚಿಸುತ್ತದೆ. ಹೊಲಯರು (ಮಾದಿಗರ ಸಹಿತ) ಆರಂಬಗಾರರು. ಆದಿ ಬೇಸಾಯಗಾರರು. ಹೊಲ ಪದವು ಮೂಲಾಂಶವಾಗಿ ಹೊಲಯ ಪದ ರೂಪುಗೊಂಡಿದೆ. ಹೊಲಕ್ಕೆ, ನೆಲ, ಗದ್ದೆ, ತೋಟ (ತೋಟಿಗಳು), ಪಲ, ಪಸಲು, ಪಲ್ಲ (ಅಳತೆ), ಸೇರು > ಚೇರ > ಕೇರಳ (ಅಳತೆ) ಇತ್ಯಾದಿ ಅರ್ಥಗಳನ್ನು ಹೊಂದಿದೆ. ಬ್ರಾಹ್ಮಣ ನಿಷ್ಪತ್ತಿಯಲ್ಲಿ 'ಹೊಲೆ' ಎಂದು ಹೇಳಲಾಗಿದ್ದು, ಅದು ಮಣ್ಣು, ಕೆಸರು, ಎಂಬ ಅರ್ಥವನ್ನೇ ಕೊಡುವುದಾಗುದೆ.
ಹುಲುಸು ಎಂಬ ಪದ ಸಮೃದ್ಧಿ ಎಂಬ ಅರ್ಥ ಹೊಂದಿದ್ದು, ಇದೇ ಹೊಲಯ ಎಂಬ ಪದಕ್ಕೂ ಮೂಲ ಎನ್ನಲಾಗಿದೆ. ಇದರ ಅರ್ಥ, 'ಬೆಳೆದು ತಿನ್ನುವವರೆ ಹೊಲಯರು' ಎಂದು. ಹೊಲಯರ ಬಗೆಗಿನ ಉಲ್ಲೇಖ ಇರುವ ಅತ್ಯಂತ ಹಳೆಯ ಶಾಸನದಲ್ಲಿಶಾಸನದಲ್ಲಿಯು ಸಹ (ಗವಿಮಠ ಶಾಸನ) ಪುಲುಸರು/ಪುಲಿಸರು ಎಂದೇ ಹೊಲಯಾರಸರನ್ನು ಗುರುತಿಸಿದೆ. ಹುಲುಸು ಎಂಬುದು ಬೆಳೆ- ಹೆಚ್ಚು- ಸಮೃದ್ಧ- ಪಲ ಎಂಬ ಅರ್ಥದಲ್ಲಿಯೇ ಹುಲುಸು ತಿಂದವರೇ ಹೊಲಯರು ಎಂಬ ನಾಣ್ನುಡಿ ಹುಟ್ಟಿಕೊಂಡಂತೆ ಇದೆ. ಇದೇ ನಂತರದ ದಿನಗಳಲ್ಲಿ ತಿರುಚಲ್ಪಟ್ಟಿದೆ ಎಂಬುದಕ್ಕೆ ಬಹಳಷ್ಟು ಸಾಕ್ಷಾಧಾರಗಳಿವೆ. ಕೊಲುವವನೆ ಮಾದಿಗ ಎಂಬ ಸಾಲನ್ನು ಇದೇ ರೀತಿ ಬಿಡಿಸಿದಾಗ, ಕೊಲ- ಕೊಲ್ಲ- ಗೊಲ್ಲ- ಮದಗ- ಯಾದ(ವ)ಗ ಎಂಬ ಅರ್ಥ ಕೊಟ್ಟು, ಆದಿಮ ನೆಲೆ-ಪಶುಪಾಲನೆ (ವಲಸೆಯಲ್ಲದ) ಮೂಲವನ್ನು ತೋರುತ್ತದೆ. ಣ ಮತ್ತು ಳ'ಗಳ ಬದಲಾವಣೆಗಳೊಂದಿಗೆ, ಕೋಣರು ಕೋಳರಾಗಿರಬಹುದು. ಆದರೆ ಇಲ್ಲಿ ಕೋಣರ ಮೂಲ ಆದಿಮರ ಮೂಲದ್ದಾಗಿದ್ದರೆ, ಕೋಲ-ಕೊಲ್ಲರ ಮೂಲ ಅಲೆಮಾರಿ ಪಶುಪಾಲಕ ದ್ರಾವಿಡರ ಮೂಲದ್ದಾಗಿದೆ. ಇಲ್ಲಿ ಅವರು ಸಾಕಿದ ಪ್ರಾಣಿಗಳ ಗುಣಗಳನ್ನು ಗಮನಿಸಿ. ಪಶುಪಾಲನಾ ಪ್ರಧಾನ - ದ್ರಾವಿಡರು ಅಲೆಮಾರಿತನಕ್ಕೆ ಸೂಕ್ತವಾದ ಕುರಿಗಳೊಡನೆ ಗುರುತಿಸಿಕೊಂಡರೆ, ಎಮ್ಮೆ ಹಸಗಳು ನೆಲೆಸುಗ ಆದಿಮ ಬೇಸಾಯ ಪ್ರದಾನ- ನೆಲೆ ಪಶುಪಾಲಕರೊಡನೆ ಎಂದರೆ ಹೊಲಯ ಮಾದಿಗರೊಡನೆ ಗುರುತಿಸಿಕೊಂಡಿದೆ.
ಬೇಸಾಯದ ಮೂಲವನ್ನು ಹೊರತುಪಡಿಸಿ, ಹೊಲಯ ಪದದ ಬಗ್ಗೆ ಇನ್ನಿತರೆ ಹಲವು ವಿವರಣೆಗಳಿವೆ. ಅದರಲ್ಲಿ ನೇಯ್ಕಾರಿಕೆಯುವ ಒಂದು. ಹಗ್ಗ ನೇಯ್ಕಾರಿಕೆ, ಬಟ್ಟೆ ನೇಯ್ಕಾರಿಕೆಗಳು ಸಹ ಹೊಲಿಯ - ಹೊಲಿಯ ಪದಗಳಿಗೆ ಒಂದು ಮೂಲವಿದ್ದಿರಬಹುದಾಗಿದೆ.
ಹುಲುಸು ಎಂಬ ಪದ ಸಮೃದ್ಧಿ ಎಂಬ ಅರ್ಥ ಹೊಂದಿದ್ದು, ಇದೇ ಹೊಲಯ ಎಂಬ ಪದಕ್ಕೂ ಮೂಲ ಎನ್ನಲಾಗಿದೆ. ಇದರ ಅರ್ಥ, 'ಬೆಳೆದು ತಿನ್ನುವವರೆ ಹೊಲಯರು' ಎಂದು. ಹೊಲಯರ ಬಗೆಗಿನ ಉಲ್ಲೇಖ ಇರುವ ಅತ್ಯಂತ ಹಳೆಯ ಶಾಸನದಲ್ಲಿಶಾಸನದಲ್ಲಿಯು ಸಹ (ಗವಿಮಠ ಶಾಸನ) ಪುಲುಸರು/ಪುಲಿಸರು ಎಂದೇ ಹೊಲಯಾರಸರನ್ನು ಗುರುತಿಸಿದೆ. ಹುಲುಸು ಎಂಬುದು ಬೆಳೆ- ಹೆಚ್ಚು- ಸಮೃದ್ಧ- ಪಲ ಎಂಬ ಅರ್ಥದಲ್ಲಿಯೇ ಹುಲುಸು ತಿಂದವರೇ ಹೊಲಯರು ಎಂಬ ನಾಣ್ನುಡಿ ಹುಟ್ಟಿಕೊಂಡಂತೆ ಇದೆ. ಇದೇ ನಂತರದ ದಿನಗಳಲ್ಲಿ ತಿರುಚಲ್ಪಟ್ಟಿದೆ ಎಂಬುದಕ್ಕೆ ಬಹಳಷ್ಟು ಸಾಕ್ಷಾಧಾರಗಳಿವೆ. ಕೊಲುವವನೆ ಮಾದಿಗ ಎಂಬ ಸಾಲನ್ನು ಇದೇ ರೀತಿ ಬಿಡಿಸಿದಾಗ, ಕೊಲ- ಕೊಲ್ಲ- ಗೊಲ್ಲ- ಮದಗ- ಯಾದ(ವ)ಗ ಎಂಬ ಅರ್ಥ ಕೊಟ್ಟು, ಆದಿಮ ನೆಲೆ-ಪಶುಪಾಲನೆ (ವಲಸೆಯಲ್ಲದ) ಮೂಲವನ್ನು ತೋರುತ್ತದೆ. ಣ ಮತ್ತು ಳ'ಗಳ ಬದಲಾವಣೆಗಳೊಂದಿಗೆ, ಕೋಣರು ಕೋಳರಾಗಿರಬಹುದು. ಆದರೆ ಇಲ್ಲಿ ಕೋಣರ ಮೂಲ ಆದಿಮರ ಮೂಲದ್ದಾಗಿದ್ದರೆ, ಕೋಲ-ಕೊಲ್ಲರ ಮೂಲ ಅಲೆಮಾರಿ ಪಶುಪಾಲಕ ದ್ರಾವಿಡರ ಮೂಲದ್ದಾಗಿದೆ. ಇಲ್ಲಿ ಅವರು ಸಾಕಿದ ಪ್ರಾಣಿಗಳ ಗುಣಗಳನ್ನು ಗಮನಿಸಿ. ಪಶುಪಾಲನಾ ಪ್ರಧಾನ - ದ್ರಾವಿಡರು ಅಲೆಮಾರಿತನಕ್ಕೆ ಸೂಕ್ತವಾದ ಕುರಿಗಳೊಡನೆ ಗುರುತಿಸಿಕೊಂಡರೆ, ಎಮ್ಮೆ ಹಸಗಳು ನೆಲೆಸುಗ ಆದಿಮ ಬೇಸಾಯ ಪ್ರದಾನ- ನೆಲೆ ಪಶುಪಾಲಕರೊಡನೆ ಎಂದರೆ ಹೊಲಯ ಮಾದಿಗರೊಡನೆ ಗುರುತಿಸಿಕೊಂಡಿದೆ.
ಬೇಸಾಯದ ಮೂಲವನ್ನು ಹೊರತುಪಡಿಸಿ, ಹೊಲಯ ಪದದ ಬಗ್ಗೆ ಇನ್ನಿತರೆ ಹಲವು ವಿವರಣೆಗಳಿವೆ. ಅದರಲ್ಲಿ ನೇಯ್ಕಾರಿಕೆಯುವ ಒಂದು. ಹಗ್ಗ ನೇಯ್ಕಾರಿಕೆ, ಬಟ್ಟೆ ನೇಯ್ಕಾರಿಕೆಗಳು ಸಹ ಹೊಲಿಯ - ಹೊಲಿಯ ಪದಗಳಿಗೆ ಒಂದು ಮೂಲವಿದ್ದಿರಬಹುದಾಗಿದೆ.
ಹೊಲಯರು ನಿಸ್ಸಂಶಯವಾಗಿ ಒಂದು ಪ್ರಾಚೀನ ಆದಿಮ ಸಮುದಾಯ ಜನವರ್ಗಗಳಲ್ಲಿ ಒಂದು. ಹಲವು ಇತಿಹಾಸಕಾರರು, ಸಂಶೋಧಕರು ಹೇಳುವಂತೆ ಭಾರತದಲ್ಲಿ ಸಂಸ್ಕೃತಕರಣಕ್ಕೆ ಬಲಿಯಾಗದೆ, ತಮ್ಮ ಪ್ರಾಚೀನತೆ, ವೈದಿಕ ಪೂರ್ವ ಸಂಸ್ಕೃತಿ, ನೆಲದ ಸೊಗಡನ್ನು ಉಳಿಸಿಕೊಂಡು ಬಂದಿರುವ ಕೆಲವೇ ಕೆಲವು ಸಮುದಾಯಗಳಲ್ಲೊಂದು.
ಹೊಲಯರು ನಾಗರಿಕತೆಗಳಲ್ಲಿ ಬೇಸಾಯಗಾರರು ಎಂದು ಗುರುತಿಸಿಕೊಂಡಿರುವ ಆರಂಬಗಾರರಾಗಿದ್ದು, ಮೊದಲು ಬೇಸಾಯವನ್ನು ಆರಂಭಿಸಿದ ಪ್ರಾಚೀನ ಜನಾಂಗವಾಗಿದೆ. ಸುಮೇರಿಯನ್, ಮೆಸೊಪಟ್ಯಾಮಿಯ, ಸಿಂಧೂ, ಹರಪ್ಪ ನಾಗರಿಕತೆಗಳಲ್ಲಿ ಹೊಲಯ ಮಾದಿಗರ ಸಾಮುದಾಯಿಕ ಅಸ್ತಿತ್ವದ ಕುರಿತು ಹಲವು ಕುರುಹುಗಳಿವೆ. ಜಾನಪದ ಪುರಾಣದಲ್ಲಂತು ಹೊಲಯ ಮಾದಿಗರೇ ಮನುಕುಲದ ಮೊದಲ ಸಂತತಿ ಎನ್ನಲಾಗಿದೆ. ಇದೇ ಕಾರಣಕ್ಕೆ ಇವರನ್ನು ಆದಿಮರು ಎಂದೂ ಕರೆಯುವುದುಂಟು. ಇದಕ್ಕೆ ಪುಷ್ಟಿ ಕೊಡುವಂತೆ ಹೊಲಯ ಮಾದಿಗರಲ್ಲಿ ವಾನರ ಅರೆವಾನರ ಸ್ಥಿತಿಯ ಪಾರಂಪರಿಕ ದೈವಗಳ (ಹನುಮ, ಜಾಂಭವ, ವರದ, ಬರಮ, ಬೊಮ್ಮ, ಕ{ಗ}ಣಪ, ಕುಣಸಿಂಗ, ಇತ್ಯಾದಿ) ಆರಾಧನೆಯ ಸಂಸ್ಕೃತಿಯನ್ನು ಕಾಣಬಹುದು.
ಕೇರಳ ಪ್ರಾಂತ್ಯದಲ್ಲಿ ಚೇರರ್, ಚೆರುಮಾನ, ಚೇರುಮಕ್ಕಳ್ ಎಂದು, ಮಲಬಾರ್ ಪ್ರಾಂತ್ಯದಲ್ಲಿ ಪುಲಯರೆಂದು, ಕೊಡವ ಸೀಮೆಯಲ್ಲಿ ಕೆಂಬಟ್ಟೆಯರು, ಕುಡಿಯರು, ಮೆಲಯರೆಂದು, ತುಳುನಾಡು ಸೀಮೆಯಲ್ಲಿ ಕೊರಗರು, ಪೊಲಿಯ, ಪರವ, ಮೇರ, ಮೊಗೇರ, ಪೊಲದವರ ಯಾನೆ, ಮುಂಡಾಲ, ನಲಿಕೆಯರೆಂದು, ಕರಾವಳಿ ಸೀಮೆಯಲ್ಲಿ ಕೂಸಾಳ್ವ ಹೊಲಯರೆಂದು, ಕೊಂಕಣ ಸೀಮೆಯಲ್ಲಿ ದೊಣ್ಣೆರ್ ಎಂದು, ಮಹಾರಾಷ್ಟ್ರದಲ್ಲಿ ಮಹಾರಾರೆಂದು, ವಿಧರ್ಭ ಪ್ರಾಂತ್ಯದಲ್ಲಿ ಗಾಯಕ್ವಾಡರೆಂದು, ಗುಜರಾತ್ ಮಧ್ಯಪ್ರದೇಶ, ಉತ್ತರಪ್ರದೇಶ, ಬಂಗಾಳ ಪ್ರಾಂತ್ಯಗಳಲ್ಲಿ ಮಲ್ಲ, ಮಾಳವ, ಹೊಲಾರ್, ಹೊಲೆರ್, ಬಂಡ, ಅಸಾಧಿ, ದುಸಾಧಿಗಳೆಂದು, ಆಂಧ್ರದಲ್ಲಿ ಮಾಲೊಳ್ಳು, ಮಾಲ, ಮಾಳ, ಮಲ್ಲ, ಮಾಳವರೆಂದು, ತೊಂಡೈಮಂಡಲ ಸೀಮೆಯಲ್ಲಿ ಪಲ್ಲರ್, ಪಳ್ಳರ್ ಎಂದು, ತಮಿಳು ಸೀಮೆಯಲ್ಲಿ ಪರಯ್ಯರ್, ಪುಲಯರ್ ಎಂದು, ಕೊಂಗುನಾಡು ಸೀಮೆಯಲ್ಲಿ ಕೊಂಗು ಹೊಲಯರು/ಕೊಂಗು ಪರಯ್ಯರೆಂದು, ವಲ್ಲುವರೆಂದು, ಸಾಂಬವರೆಂದು, ಪುನ್ನಾಡ್ ಸೀಮೆಯಲ್ಲಿ ಚಕ್ರಿಗಳೆಂದು, ಹಳೆ ಮೈಸೂರು ಭಾಗದಲ್ಲಿ ಹೊಲಯರು, ಚಕ್ರಿಗಳು, ತೋಟಿಗಳು, ವಲೇರು ಎಂದು, ಮಲೆನಾಡು ಹಾಗು ಅರೆಮಲ್ನಾಡಿನಲ್ಲಿ ಹೊಲಯರು, ಕುಳವಾಡಿಗಳು, ಮಲೆಯರು, ಕುಡಿಯರು ಎಂದು, ಕರವನಾಡು ಸೀಮೆಯಲ್ಲಿ ಹೊಲಯರೆಂದು, ಛಲವಾದೇರು ಎಂದು, ಕುವಲಾಳ (ಕೋಲಾರ) ಸೀಮೆಯಲ್ಲಿ ಸಲಾದಿವಾಳ್ಲು, ಛಲವಾದು, ಶೆಟ್ಟಿ ಛಲವಾದಿ ಎಂದು, ಉತ್ತರ ಕರ್ನಾಟಕದಲ್ಲಿ ಬ್ಯಾಗರ, ವಾಲೇರ, ಛಲವಾದಿಗಳೆಂದು ಗುರುತಿಸಿಕೊಳ್ಳುವ ಹೊಲಯರು ಭಾರತದ ಬಹುತೇಕ ರಾಜ್ಯಗಳಲ್ಲಿ ಕಾಣಸಿಗುತ್ತಾರೆ. ವೈದಿಕ ಪೂರ್ವ ಧಾರ್ಮಿಕ ವ್ಯವಸ್ಥೆಯ ಧಾತುವಿನೊಂದಿಗೆ, ಮಾತೃದೇವಾರಾಧನೆ (ಶಕ್ತಿ), ಜಾನಪದೀಯ ಆದಿ ಶೈವ, ಜಾನಪದೀಯ ಆದಿ ವೈಷ್ಣವ, ಅನುಸರಿಸುವ ಹೊಲಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಇನ್ನುಳಿದಂತೆ ಜೈನ, ಅಪ್ಪಟ ಬೌದ್ಧ ಹಾಗು ನಿಯೋ ಬೌದ್ಧ, ಇತ್ಯಾದಿ ಭಾರತೀಯ ನೆಲಧರ್ಮಗಳು ಹೊಲಯ ಮಾದಿಗರ ಪರಂಪರೆಯವಾಗಿವೆ.
ತಿರುಳ್ನುಡಿಯಲ್ಲಿ (ಪೂರ್ವ ದ್ರಾವಿಡ) ಪುಲಯ ಎಂಬ ಪದಕ್ಕೆ 'ಪವಿತ್ರವಾದ' ಎಂಬ ಅರ್ಥವಿದೆ. ಇಲ್ಲಿ 'ಪುಲ್' ಧಾತುವಾಗಿದೆ. ಹೊಲಯರನ್ನು ತಿರುಕುಲತ್ತಾರ್ (ತಿರುಕುಲದವರು) ಎಂದ ರಾಮಾನುಜಾಚಾರ್ಯರನ್ನು ನೆನಪಿಸಿಕೊಳ್ಳಿ. ತಿರುಕುಲ ಎಂಬುದಕ್ಕೂ ಸಹ ಪವಿತ್ರ ಕುಲ, ಶ್ರೀಕುಲ, ರಾಜಕುಲ, ಯುವರಾಜಕುಲ, ಎಂಬ ಅರ್ಥಗಳಿವೆ. 'ಪುಲ್' ಎಂಬ ಧಾತುವು ಇಂಡೋ ಆರ್ಯನ್ ನುಡಿವರ್ಗಗಳಲ್ಲಿ ರೂಪಾಂತರಗೊಂಡಾಗ, ಫಲ್, ಫುಲ್, ವಲ್ಲಭ (ದ್ರಾವಿಡದ ಪಲ್ಲವ ಎಂಬುದಕ್ಕೆ ಸಮಾನಾರ್ಥಕವಾದ) ಎಂದಾಗುತ್ತದೆ. ಇಲ್ಲಿ ಸಹ ಪುಲಯನ್/ಹೊಲಯ ಎಂಬುದಕ್ಕೆ ಮಹಾನ್ ಎಂಬ ಅರ್ಥವಿದೆ. ಮರಾಠಿ ಸೀಮೆಯ ಹೊಲಯರು ಮಹಾರರು. ಸಾಮಾನ್ಯವಾಗಿ ಈ ಸೀಮೆಯಲ್ಲಿ 'ಸಾ' ಎಂಬ ಪದ ಗೌರವ ಸೂಚಕವಾಗಿದ್ದು, ಮಹಾರರು ರಾಷ್ಟ್ರಕೂಟ ಅರಸೊತ್ತಿಗೆಯನ್ನು ಆಳುತ್ತಿದ್ದ ಗೌರವಾನ್ವಿತ ಕಾಲದಲ್ಲಿ ಮಹಾರ'ಸಾ' ಎನಿಸಿಕೊಂಡವರೇ ಇರಬೇಕು. ಇಂಡೋ ಆರ್ಯನ್'ನ ಫುಲ್ (ಹಾಗೆಯೆ ಆಂಗ್ಲದ ಫುಲ್) ಎಂಬುದು ಸಮೃದ್ಧ ಎಂಬ ಅರ್ಥ ಹೊಂದಿದೆ. ಪೂರ್ವ ದ್ರಾವಿಡ, ಕನ್ನಡ ಹಾಗು ತುಳುವಿನಲ್ಲಿಯು ಸಹ ಪುಲಿ/ಹೊಲಿ ಎಂಬುದಕ್ಕೆ "ಹೆಚ್ಚಾಗು" ಎಂಬ ಅರ್ಥವಿದೆ.
ಹೊಲಯ ಎಂಬುದಕ್ಕೆ ಕನ್ನಡದಲ್ಲಿ ಹೊಲ ನೆಲ ತೋಟ ಮಾಡುವವ, ಗೇಯುವಬ ಎಂಬ ಅರ್ಥವಿದೆ. ಹೊಲಯರು ಬೇಸಾಯ ಆರಂಭಿಸುದ ಮೊದಲಿಗರು. ಹೊಲಯರು - ನೆಲದ ವಾರಸುದಾರರು ಎಂಬುದರ ಸೂಚಕ ಪದ 'ಹೊಲಯ' ಎಂಬುದೆ 'ಒಡೆಯ' ಎಂಬ ಸವೆದ ರೂಪದ ಧಾತು.
ಇವೆಲ್ಲಕ್ಕೂ ಪುಷ್ಟಿ ಕೊಡುವಂತೆ ಹಲವು ಐತಿಹಾಸಿಕ ಪಾರಂಪರಿಕ ಜಾನಪದೀಯ ಸಾಕ್ಷಾಧಾರಗಳಿವೆ. ಹೊಲಯರ ಅರಸೊತ್ತಿಗೆಗಳು, ಪಾಳಯಪಟ್ಟುಗಳ ಉಲ್ಲೇಖಗಳಿವೆ. ಹಾಗು ೧೭-೧೮ನೆ ಶತಮಾನದಲ್ಲಿ ಬ್ರಿಟಿಷರು ದಾಖಲಿಸಿರುವ ಗೆಜೆಟಿಯರ್‌ಗಳ ಕಾಲದವರೆಗೂ ಹಲವರು ಭೂ ಹಿಡುವಳಿದಾರರಾಗಿದ್ದರು ಎಂಬುದನ್ನು ನಿರೂಪಿಸುತ್ತದೆ.
ತುಳುನಾಡು ಸೀಮೆಯ ಜಾನಪದದಲ್ಲಿಯು ಸಹ, ಸುಗ್ಗಿ ಪದದ ಸಾಲಿನಲ್ಲಿರುವ "ಪೊಲಿಪೊಲಿಪೊಲಿಯೋ" ಎಂಬ ಸಾಲು, ಹಾಗು ಒಳನಾಡಿನ ಕರವನಾಡು ಸೀಮೆ (ಚಿತ್ರದುರ್ಗ - ತುಮಕೂರು - ಅನಂತಪುರ) ಸುಗ್ಗಿ ಪದದ ಸಾಲಿನಲ್ಲಿಯ "ಹೊಲಿಗ್ಯೊ ಹೊಲಿಗ್ಯೊ" ಎಂಬ ಸಾಲುಗಳು ಬೇಸಾಯದ ಅಪ್ಪ ಆದಿ ಹೊಲಯನನ್ನು ಕರೆದು ಆರಾಧಿಸುವ ಸಾಲೆ ಆಗಿದೆ. ಹಲವರು ಈ ಪೊಲಿಪೊಲಿಪೊಲಿಯೋ ಹಾಗು ಹೊಲಿಗ್ಯೊ ಹೊಲಿಗ್ಯೊ ಎಂಬುದು ಬಲಿ ಮಹಾರಾಜನನ್ನು ಕರೆಯುವ ಪರಿ, ಮಹಾಬಲಿಯೇ ಹೊಲಯರ ಮೂಲ ಪುರುಷ ಎನ್ನುತ್ತಾರೆ. ಆದರೆ ಇನ್ನೂ ಕೆಲವರು ಇದನ್ನು ಆಕ್ಷೇಪಿಸಿ, ಹೊಲಯರ ಮೂಲ ಪುರುಷ ಆದಿ ಬೇಸಾಯಗಾರು ಮಹಾಬಲನೆ ಬೇರೆ, ಅಸುರ ರಾಜ ಬಲೀಂದ್ರನೆ ಬೇರೆ ಎಂದು ವಾದಿಸಿರುವುದೂ ಉಂಟು. ಇದನ್ನು ಮತ್ತೊಂದು ಬರಹದಲ್ಲಿ ವಿವರವಾಗಿ ಬರೆಯುವೆ.
ಇವಿಷ್ಟೇ ಅಲ್ಲದೆ ಹೊಳೆದಂಂಡೆಯಲ್ಲಿ ನೆಲೆನಿಂತು ನಾಗರೀಕತೆ ಆರಂಭಿಸುದ ಮೊದಲಿಗರು ಎಂಬ ಅರ್ಥವೂ ಸಹ ಹೊಲಯ ಎಂಬುದಕ್ಕೆ ಇದೆ. ಹೊಳೆದಂಡೆಯ ಫಲವತ್ತಾದ ನೆಲ ಬೇಸಾಯಕ್ಕೆ ಆದಿ ಬರೆದಿರಬಹುದು. ಕೇರಳ ಹಾಗು ಕೊಡವ ಜಾನಪದವು ಸ್ಪಷ್ಟವಾಗಿ ಹಾಗು ನೇರವಾಗಿ, ಬೇಸಾಯವು ಹೊಲತಿ- ಪರತಿ- ಪುಲಚ್ಚಿ (ಹೊಲಯರ ಹೆಂಗಸು)ಯರ ಆವಿಷ್ಕಾರ ಎನ್ನುತ್ತೇವೆ.
ಊರಿದ್ದಲ್ಲಿ ಹೊಲಗೇರಿ, ಹೊಲೆಮಗನೆ ತಲೆಮಗ, ದೀವಣಿಗೆಯಲ್ಲಿ ಹಸವ ಕೆಣಕಬೇಡ ಸುಗ್ಗಿ ಕಾಲದಲ್ಲಿ ಹೊಲಯನ ಕೆಣಕಬೇಡ, ಇತ್ಯಾದಿ ಗಾದೆಗಳು ಹೊಲಯರ ಪ್ರಾಮುಖ್ಯತೆ, ಹೊಲಗೇರಿಗಳ ಮಹತ್ವ, ಹೊಲಯರ ಆದಿ ಬೇಸಾಯದ ಕುರುಹುಗಳನ್ನೇ ತೋರುವವಾಗಿವೆ.
ಒಟ್ಟಾರೆ ಹೊಲಯ ಎಂಬ ಪದ, ಆದಿ - ನೀರು (ಹೊಳೆ) - ನೆಲ (ಬೇಸಾಯ)ದೊಂದಿಗೆ ಬೆಸೆದುಕೊಂಡಿರುವುದು ಸ್ಪಷ್ಟವಾಗಿ ಕಾಣಬಹುದು.
'ಹೊಲಯ' ಎಂಬುದಕ್ಕೆ ಅಂತರಾಷ್ಟ್ರೀಯ ವ್ಯಾಖ್ಯಾನವೂ ಇದ್ದು ಅದರ ಅರ್ಥ ಎಡೆ ಪೂಜೆಯ ಪ್ರಾಧಾನ್ಯತೆ ಎಂಬುದಾಗಿದೆ. ಜೊತೆಗೆ ಸತ್ತ ಹಿರಿಯರ ಆರಾಧನೆ, ಪ್ರಕೃತಿ ಆರಾಧನೆ, ಆಕಾರ ನಿರಾಕಾರ ಮೂರ್ತಿ ಆರಾಧನೆ, (Worshopping through Food Offerings - Nature & Ancestral Worship - Paganism) ಎಂಬ ಅರ್ಥ ನೀಡುತ್ತದೆ. ಆಸ್ಟ್ರೇಲಿಯಾ, ಆಫ್ರಿಕಾದ ಕೆಲವು ಬುಡಕಟ್ಟು ಜನಾಂಗಗಳು ಇದನ್ನು ಈಗಲೂ ಆಚರಿಸುತ್ತಿದ್ದು ಅದನ್ನು ಹೊಲಯ ಪದ್ದತಿ ಎಂದು ಕರೆಯುತ್ತಾರೆ. ಅಮೆರಿಕಾದ ಪ್ರಾಚೀನ ರುದ್ರಗಣ (Red Indians) ಸಹ, ಇದೇ ಹೊಲಯ ಸಂಸ್ಕೃತಿಯವರಾಗಿದ್ದವು.
ತೆಂಕಣಾಚಾರ್ಯರು ಎನಿಸಿಕೊಳ್ಳುವ ಹೊಲಯರ ವಾಸ ಗ್ರಾಮಗಳ ತೆಂಕಣ ದಿಕ್ಕಿನಲ್ಲಿ. ಇದೇ ಊರಿನ ಆರಂಭ. ಹೊಲಗೇರಿ ಇಲ್ಲದ ಊರಿಗೆ ಆಯವಿಲ್ಲ. ಹೊಲಗೇರಿ ಇಲ್ಲದೇ ಗ್ರಾಮ ನಿರ್ಮಿಸುವ ಪದ್ದತಿ ದ್ರಾವಿಡ ಸಂಸ್ಕೃತಿಯಲ್ಲಿಯೇ ಇಲ್ಲ. ಹೊಲಗೇರಿಯೇ ಆಧಾರ ಊರು - ಹಳ್ಳಿಗಳ ನಿರ್ಮಾಣಕ್ಕೆ. ಹೊಲಗೇರಿಗಳು ಗ್ರಾಮಗಳ Motherboardಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು.
ಹೊಲಯರ ಕುಲ ಕಸುಬುಗಳು.
ಹೊಲಯರು ಆರಂಭದಲ್ಲಿ "Rearing"ನಲ್ಲಿ (ಗೆಡ್ಡ ಗೆಣಸು ಹಣ್ಣು ಹಂಪಲು ಕೂಡಿಸುವುದು, ಹುಡುಕಾಡಿ ಆಯ್ದು ಕೂಡಿಡುವುದು) ತೊಡಗಿದವರು. ಇದು ಕೇವಲ ಹೊಲಯ ಮಾದಿಗರ ಆದಿಯಷ್ಟೇ ಅಲ್ಲ, ಇಡೀ ಮನುಕುಲದ ಆದಿಯೇ ಆಗಿದೆ. ನಂತರ ಇದೇ ಹುಡುಕಾಟದ ಕೂಡಿಡುವಿಕೆಯೊಂದಿಗೆ ಬೇಟೆಯನ್ನು ಮೈಗೂಡಿಸಿಕೊಂಡರು. ಇಲ್ಲಿಂದ ಒಂದು ಗುಂಪು ನೇರವಾಗಿ ಬೇಸಾಯ ಪ್ರಧಾನ - ಪಶುಪಾಲನೆಯಲ್ಲಿ ತೊಡಗಿ ಒಂದೆಡೆ ನೆಲೆಯಾಗುತ್ತಾರೆ. ಮತ್ತೊಂದು ಗುಂಪು ಪಶುಪಾಲನ ಪ್ರಧಾನ ಸಂಸ್ಕೃತಿಯನ್ನು ಅನುಸರಿಸಿ ಅಲೆಮಾರಿಗಳಾಗುತ್ತಾರೆ. ಇದೇ ರೀತಿ ದ್ರಾವಿಡರಲ್ಲು ಎರಡು ವರ್ಗವಿದ್ದು, ಹೊಲಯ ಮಾದಿಗರು ಬೇಸಾಯ ಪ್ರಧಾನ - ಪಶುಪಾಲನೆಯಲ್ಲಿ ತೊಡಗಿ ನೆಲೆಯಾದರೆ, ಪಶುಪಾಲನ ಸಂಸ್ಕೃತಿಯ ಕುರುಬರು ವಲಸೆ ಗುಣದೊಂದಿಗೆ ತಮ್ಮ ಹಿಂಡಿಗಳೊಡನೆ ಊರೂರು ಅಲೆಯುವ ಅಲೆಮಾರಿಗಳಾಗುತ್ತಾರೆ. ಒಕ್ಕಲಿಗರು ಸಹ ಪಶುಪಾಲನ ಪ್ರಧಾನ ಸಂಸ್ಕೃತಿಯ ಕುರುಬರ ಮೂಲದವರೇ ಆಗಿದ್ದು, ಆದಿ ಬೇಸಾಯಗಾರರಾದ ಹೊಲಯ ಮಾದಿಗರೊಡನೆ ಬೆರೆತ ಕಾರಣ ಹೊಲಗೇಯುವವರಾಗಿ ಬೇಸಾಯಗಾರರಾಗಿ ಕಸುಬಾಂತರಗೊಂಡಿದ್ದಾರೆ. ಸಂಸ್ಕೃತಿಯಾಂತರವೂ ಆಗಿದ್ದಾರೆ.
ಹೀಗೆ, ಹುಡುಕಾಟ-ಕೂಡಿಡುವೆಕೆ, ಬೇಟೆ, ಹೊಲಗೇಯ್ಮೆ (ಬೇಸಾಯ/ಆರಂಭ) ಹಾಗು ನೆಲೆ ಪಶುಪಾಲನೆಯು ಹೊಲಯರ ಪ್ರಧಾನ ಕುಲ ಕಸುಬುಗಳಾಗಿವೆ. ಇದರ ಜೊತೆಗೆ ನೇಯ್ಕಾರಿಕೆ (ದೇವಾಂಗ) ಚಮ್ಮಾರಿಕೆ (ಮಾದಾರ), ಮರಗೆಲಸ (ಬಡಿಗೇರ), ಕಲ್ಲುಕುಟಿಗ (ತೆಂಕಣಾಚಾರ/ಜಕ್ಕಣಾಚಾರ), ಉಪ್ಪು-ಸುಣ್ಣ ಕಟ್ಟುವುದು (ಕೂಸಾಳ್ವರು - ಉಪ್ಪಾರ), ಮೀನುಗಾರಿಕೆ (ಮೊಗೇರ, ಮೇರ, ಬೆಸ್ತರು), ಪೂಜಾರಿಕೆ, ತಳವಾರಿಕೆ, ಕುಳವಾಡಿಕೆ, ನೀರುಗಂಟಿ - ತೋಟಿ ವೃತ್ತಿಗಳು ಹೊಲಯರ ಮೂಲದ ಕುಲಕಸುಬುಗಳೆ ಆಗಿವೆ.
ಅಂಬೇಡ್ಕರರ ಅಧ್ಯಯನದ ಪ್ರಕಾರ ಮಹಾರರು (ಮಹಾರಾಷ್ಟ್ರದ ಹೊಲಯರು) ನಾಗವಂಶಿಗಳು. ಹಿಂದೆ ರಾಜರಾಗಿಯು ಯೋಧಕುಲಗಳಾಗಿಯು ಇದ್ದವರು. ತ್ರಿಗುಣ ವರ್ಣ ಪದ್ದತಿಯಲ್ಲಿ ಕ್ಷತ್ರಿಯ ಸ್ಥಾನ ಅಲಂಕರಿಸಿದವರು. ಆಗ ಹೊಲಯರು ಮಾದಿಗರು ಆದಿ(ಸೂರ್ಯ)ವಂಶ ಕ್ಷತ್ರಿಯರೆನಿಸಿಕೊಂಡಿದ್ದರು ಎಂದು ಹೇಳುತ್ತಾರೆ.
ಹೊಲಯ ಮಾದಿಗರು ವೈದಿಕ ಪೂರ್ವ ಸಂಸ್ಕೃತಿಯವರಾಗಿದ್ದು, ಮಾತೃಪ್ರಧಾನ ಪರಂಪರೆಯವರಾಗಿದ್ದಾರೆ. ಹೊಲಯರು ಪ್ರಕೃತಿ ಆರಾಧಕರಾಗಿದ್ದು ಭೂಮಿ, ಸೂರ್ಯ, ಚಂದ್ರ, ಗಾಳಿ - ಬೆಂಕಿ - ನೀರು (ಸ್ತ್ರೀ ರೂಪ) ಪಂಚಭೂತಗಳನ್ನು ಆರಾಧಿಸುವ ಸಂಸ್ಕೃತಿಯ ಹೆಗ್ಗುರುತಿನವರು. ಕಳೆ (ಗರಿಕೆಯನ್ನು) ನಿಗ್ರಹಿಸಿ, ನೆಲದ ಪಲವತ್ತತೆಯನ್ನು ಹೆಚ್ಚಿಸುವ ನಾಗಗಳು ಹೊಟ್ಟೆ ತುಂಬಿಸುವ ದೈವಗಳಾಗಿ ಆರಾಧಿಸಿ, ಗೊಬ್ಬರಗುಡ್ಡೆ ಏರುವಂತೆ ಪಲದ ರಾಸಿಯೂ ಏರಲಿ ಎಂದ ಕಣ-ಪತಿಯು ಸಹ ಹೊಲಯ ಮಾದಿಗರ ಪರಂಪರೆಯವನೆ ಆಗಿದ್ದಾನೆ.
ಹೊಲಯರ ಸಂಸ್ಕೃತಿ ಪರಂಪರೆಯು ಮಾತೃಪ್ರಧಾನವಾಗಿದ್ದು, ಅದರ ಕೆಳಗೆ ರಾಜನಿರುತ್ತಾನೆ. ಇಲ್ಲಿ ರಾಜ ಬೇರೆಯಲ್ಲ ಗುರು(ಧರ್ಮ) ಬೇರೆಯಲ್ಲ. ಅರ್ಥವಾಗುವಂತೆ ಹೇಳಬೇಕಾದರೆ ಹೊಲಯರಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯ ವರ್ಣ ಎರಡೂ ಒಂದೇ, ಹಾಗು ಒಬ್ಬರೇ ಈ ಎರಡೂ ಪಾಂಡಿತ್ಯವನ್ನು ಕಲಿಯಬೇಕು. ಇದೇ ಪದ್ಧತಿ (Priestly King) ಹೊಲಯರ ಮೂಲದ್ದಾಗಿದ್ದು, ಸುಮೇರಿಯನ್, ಸಿಂಧೂ, ಮೆಸೊಪಟ್ಯಾಮಿಯ, ಹರಪ್ಪ ನಾಗರಿಕತೆಗಳಲ್ಲಿಯೂ ಕಾಣಬಹುದಾಗಿದೆ.
ಹೊಲಯರು ಕೇವಲ ಭಾರತಕ್ಕಷ್ಟೇ ಅಲ್ಲದೆ, ಇಡೀ ವಿಶ್ವದಲ್ಲೇ ಒಂದು ಪ್ರಾಚೀನ ಜನಸಮುದಾಯವಾಗಿದೆ. ಕರ್ನಾಟಕ ಮಟ್ಟಿಗೆ ಹೇಳುವುದಾದರೆ ದೊರೆತಿರುವ ಆಧಾರಗಳಲ್ಲಿ, ಹೊಲಯರ ಬಗೆಗಿನ ಐತಿಹಾಸಿಕ ಉಲ್ಲೇಖಗಳಲ್ಲಿ ಅತ್ಯಂತ ಹಳೆಯದು ಎಂದು ಇರುವುದು ಕ್ರಿ.ಪೂ.೨೦೦ನೆಯ ಕೊಪ್ಪಳದ ಗವಿಮಠದ ಅಶೋಕನ ಶಾಸನ. ಇಲ್ಲಿ ಹೊಲಯಾರಸರ ಬಗ್ಗೆ ಉಲ್ಲೇಖವಿದ್ದು, ಅಶೋಕನ ಆಜ್ಞೆ ಮೇರೆಗೆ ಆತನ ಕೈಕೆಳಗಿನ ಸಾಮಂತರಾಗಿದ್ದ ಹೊಲಯಾರಸರು ಬೌದ್ಧ ಮತವನ್ನು ಆಸ್ಥಾನ ಮತವಾಗಿಸಿಕೊಂಡದ್ದುದರ ಬಗ್ಗೆ ಬರೆಯಲಾಗಿದೆ.
ಇದರ ನಂತರ ಕನ್ನಡ ಮೊದಲ ಶಾಸನ ಎನಿಸಿಕೊಳ್ಳುವ ಹಲ್ಮಿಡಿ ಶಾಸನದಲ್ಲಿ ಹೊಲಯರ ಒಳಜಾತಿಯಾದ ಕುಳವಾಡಿಗಳ ಬಗ್ಗೆ, ಹೊಲಯರ ಒಂದು ಕುಲವಾದ ಹಾಗು ಹೊಲಯರ ದೈವವಾದ 'ಬಟರಿ'ಯ ಉಲ್ಲೇಖ ಹಾಗು ಪುನ್ನಾಡ್ (ಹಳೆ ಮೈಸೂರಿನ ತೆಂಕಣ ಭಾಗ) ಪ್ರಾಂತ್ಯದ ಹೊಲಯ ಅರಸರಾದ ಕೆಲ್ಲ ಮಾ(ಮಹಾ)ಕೆಲ್ಲ ಅರಸರ ಉಲ್ಲೇಖವಾಗಿದೆ. ಕದಂಬ, ಸಾಳುವ, ಚಾಲುಕ್ಯ, ಚೋಳರ ಶಾಸನಗಳಲ್ಲಿ, ಹೊಲಯರ ಕುಲ ಹಾಗು ದೈವಗಳಾದ ಹಾರಿತಿ (ಹರತಿ), ಕರವ, ಇತ್ಯಾದಿಗಳ ಉಲ್ಲೇಖಗಳಿವೆ.
ಇನ್ನೂ ಹಲವು ಶಾಸನಗಳಲ್ಲಿ, ಪ್ರಾಚೀನ ಕೃತಿಗಳಲ್ಲಿ, ಪೊಲ, ಪೊಲಯ, ಹೊಲಬು, ಹೊಲಬಿ (ಹೊಲತಿ), ಪುಲಯ, ಪುಲ್, ಇತ್ಯಾದಿ ಪದಗಳು ಯಥೇಚ್ಛವಾಗಿ ಬಳಕೆಯಾಗಿದೆ. ಹಲವು ಕಡೆ ಉತ್ತಮ ಅರ್ಥದಲ್ಲಿ,
ಇನ್ನು ಕೆಲವು ಕಡೆ ಕೀಳಾರ್ಥದಲ್ಲಿ (೧೨ನೆ ಶತಮಾನದ ನಂತರದವು ಎನ್ನಲಾದ ಕೃತಿಗಳಲ್ಲಿ) ಬಳಕೆಯಾಗಿದೆ. ನಯಸೇನನ ಧರ್ಮಾಮೃತ ಕೃತಿಯು "ಹೊಲಯರು ಶುದ್ಧ ಆಚಾರದವರು, ಶುದ್ಧಾಚಾರ‌್ಯರು, ಲೋಕವು ಅವರನ್ನು ಕೊಂಡಾಡುತ್ತಿತ್ತು" ಎಂದು ಬರೆದಿರುವುದ ಗಮನಿಸಬೇಕು. ಶಿವಕೋಟಾಚಾರ್ಯರ ವಡ್ಡಾರಾಧನೆಯನ್ನು ಬೇಕಾದರೆ ಹೊಲಯ ಮಾದಿಗರ ಕಥಾನಕ ಎನ್ನಬಹುದು, ಆ ಮಟ್ಟಿಗೆ ಅಲ್ಲಿ ಹೊಲಯ ಮಾದಿಗ ಪದಗಳ ಬಳಕೆಯಾಗಿದೆ. ಕನ್ನಡಿಗರ ಗುಣ ನಡತೆಗಳನ್ನು ಹಾಡಿ ಹೊಗಳಿ ಬರೆದ ಚಾಲುಕ್ಯರ ಸಾಮಂತನಾಗಿದ್ದ, ಕವಿಯೂ ಆಗಿದ್ದ, ಲಿಪಿಕಾರನೂ ಆಗಿದ್ದ ಕಪ್ಪೆ ಹೊಲಯರ ಅರಬಟನನ್ನು ನಾವು ಈ ಸಮಯದಲ್ಲಿ ನೆನೆಯಲೇ ಬೇಕು. ಕವಿರಾಜಮಾರ್ಗ ಹಾಡಿ ಹೊಗಳಿದ ಕಾವ್ಯಪ್ರಯೋಗದ ಪರಿಣತಿ ಜಾನಪದದ ಬಹುಭಾಗವಾದ ಹೊಲಯ ಮಾದಿಗರನ್ನು ಒಳಗೊಂಡ ಜಾನಪದ ಸಿರಿಯನ್ನು ಹಾಡಿ ಹೊಗಳಿದ ಕೃತಿಯೇ ಆಗಿದೆ.
ಇನ್ನು ಕೆಲವು ಕಡೆ ಕೀಳಾರ್ಥದಲ್ಲಿ (೧೨ನೆ ಶತಮಾನದ ನಂತರದವು ಎನ್ನಲಾದ ಕೃತಿಗಳಲ್ಲಿ) ಬಳಕೆಯಾಗಿದೆ. ನಯಸೇನನ ಧರ್ಮಾಮೃತ ಕೃತಿಯು "ಹೊಲಯರು ಶುದ್ಧ ಆಚಾರದವರು, ಶುದ್ಧಾಚಾರ‌್ಯರು, ಲೋಕವು ಅವರನ್ನು ಕೊಂಡಾಡುತ್ತಿತ್ತು" ಎಂದು ಬರೆದಿರುವುದ ಗಮನಿಸಬೇಕು. ಶಿವಕೋಟಾಚಾರ್ಯರ ವಡ್ಡಾರಾಧನೆಯನ್ನು ಬೇಕಾದರೆ ಹೊಲಯ ಮಾದಿಗರ ಕಥಾನಕ ಎನ್ನಬಹುದು, ಆ ಮಟ್ಟಿಗೆ ಅಲ್ಲಿ ಹೊಲಯ ಮಾದಿಗ ಪದಗಳ ಬಳಕೆಯಾಗಿದೆ. ಕನ್ನಡಿಗರ ಗುಣ ನಡತೆಗಳನ್ನು ಹಾಡಿ ಹೊಗಳಿ ಬರೆದ ಚಾಲುಕ್ಯರ ಸಾಮಂತನಾಗಿದ್ದ, ಕವಿಯೂ ಆಗಿದ್ದ, ಲಿಪಿಕಾರನೂ ಆಗಿದ್ದ ಕಪ್ಪೆ ಹೊಲಯರ ಅರಬಟನನ್ನು ನಾವು ಈ ಸಮಯದಲ್ಲಿ ನೆನೆಯಲೇ ಬೇಕು. ಕವಿರಾಜಮಾರ್ಗ ಹಾಡಿ ಹೊಗಳಿದ ಕಾವ್ಯಪ್ರಯೋಗದ ಪರಿಣತಿ ಜಾನಪದದ ಬಹುಭಾಗವಾದ ಹೊಲಯ ಮಾದಿಗರನ್ನು ಒಳಗೊಂಡ ಜಾನಪದ ಸಿರಿಯನ್ನು ಹಾಡಿ ಹೊಗಳಿದ ಕೃತಿಯೇ ಆಗಿದೆ.
ಹೊಲಯರ ಬಳಿಯಿರುವ ಛಲವಾದಿ ಗಂಟೆ ಬಟ್ಟಲು ಹಾಗು ಕುಳವಾಡಿ ಕೋಲು (ಕುಳವಾಡಿ ದಂಡ- ರಾಜದಂಡ) ಇವು ಸಹ ಹೊಲಯರ ಪರಂಪರಾಗತ ರಾಜಕುಲದ ಬಗ್ಗೆ ಉಳಿದಿರುವ ಕುರುಹುಗಳೆ ಆಗಿವೆ.
ಬಹಳಷ್ಟು ಹಳೆಯ ಶಾಸನಗಳಲ್ಲಿ ಹೊಲಯ/ಹೊಲತಿ/ಹೊಲಬಿ/ಹೊಲಬು ಎಂಬುದು ಮಾನ-ಮಹಾನ ಎಂಬ ಅರ್ಥದಲ್ಲಿಯೇ ಬಳಕೆಯಾಗಿದೆ. ಈಗಲೂ ಸಹ ಹಳೆ ಮೈಸೂರು ಭಾಗದ ಹೊಲಯರು ಆಡುವ ಆಡುನುಡಿಯಲ್ಲಿ "ದೊಡ್ಡ ಹೊಲಯ" ಎಂದರೆ ಗೌರವಸೂಚಕ ಭಾವಪದವೆ ಆಗಿದೆ. ಅದರ ಅರ್ಥ "ದೊಡ್ಡ ಮಾನವಂತ" ಎಂದು. ಹೊಲಗೇರಿಯೂ ಸಹ ಬಹಳಷ್ಟು ಶಾಸನಗಳಲ್ಲಿ ಉಲ್ಲೇಖ ಕಂಡಿದ್ದು, ಚಾಲುಕ್ಯರ ಹಳೆಯ ರಾಜಧಾನಿ ಲಕ್ಷ್ಮೇಶ್ವರ ಎಂಬ ಪಟ್ಟಣಕ್ಕೆ ಪೊಲಗೇರಿ - ಪುಲಗೇರಿ ಎಂಬ ಹೆಸರಿದ್ದದ್ದು ಈಗ ಇತಿಹಾಸ.
ಕ್ರಿ.ಪೂ. ೨-೩ನೆ ಶತಮಾನದಿಂದ ಹಿಡಿದು ೧೩-೧೪ನೇ ಶತಮಾನಗಳವರೆಗು ಹೊಲಯರು ಹಾಗು ಮಾದಿಗರು, ಹಾಗು ಅವರಿಗೆ ಸಂಬಂಧಿಸಿದ ಕುಲಗಳು, ದೈವಗಳು, ಬಹಳಷ್ಟು ಕಡೆ ಶಾಸನಗಳಲ್ಲಿ, ಕೃತಿಗಳಲ್ಲಿ, ಅದರಲ್ಲೂ ಸಹ ರಣರಂಗದ ವೀರಗಲ್ಲು, ತುರಕಾಳಗದ ವೀರಗಲ್ಲುಗಳಲ್ಲಿ ಬಹುತೇಕ ಭಾಗ ಹೊಲಯ ಮಾದಿಗರಿಗೆ ಸಂಬಂಧಿಸಿದ್ದವೇ ಆಗಿವೆ.
ಹೊಲಯರ ಅರಸೊತ್ತಿಗೆಗಳಲ್ಲಿ ಪ್ರಮುಖವಾದವು, ಹಾಗು ಸದ್ಯಕ್ಕೆ ಸಂಶೋಧನೆಗೆ ಒಳಪಟ್ಟು ನಿರೂಪಿಸಲ್ಪಟ್ಟವೆಂದರೆ ಅವು, ಚೇರರು, ಬಾ(ವಾ)ಣರು, ಪಲ್ಲವರು, ಬಂಗಾಳ ಸೀಮೆಯ ಕರ್ಣಾಟಕುಲ ಕ್ಷತ್ರಿಯರು, ಹಾರಿತಿ ಕುಲಸ್ಥರಾದ ಚುಟುಗಳು, ಕದಂಬರು ಹಾಗು ಬಾದಾಮಿ-ವೆಂಗಿ ಚಾಲುಕ್ಯರು, ಕರವ ಕುಲಸ್ಥರಾದ ಕಲ್ಯಾಣಿ ಚಾಲುಕ್ಯರು, ಹೊಯ್ಸಳರು (ವಿಷ್ಣುವರ್ಧನನ ವರೆಗೆ), ತುಳುನಾಡು ಸೀಮೆಯ ಆದಿ ಆಲುಪರು, ರಾಣ್ಯರು ಹಾಗು ಸಾಳುವರು, ೧೩-೧೪ನೆ ಶತಮಾನದವರೆಗಿನ ಗಂಗರು ಹಾಗು ಪಾಂಡ್ಯರು, ರಾಷ್ಟ್ರಕೂಟರು, ಉತ್ತರದ ಮಗಧ ಸಾಮ್ರಾಜ್ಯದ ಮೌರ್ಯರು, ಮಾಳವರು, ಚಂಡೇಲರು, ಸೋಲಂಕಿಗಳು, ಪರಾಮಾರರು, ಇತ್ಯಾದಿಯರು ಪ್ರಮುಖರು. ಇವರ ಕಾಲದಲ್ಲಿ ರಚಿತವಾದ ಶಾಸನ ಕೃತಿಗಳಲ್ಲಿ ಉಲ್ಲೇಖವಾಗಿರುವ ಇವರ ಕುಲಗಳು, ದೈವಗಳು, ಪರಂಪರೆ ಹಾಗು ಆಚರಣೆಗಳೆಲ್ಲವೂ ಈಗಲೂ ಹೊಲಯರಲ್ಲಿವೆ. ಹಾಗು ಆ ರಾಜರ ವಂಶಸ್ಥರು ಎಂದು ಕರೆದುಕೊಳ್ಳುವ ಕೆಲವು ಮನೆತನಗಳು ಈಗಲೂ ಇವೆ.
ಇತಿಹಾಸ ವಿದ್ವಾಂಸರು ಅಭಿಪ್ರಾಯ ಪಡುವಂತೆ, ಭಾರತವನ್ನು ಆಳಿದ ಬಹುತೇಕ ಅರಸೊತ್ತಿಗೆಗಳಯ ದ್ವಿಜರಲ್ಲದ ಗೊತ್ರ ಸಲ್ಲದ ಕುಲಕಾರ ಬುಡಕಟ್ಟು ಶೂದ್ರರದ್ದಾಗಿದ್ದವು. ಆದರೆ ನಂತರದಲ್ಲಿ ಅವರನ್ನು ವೈಭವೀಕರಿಸಿ ಸಾಹಿತ್ಯವನ್ನು ರಚಿಸಿರುವ ಬ್ರಾಹ್ಮಣ್ಯದ ಪಂಡಿತವುಳ್ಳ ಹೊಗಳುಭಟರು, ರಾಜರನ್ನು, ಅವನ ಕುಲವನ್ನು (ಗೋತ್ರವಾಗಿಸಿ), ವಂಶವನ್ನು ಹಾಡಿ ಹೊಗಳಿ ವೈದಿಕ ನೆಲೆಗಟ್ಟಿನಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಇರಿಸಿ, ಅದನ್ನೇ ಇತಿಹಾಸ ಎಂದು ದಾಖಲಿಸುವ ಪರಿಪಾಠವಿತ್ತು ಅಂದು.
ಹೀಗೆ ಹೊಲಯ ಪದದ ಅರ್ಥ, ಹೊಲಯರ ಇತಿಹಾಸ, ಸಂಸ್ಕೃತಿ, ಪರಂಪರೆ, ಆಚರಣೆಗಳು ಈಗ ಮಂಕಾದಂತೆ ಇದ್ದರೂ ಸಹ ತನ್ನ ವಿರಾಟ ಸ್ವರೂಪದ ಅಸ್ತಿತ್ವವನ್ನು ಕಳೆದುಕೊಂಡಿಲ್ಲ.
ಹೊಲಯರ ಧರ್ಮ, ಶೈಲಿ, ಆಚಾರ, ಆಹಾರ ಸಂಸ್ಕೃತಿ, ಹಾಗು ಹೊಲಯರ ಬಲೀಂದ್ರ ಮೂಲ, ಪುಲಸ್ತ್ಯ ಮೂಲ, ರುದ್ರ ಮೂಲ, ಚಲದಂಕ ಮೂಲ, ಹನುಮ ಜಾಂಬವ ಮೂಲ, ಶಾಕ್ತ ಮೂಲ, ಸಾಂಖ್ಯ ಮೂಲ, ಇತ್ಯಾದಿಗಳ ಬಗ್ಗೆ, ಹೊಲಯರ ಇತಿಹಾಸದ ಮತ್ತಷ್ಟು ವಿಷಯಗಳ ಬಗ್ಗೆ, ಹಾಗು ಹೊಲಯರಿಗೆ ಉಪಯೋಗ ಆಗುವಂತಹ ಸುದ್ದಿಗಳನ್ನು ತರಲಿದ್ದೇವೆ.
ನನ್ನಿ.....
*_~ಹುಲಿಹೊನ್ನ~_*
ಇಷ್ಟೆಲ್ಲಾ ತಿಳಿದುಕೊಳ್ಳಲು, ಇಷ್ಟೆಲ್ಲಾ ಬರೆಯಲು ಪ್ರೇರೇಪಿಸಿದ, ವಿಷಯದ ಅಧ್ಯಯನಕ್ಕೆ ಮಾರ್ಗದರ್ಶಿಯಾಗಿ ದಾರಿ ತೋರಿದ ಎಂ. ನಂಜುಂಡಸ್ವಾಮಿಯವರ "ಹೊಲಯರು ಮಾದರು ರಾಜರು", "ಭಾರತದ ಮೊದಲ ದೊರೆಗಳು",
ಫೇಸ್‌ಬುಕ್ ಪುಟವಾದ "ಹೊಲಯ ಮಾದಿಗರ ಹಿರಿಮೆ ಗರಿಮೆಗಳು"
https://m.facebook.com/holayamadigarahirimegarime
ಇವೆಲ್ಲಕ್ಕೂ ನಮನ ಸಲ್ಲಿಸಲು ಇಚ್ಛಿಸುತ್ತೇನೆ. ಅತ್ತ ಎಡಪಂಥಕ್ಕೂ ಜೋತು ಬೀಳದೆ, ಇತ್ತ ಬಲಪಂಥಕ್ಕೂ ಜೋತುಬೀಳದೆ ಸತ್ಯ ನಿಷ್ಟೂರಿಗಳಾಗಿ ಸತ್ಯಪಂಥಿಗಳಾಗಿ, ಹೊಲಯ ಮಾದಿಗರ ಇತಿಹಾಸದ ನೈಜ್ಯತೆಯನ್ನು ಅನಾವರಣ ಮಾಡುತ್ತಿರುವ ಎಂ. ನಂಜುಂಡಸ್ವಾಮಿ ಸರ್ ರವರಿಗೆ ನನ್ನ ವಿಶೇಷ ನಮನಗಳು.
ಫೇಸ್‌ಬುಕ್ ಪುಟವಾದ "ಹೊಲಯ ಮಾದಿಗರ ಹಿರಿಮೆ ಗರಿಮೆಗಳು"
https://m.facebook.com/holayamadigarahirimegarime
ಇವೆಲ್ಲಕ್ಕೂ ನಮನ ಸಲ್ಲಿಸಲು ಇಚ್ಛಿಸುತ್ತೇನೆ. ಅತ್ತ ಎಡಪಂಥಕ್ಕೂ ಜೋತು ಬೀಳದೆ, ಇತ್ತ ಬಲಪಂಥಕ್ಕೂ ಜೋತುಬೀಳದೆ ಸತ್ಯ ನಿಷ್ಟೂರಿಗಳಾಗಿ ಸತ್ಯಪಂಥಿಗಳಾಗಿ, ಹೊಲಯ ಮಾದಿಗರ ಇತಿಹಾಸದ ನೈಜ್ಯತೆಯನ್ನು ಅನಾವರಣ ಮಾಡುತ್ತಿರುವ ಎಂ. ನಂಜುಂಡಸ್ವಾಮಿ ಸರ್ ರವರಿಗೆ ನನ್ನ ವಿಶೇಷ ನಮನಗಳು.









